ಅಹಮದಾಬಾದ್(ಗುಜರಾತ್): ಐಸಿಸಿ ಏಕದಿನ ವಿಶ್ವಕಪ್ ಸರಣಿಯ 42ನೇ ಪಂದ್ಯದಲ್ಲಿಂದು ಅಫ್ಘಾನಿಸ್ತಾನದ ವಿರುದ್ಧ ದಕ್ಷಿಣ ಆಫ್ರಿಕಾ 5 ವಿಕೆಟ್ಗಳ ಗೆಲುವು ದಾಖಲಿಸಿದೆ. ನರೇಂದ್ರ ಮೋದಿ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಅಫ್ಘಾನಿಸ್ತಾನ ನೀಡಿದ್ದ 245 ರನ್ಗಳ ಗುರಿಯನ್ನು ಬೆನ್ನಟ್ಟಿದ ಹರಿಣ ಪಡೆ, ಕ್ವಿಂಟನ್ ಡಿ ಕಾಕ್(41), ರಾಸ್ಸಿ ವ್ಯಾನ್ ಡೆರ್ ಡಸ್ಸೆನ್(76), ಆಂಡಿಲ್ ಫೆಹ್ಲುಕ್ವಾಯೊ(39) ಬ್ಯಾಟಿಂಗ್ ನೆರವಿನಿಂದ 47.3 ಓವರ್ಗಳಲ್ಲಿ 5 ವಿಕಟ್ ನಷ್ಟಕ್ಕೆ ಗುರಿಯನ್ನು ತಲುಪುವ ಮೂಲಕ ವಿಶ್ವಕಪ್ ಟೂರ್ನಿಯಲ್ಲಿ 7ನೇ ಗೆಲುವು ದಾಖಲಿಸಿತು.
-
Hashmatullah Shahidi won the toss and elected to bat first in Ahmedabad 🏏#CWC23 | #SAvAFG 📝: https://t.co/TEFv56QEl3 pic.twitter.com/UbNapaVu49
— ICC Cricket World Cup (@cricketworldcup) November 10, 2023 " class="align-text-top noRightClick twitterSection" data="
">Hashmatullah Shahidi won the toss and elected to bat first in Ahmedabad 🏏#CWC23 | #SAvAFG 📝: https://t.co/TEFv56QEl3 pic.twitter.com/UbNapaVu49
— ICC Cricket World Cup (@cricketworldcup) November 10, 2023Hashmatullah Shahidi won the toss and elected to bat first in Ahmedabad 🏏#CWC23 | #SAvAFG 📝: https://t.co/TEFv56QEl3 pic.twitter.com/UbNapaVu49
— ICC Cricket World Cup (@cricketworldcup) November 10, 2023
ಅಫ್ಘಾನ್ ಪರ ಮೊಹಮ್ಮದ್ ನಬಿ, ರಶೀದ್ ಖಾನ್ ತಲಾ ಎರಡು ವಿಕೆಟ್ ಪಡೆದರೆ, ಮುಜೀಬ್ ಉರ್ ರಹಮಾನ್ ಒಂದು ವಿಕೆಟ್ ಪಡೆದರು. ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಅಫ್ಘಾನ್ 50 ಓವರ್ಗಳಲ್ಲಿ 245 ರನ್ಗಳ ಕಲೆ ಹಾಕಿತ್ತು. ತಂಡದ ಪರ, ರಹಮಾನುಲ್ಲಾ ಗುರ್ಬಾಜ್(25), ಇಬ್ರಾಹಿಂ ಝದ್ರಾನ್(15) ರನ್ಗಳಿಸುವ ತವಕದಲ್ಲಿ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು. ಕ್ರೀಸ್ಗೆ ಬಂದ ನಾಯಕ ಹಶ್ಮತುಲ್ಲಾ ಶಾಹಿದಿ(2), ರಹಮತ್ ಶಾ(26), ಇಕ್ರಮ್ ಅಲಿಖಿಲ್(12), ಮೊಹಮ್ಮದ್ ನಬಿ(2) ಒಬ್ಬರ ಹಿಂದೊಬ್ಬರು ನಿರ್ಗಮಿಸುವ ಮೂಲಕ 116 ರನ್ಗಳಿಗೆ 6 ವಿಕೆಟ್ ಕಳೆದುಕೊಂಡ ತಂಡ ಸಂಕಷ್ಠಕ್ಕೆ ಸಿಲುಕಿತು. ಬಳಿಕ ಕ್ರೀಸ್ಗೆ ಬಂದ ರಶೀದ್ ಖಾನ್(14), ನೂರ್ ಅಹ್ಮದ್(26) ಕೂಡ ಹೆಚ್ಚಿನ ಸ್ಕೋರ್ ಕಲೆ ಹಾಕಲು ಹೋಗಿ ವಿಕೆಟ್ ಒಪ್ಪಿಸಿದರು.
ಮತ್ತೊಂದೆಡೆ ಅಜ್ಮತುಲ್ಲಾ ಒಮರ್ಜಾಯ್(97) ಕ್ರೀಸ್ಗೆ ಒಗ್ಗಿಕೊಂಡ ಅವರು 50 ಓವರ್ಗಳ ಮುಕ್ತಾಯದ ವೇಳೆಗೆ ತಂಡದ ಸ್ಕೋರ್ ಅನ್ನು 245ಕ್ಕೆ ಕೊಂಡೊಯ್ದು ಶತಕ ವಂಚಿತರಾದರೂ ಅಜೇಯರಾಗಿಯೇ ಉಳಿದರು. ದಕ್ಷಿಣ ಆಫ್ರಿಕಾ ಪರ ಜೆರಾಲ್ಡ್ ಕೊಯೆಟ್ಜಿ 4ವಿಕೆಟ್, ಆಂಡಿಲ್ ಫೆಹ್ಲುಕ್ವಾಯೊ 1, ಲುಂಗಿ ಎನ್ಗಿಡಿ, ಕೇಶವ್ ಮಹಾರಾಜ್ ತಲಾ ಎರಡು ವಿಕೆಟ್ ಪಡೆದರು.
ದಕ್ಷಿಣ ಆಫ್ರಿಕಾ ಈಗಾಗಲೇ ಅಧಿಕೃತವಾಗಿ ಸೆಮಿಫೈನಲ್ ಪ್ರವೇಶಿಸಿದ್ದು, ಅಫ್ಘಾನ್ ವಿರುದ್ಧದ ಇಂದಿನ ಪಂದ್ಯ ಅನೌಪಚಾರಿಕವಾಗಿತ್ತು. ಮತ್ತೊಂದೆಡೆ ಅಫ್ಘಾನ್ ತನ್ನ ಕೊನೆಯ ಪಂದ್ಯವನ್ನು ಸೋಲುವ ಮೂಲಕ ಟೂರ್ನಿಯಲ್ಲಿ ಆಡಿದ 9 ಪಂದ್ಯಗಳಲ್ಲಿ 4ರಲ್ಲಿ ಗೆದ್ದು 5ರಲ್ಲಿ ಸೋತು 8 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 6ನೇ ಸ್ಥಾನ ಭದ್ರಪಡಿಸಿಕೊಳ್ಳವ ಮೂಲಕ ವಿಶ್ವಕಪ್ ಟೂರ್ನಿಯನ್ನು ಮುಕ್ತಾಯಗೊಳಿಸಿತು.
ಇದನ್ನೂ ಓದಿ: ವಿಶ್ವಕಪ್ ಸೆಮಿ ಫೈನಲ್‌ನತ್ತ ಕಿವೀಸ್: ಪವಾಡ ನಡೆದರೆ ಮಾತ್ರ ಪಾಕ್ಗೆ ಚಾನ್ಸ್