ಪೋರ್ಟ್ ಎಲಿಜಬೆತ್: ಕೇಶವ್ ಮಹಾರಾಜ ಸ್ಪಿನ್ ಮೋಡಿಗೆ ಕಕ್ಕಾಬಿಕ್ಕಿಯಾದ ಪ್ರವಾಸಿ ಬಾಂಗ್ಲಾದೇಶ ತಂಡ ಹರಿಣ ಪಡೆ ನೀಡಿದ 423 ರನ್ಗಳ ಬೃಹತ್ ಗುರಿ ಬೆನ್ನಟ್ಟುವ ವೇಳೆ ಕೇವಲ 80ಕ್ಕೆ ಆಲೌಟ್ ಆಗಿ 332 ರನ್ಗಳ ಹೀನಾಯ ಸೋಲು ಕಂಡಿದೆ. ಮೊದಲ ಇನ್ನಿಂಗ್ಸ್ನಲ್ಲಿ ದಕ್ಷಿಣ ಆಫ್ರಿಕಾ 453 ರನ್ಗಳಿಸಿದ್ರೆ, ಇದಕ್ಕುತ್ತರವಾಗಿ ಬಾಂಗ್ಲಾದೇಶ 217 ರನ್ಗಳಿಗೆ ಆಲೌಟ್ ಆಗಿತ್ತು.
ಮೊದಲ ಇನ್ನಿಂಗ್ಸ್ನ 236 ರನ್ಗಳ ಬೃಹತ್ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಬ್ಯಾಟಿಂಗ್ ಮಾಡಿದ ಆತಿಥೇಯ ತಂಡ 176-6 ಕ್ಕೆ ಡಿಕ್ಲೇರ್ ಘೋಷಿಸಿಕೊಂಡು, ಬಾಂಗ್ಲಾದೇಶಕ್ಕೆ 423 ರನ್ಗಳ ಬೃಹತ್ ಗುರಿ ನೀಡಿತ್ತು. ಆದರೆ ಕೇಶವ್ ಮಹಾರಾಜ್(40ಕ್ಕೆ7) ಮತ್ತು ಸಿಮೋನ್ ಹಾರ್ಮನ್(34ಕ್ಕ3) ದಾಳಿಗೆ ಕುಸಿದ ಬಾಂಗ್ಲಾದೇಶ 80 ರನ್ಗಳಿಗೆ ಸರ್ವಪತನ ಕಂಡಿತು.
ಪಂದ್ಯದಲ್ಲಿ 9 ವಿಕೆಟ್ ಮತ್ತು 84 ರನ್ಗಳಿಸಿದ್ದ ಕೇಶವ್ ಮಹಾರಾಜ್ ಪಂದ್ಯಶ್ರೇಷ್ಠ ಮತ್ತು ಸರಣಿಯಲ್ಲಿ 16 ವಿಕೆಟ್ ಪಡೆದಿದ್ದಕ್ಕೆ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.
ಇದನ್ನೂ ಓದಿ:ಐಪಿಎಲ್ನಲ್ಲಿ ಚಹಲ್ ದಾಖಲೆ: ವೇಗವಾಗಿ 150 ವಿಕೆಟ್ ಪಡೆದ ಭಾರತೀಯ ಬೌಲರ್