ETV Bharat / sports

ಭಾರತ ವಿರುದ್ಧದ ಟೆಸ್ಟ್​ ಸರಣಿಗೆ ಬಲಿಷ್ಠ ತಂಡ ಪ್ರಕಟಿಸಿದ ದಕ್ಷಿಣ ಆಫ್ರಿಕಾ - ಭಾರತ ವಿರುದ್ಧ ಸರಣಿಗೆ ದಕ್ಷಿಣ ಆಫ್ರಿಕಾ ತಂಡ ಪ್ರಕಟ

ಭಾರತ ತಂಡ SENA ರಾಷ್ಟ್ರಗಳಲ್ಲಿ ಆಸ್ಟ್ರೇಲಿಯಾ, ಇಂಗ್ಲೆಂಡ್​ ಮತ್ತು ನ್ಯೂಜಿಲ್ಯಾಂಡ್​ನಲ್ಲಿ ಟೆಸ್ಟ್​ ಸರಣಿ ಗೆದ್ದಿದೆ. ಆದರೆ, ದಕ್ಷಿಣ ಆಫ್ರಿಕಾ ಮಾತ್ರ ಈವರೆಗೂ ಟೆಸ್ಟ್​ ಸರಣಿ ಜಯಿಸಿಲ್ಲ. ಆದರೆ, ಕಳೆದ ಎರಡು ವರ್ಷಗಳಲ್ಲಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್​ನಲ್ಲಿ ಸರಣಿ ಗೆದ್ದಿರುವುದರಿಂದ ಈ ಬಾರಿ ದಕ್ಷಿಣ ಆಫ್ರಿಕಾದಲ್ಲೂ ಇತಿಹಾಸ ನಿರ್ಮಿಸುವ ಉತ್ಸಾಹದಲ್ಲಿದೆ..

South Africa squad
ಭಾರತದ ಸರಣಿಗೆ ದಕ್ಷಿಣ ಆಫ್ರಿಕಾ ತಂಡ ಪ್ರಕಟ
author img

By

Published : Dec 7, 2021, 3:09 PM IST

ಕೇಪ್​ಟೌನ್ : ಡಿಸೆಂಬರ್​ 26ರಿಂದ ಭಾರತದ ವಿರುದ್ಧ ಆರಂಭವಾಗಲಿರುವ 3 ಪಂದ್ಯಗಳ ಟೆಸ್ಟ್​ ಸರಣಿಗೆ ದಕ್ಷಿಣ ಆಫ್ರಿಕಾ 21 ಸದಸ್ಯರ ತಂಡವನ್ನು ಪ್ರಕಟಿಸಿದೆ. ಡೀನ್​ ಎಲ್ಗರ್​ ಮುನ್ನಡೆಸಲಿರುವ ತಂಡದಲ್ಲಿ ಸೀಮಿತ ಓವರ್​ಗಳ ನಾಯಕ ಟೆಂಬ ಬವೂಮ ಉಪನಾಯಕನಾಗಿದ್ದಾರೆ.

ಕ್ವಿಂಟನ್ ಡಿಕಾಕ್​ ವಿಕೆಟ್ ಕೀಪರ್​ ಜವಾಬ್ದಾರಿ ನಿರ್ವಹಿಸಲಿದ್ದಾರೆ. ತಂಡದಲ್ಲಿ ಐಡೆನ್ ಮಾರ್ಕ್ರಮ್, ​ಕಗಿಸೋ ರಬಾಡ ಮತ್ತು ಎನ್ರಿವ್ ನಾರ್ಕಿಯಾ ಬೌಲಿಂಗ್​ ವಿಭಾಗದ ಬಲವಾಗಿದ್ದಾರೆ. ಮಗಾಲಾ, ರಿಕೆಲ್ಟನ್​ ಹೊಸ ಮುಖಗಳಾಗಿದ್ದಾರೆ.

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಈ ಸರಣಿ ಬಾಕ್ಸಿಂಗ್ ಡೇ ಟೆಸ್ಟ್​ ಮೂಲಕ ಸೆಂಚುರಿಯನ್​ನಲ್ಲಿ ಆರಂಭವಾಗಲಿದೆ. ಎರಡನೇ ಟೆಸ್ಟ್ ಪಂದ್ಯ ಹೊಸ ವರ್ಷದಲ್ಲಿ ಜನವರಿ 3ರಂದು ಜೋಹನ್ಸ್​ಬರ್ಗ್​ನಲ್ಲಿ ಮತ್ತು 3ನೇ ಪಂದ್ಯ ಜನವರಿ 11ರಲ್ಲಿ ಕೇಪ್​ಟೌನ್​ನಲ್ಲೂ ಆರಂಭವಾಗಲಿದೆ. ನಂತರ 3 ಪಂದ್ಯಗಳ ಏಕದಿನ ಸರಣಿ ನಡೆಯಲಿದೆ.

ಭಾರತ ತಂಡ SENA ರಾಷ್ಟ್ರಗಳಲ್ಲಿ ಆಸ್ಟ್ರೇಲಿಯಾ, ಇಂಗ್ಲೆಂಡ್​ ಮತ್ತು ನ್ಯೂಜಿಲ್ಯಾಂಡ್​ನಲ್ಲಿ ಟೆಸ್ಟ್​ ಸರಣಿ ಗೆದ್ದಿದೆ. ಆದರೆ, ದಕ್ಷಿಣ ಆಫ್ರಿಕಾ ಮಾತ್ರ ಈವರೆಗೂ ಟೆಸ್ಟ್​ ಸರಣಿ ಜಯಿಸಿಲ್ಲ. ಆದರೆ, ಕಳೆದ ಎರಡು ವರ್ಷಗಳಲ್ಲಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್​ನಲ್ಲಿ ಸರಣಿ ಗೆದ್ದಿರುವುದರಿಂದ ಈ ಬಾರಿ ದಕ್ಷಿಣ ಆಫ್ರಿಕಾದಲ್ಲೂ ಇತಿಹಾಸ ನಿರ್ಮಿಸುವ ಉತ್ಸಾಹದಲ್ಲಿದೆ.

ದಕ್ಷಿಣ ಆಫ್ರಿಕಾ ತಂಡ : ಡೀನ್ ಎಲ್ಗರ್ (ನಾಯಕ), ಟೆಂಬಾ ಬವುಮಾ (ಉಪನಾಯಕ), ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಕಗಿಸೊ ರಬಾಡ, ಸರೆಲ್ ಎರ್ವೀ, ಬ್ಯೂರನ್ ಹೆಂಡ್ರಿಕ್ಸ್, ಜಾರ್ಜ್ ಲಿಂಡೆ, ಕೇಶವ್ ಮಹಾರಾಜ್, ಲುಂಗಿ ಎಂಗಿಡಿ, ಐಡೆನ್ ಮಾರ್ಕ್ರಮ್, ವಿಯಾನ್ ಮಲ್ಡರ್, ಎನ್ರಿಚ್ ನಾರ್ಕಿಯಾ, ಕೀಗನ್ ಪೀಟರ್ಸನ್, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಕೈಲ್ ವೆರ್ರೆನ್ನೆ, ಮಾರ್ಕೊ ಜಾನ್ಸೆನ್, ಗ್ಲೆಂಟನ್ ಸ್ಟರ್ಮನ್, ಪ್ರೆನೆಲನ್ ಸುಬ್ರಾಯೆನ್, ಸಿಸಂಡಾ ಮಗಾಲಾ, ರಯಾನ್ ರಿಕೆಲ್ಟನ್, ಡುವಾನ್ನೆ ಒಲಿವಿಯರ್.

ಇದನ್ನೂ ಓದಿ:'2 ವರ್ಷಗಳೇ ಬೇಕಾಯ್ತು'; ಭಾರತ ತಂಡದ ಕೋಚ್ ಆಗಲು ದ್ರಾವಿಡ್​ರನ್ನು ಒಪ್ಪಿಸಿದ ಬಗೆಯನ್ನು ವಿವರಿಸಿದ ದಾದಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.