ETV Bharat / sports

ಹರಿಣಗಳ ವಿರುದ್ಧದ ಮೊದಲ ಟಿ20ಗೆ ಮಳೆ ಅಡ್ಡಿ: ಪಂದ್ಯ ರದ್ದು - ETV Bharath Karnataka

RSA vs IND 1st T20: ಡರ್ಬನ್​ನ ಕಿಂಗ್ಸ್‌ಮೀಡ್ ಕ್ರೀಡಾಂಗಣದಲ್ಲಿ ಮೊದಲ ಟಿ20ಗೆ ಉಭಯ ತಂಡಗಳು ಸಜ್ಜಾಗಿದ್ದು, ವರುಣ ಅಡ್ಡಿಪಡಿಸಿದ ಕಾರಣ ಒಂದು ಬಾಲ್​ ಕಾಣದೇ ಪಂದ್ಯ ರದ್ದಾಯಿತು.

South Africa vs India
South Africa vs India
author img

By ETV Bharat Karnataka Team

Published : Dec 10, 2023, 7:28 PM IST

Updated : Dec 10, 2023, 10:26 PM IST

ಡರ್ಬನ್​ (ದಕ್ಷಿಣ ಆಫ್ರಿಕಾ): 2024ರ ಟಿ20 ವಿಶ್ವಕಪ್​ ಹಿನ್ನೆಲೆಯಲ್ಲಿ ಮಹತ್ವ ಪಡೆದುಕೊಂಡಿದ್ದ ದಕ್ಷಿಣ ಆಫ್ರಿಕಾ ಪ್ರವಾಸದ ಟಿ20 ಸರಣಿಯ ಮೊದಲ ಪಂದ್ಯ ಮಳೆಯಿಂದ ರದ್ದಾಗಿದೆ. ಆಸ್ಟ್ರೇಲಿಯಾದ ವಿರುದ್ಧ ತವರಿನಲ್ಲಿ ಟಿ20 ಸರಣಿ ಜಯಿಸಿದ ಯುವ ಭಾರತದ ತಂಡ ದಕ್ಷಿಣ ಆಫ್ರಿಕಾದಲ್ಲಿ ಗೆಲುವಿನ ಉತ್ಸಾಹದಲ್ಲಿ ಮೈದಾನಕ್ಕಿಳಿಯಲು ಸಿದ್ಧತೆ ನಡೆಸಿತ್ತು.

ಎರಡನೇ ಟಿ20 ಡಿಸೆಂಬರ್​ 12 ರಂದು ಸೇಂಟ್ ಜಾರ್ಜ್ ಓವಲ್‌ ಮತ್ತು ಕೊನೆಯ ಪಂದ್ಯ ಡಿ.14 ರಂದು ವಾಂಡರರ್ಸ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಟಿ20 ಸರಣಿಯ ನಂತರ ಭಾರತ 3 ಪಂದ್ಯಗಳ ಏಕದಿನ ಸರಣಿ ಮತ್ತು 2 ಟೆಸ್ಟ್​ ಪಂದ್ಯವನ್ನು ಆಡಲಿದೆ.

ವಿಶ್ವಕಪ್​ ಮುನ್ನ ಪ್ರಮುಖ ಸರಣಿ: 2024ರ ಟಿ20 ವಿಶ್ವಕಪ್​​ಗೂ ಮುನ್ನ ಭಾರತ ವಿದೇಶದಲ್ಲಿ ಆಡುವ ಒಂದು ಸರಣಿ ಇದಾಗಿದೆ. ಇದಾದ ನಂತರ ಭಾರತ ತವರಿನಲ್ಲಿ ಅಫ್ಘಾನಿಸ್ತಾನದ ವಿರುದ್ಧ ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನು ಆಡಲಿದೆ. ಅದನ್ನು ಬಿಟ್ಟರೆ ಐಪಿಎಲ್​ ಪಂದ್ಯಗಳಲ್ಲಿ ಆಟಗಾರರು ಆಡಲಿದ್ದಾರೆ. ತವರು ಮೈದಾನದ ಹೊರತಾಗಿ ಆಟಗಾರರ ಪ್ರದರ್ಶನ ವೀಕ್ಷಿಸಲು ಇದು ಉತ್ತಮ ವೇದಿಕೆ ಆಗಿದೆ.

  • MATCH ABANDONED!

    Sadly, today’s KFC T20i game against India has been canceled. This is due to persistent rain in Durban 🌧️

    See you in Gqeberha! #SAvIND pic.twitter.com/BPJeea1Dd5

    — Proteas Men (@ProteasMenCSA) December 10, 2023 " class="align-text-top noRightClick twitterSection" data=" ">

ಯುವ ತಂಡ: ಈ ವರ್ಷ ಆಗಸ್ಟ್​ನಲ್ಲಿ ಭಾರತ ತಂಡ ವೆಸ್ಟ್​ ಇಂಡೀಸ್​ ಪ್ರವಾಸ ಮಾಡಿತ್ತು. ಈ ವೇಳೆಯೇ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಿ ಐಪಿಎಲ್​ನಲ್ಲಿ ಮಿಂಚಿದ್ದ ಪ್ರತಿಭೆಗಳಿಗೆ ಅವಕಾಶ ಮಾಡಿಕೊಡಲಾಗಿತ್ತು. ನಂತರ ಜಸ್ಪ್ರೀತ್​ ಬುಮ್ರಾ ನಾಯಕತ್ವದಲ್ಲಿ ಐರ್ಲೆಂಡ್​ ಪ್ರವಾಸ ಮತ್ತು ಏಷ್ಯನ್​ ಗೇಮ್ಸ್​ಗೆ ಯುವ ತಂಡವನ್ನು ಕಳಿಸಲಾಗಿತ್ತು.

ಹೀಗಾಗಿ ಯಶಸ್ವಿ ಜೈಸ್ವಾಲ್​, ರಿಂಕು ಸಿಂಗ್​​, ಜಿತೇಶ್​ ಶರ್ಮಾ, ತಿಲಕ್​ ವರ್ಮಾ ಮತ್ತು ರವಿ ಬಿಷ್ಣೋಯ್​ ಅವರಂತಹ ಪ್ರತಿಭೆಗಳಿಗೆ ಮಣೆ ಹಾಕಲಾಗಿತ್ತು. ಅಲ್ಲದೇ ಕಳೆದ ಕೆಲ ಸರಣಿಗೆ ಹಾರ್ದಿಕ್​ ಪಾಂಡ್ಯರನ್ನು ನಾಯಕರನ್ನಾಗಿ ಮಾಡಲಾಗಿತ್ತು. ಹೀಗಾಗಿ ಚುಟುಕು ಮಾದರಿಯ ಕ್ರಿಕೆಟ್​ಗೆ ಹೊಸ ತಲೆಮಾರಿನ ಆಟಗಾರರ ಇನ್ನೊಂದು ತಂಡವನ್ನು ಸಿದ್ಧಪಡಿಸಲಾಗಿತ್ತು.

ಹರಿಣಗಳಿಗೂ ಪ್ರಮುಖ ಸರಣಿ: ಟಿ20 ವಿಶ್ವಕಪ್​​ ಹಿನ್ನೆಲೆಯಲ್ಲಿ ದಕ್ಷಿಣ ಆಫ್ರಿಕಾಕ್ಕೂ ಇದು ಪ್ರಮುಖ ಸರಣಿ ಆಗಿದೆ. ಅದಕ್ಕಾಗಿ ಅನುಭವಿ ಆಡಮ್​​ ಮಾರ್ಕ್ರಾಮ್​ ಅವರ ನಾಯಕತ್ವದಲ್ಲಿ ಯುವ ತಂಡವನ್ನು ಸಿದ್ಧ ಪಡಿಸಲಾಗಿದೆ. ವಿಶ್ವಕಪ್​ ವೇಳೆಗೆ ಭಾರತದ ಸ್ಪಿನ್​ ದಾಳಿಯನ್ನು ಎದುರಿಸುವುದರಿಂದ ವೆಸ್ಟ್​ ಇಂಡೀಸ್​ ಮತ್ತು ಯುಎಸ್​ಎ ಪಿಚ್​ಗಳಲ್ಲಿ ಏಷ್ಯನ್​ ರಾಷ್ಟ್ರಗಳ ಬೌಲಿಂಗ್​​​ನ್ನು ಅರಿಯಲು ಸಹಾಯವಾಗುತ್ತದೆ.

ಇದನ್ನೂ ಓದಿ: ಪೋಷಕರಿಗೆ ಕನಸಿನ ಕಾರನ್ನು ಉಡುಗೊರೆಯಾಗಿ ನೀಡಲು ಬಯಸುತ್ತೇನೆ: ವೃಂದಾ ದಿನೇಶ್

Last Updated : Dec 10, 2023, 10:26 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.