ನವದೆಹಲಿ : ಜುಲೈನಲ್ಲಿ ಭಾರತ ತಂಡ 3 ಏಕದಿನ ಪಂದ್ಯ ಮತ್ತು 5 ಟಿ20 ಪಂದ್ಯಗಳ ಸರಣಿಗಾಗಿ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಖಚಿತಪಡಿಸಿದ್ದಾರೆ. ಆದರೆ, ಐಪಿಎಲ್ ಮರು ಆಯೋಜನೆ ಸದ್ಯಕ್ಕೆ ದೂರವಾದ ಮಾತು ಎಂದು ಅವರು ಹೇಳಿದ್ದಾರೆ.
ಸ್ಫೋರ್ಟ್ಸ್ ಸ್ಟಾರ್ ಮ್ಯಾಗಜಿನ್ಗೆ ನೀಡಿದ ಸಂದರ್ಶನದಲ್ಲಿ ದಾದಾ ಈ ವಿಚಾರವನ್ನು ಖಚಿತ ಪಡಿಸಿದ್ದಾರೆ. ವಿಶ್ವಟೆಸ್ಟ್ ಚಾಂಪಿಯನ್ಶಿಪ್ ಜೂನ್ ತಿಂಗಳಲ್ಲೇ ಮುಗಿಯಲಿದೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಆಗಸ್ಟ್ 5ರಿಂದ ಆರಂಭಗೊಳ್ಳಲಿದೆ.
ಈ ಮಧ್ಯೆ ಜೂನ್-ಜುಲೈನಲ್ಲಿ ಐಪಿಎಲ್ ನಡೆಸಬಹುದು ಎಂದು ಊಹಾಪೋಹಗಳು ಕೇಳಿ ಬರುತ್ತಿವೆ ಎಂದು ಕೇಳಿದ್ದಕ್ಕೆ ಗಂಗೂಲಿ ಅದು ಅಸಾಧ್ಯವಾದದ್ದು ಎಂದಿದ್ದಾರೆ.
ಜುಲೈನಲ್ಲಿ ಭಾರತ ತಂಡ ಶ್ರೀಲಂಕಾಕ್ಕೆ 3 ಪಂದ್ಯಗಳ ಏಕದಿನ ಸರಣಿ ಮತ್ತು 5 ಟಿ20 ಪಂದ್ಯಗಳನ್ನಾಡಲು ಹೋಗಬೇಕಿದೆ. ಇನ್ನು, ಐಪಿಎಲ್ ಭಾರತದಲ್ಲಿ ನಡೆಯಲು ಸಾಧ್ಯವಿಲ್ಲ.
ಯಾಕೆಂದರೆ, 14 ದಿನಗಳ ಕ್ವಾರಂಟೈನ್ ನಡೆಸುವುದು ಕಠಿಣವಾಗಿದೆ. ಅಲ್ಲೆ ಐಪಿಎಲ್ ಪೂರ್ಣಗೊಳಿಸಲು ನಮಗೆ ಕಾಲಾವಕಾಶವನ್ನು ಹೊಂದುವುದರ ಬಗ್ಗೆ ಈಗಲೇ ತಿಳಿಸಲು ಸಾಧ್ಯವಿಲ್ಲ ಎಂದು ದಾದಾ ತಿಳಿಸಿದ್ದಾರೆ.
ಭಾರತ ತಂಡ ಜುಲೈನಲ್ಲಿ ಇಂಗ್ಲೆಂಡ್ನಲ್ಲಿರಲಿದೆ. ಭಾರತದಲ್ಲಿ ಕ್ವಾರಂಟೈನ್ ನಿಯಮಗಳು ಕಠಿಣವಾಗಿರುವುದರಿಂದ ವಾಪಸ್ ಬರುವ ಬದಲು ಅಲ್ಲೇ ಉಳಿಯುವ ಸಾಧ್ಯತೆಯಿದೆ.
ಇನ್ನು,ಶ್ರೀಲಂಕಾ ವಿರುದ್ದದ ಸರಣಿಗೆ ಧವನ್, ಭುವನೇಶ್ವರ್ ಅಂತಹ ಹಿರಿಯ ಆಟಗಾರರ ಜೊತೆಗೆ ಸೂರ್ಯಕುಮಾರ್, ಇಶಾನ್ ಕಿಶನ್, ಕುಲ್ದೀಪ್ ಯಾದವ್, ಪೃಥ್ವಿ ಶಾ ಸೇರಿದಂತೆ ಐಪಿಎಲ್ ಸ್ಟಾರ್ಗಳನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ. ಕರ್ನಾಟಕದ ದೇವದತ್ ಪಡಿಕ್ಕಲ್ಗೂ ಭಾರತ ತಂಡದ ಪರ ಪದಾರ್ಪಣೆ ಮಾಡುವ ಸಾಧ್ಯತೆ ಕೂಡ ಇದೆ.
ಇದನ್ನು ಓದಿ:ಕೊಹ್ಲಿ ಪಡೆ 3-2ರಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಗೆಲ್ಲಲು ಅವಕಾಶವಿದೆ : ದ್ರಾವಿಡ್ ಭವಿಷ್ಯ