ಭಾರತ ಮಹಿಳಾ ಕ್ರಿಕೆಟ್ ಸ್ಟಾರ್ ಪ್ಲೇಯರ್ ಸ್ಮೃತಿ ಮಂಧಾನಾ ವಿರಾಟ್ ಕೊಹ್ಲಿ, ಶಿಖರ್ ಧವನ್ ಅವರ ಸಾಧನೆಯ ಸಾಲಿಗೆ ಸೇರಿದ್ದಾರೆ. ಏಕದಿನದಲ್ಲಿ ಕಡಿಮೆ ಇನಿಂಗ್ಸ್ನಲ್ಲಿ ವೇಗದ 3 ಸಾವಿರ ರನ್ ಪೂರೈಸಿದ ಭಾರತದ ಮೊದಲ ಮಹಿಳಾ ಆಟಗಾರ್ತಿಯಾದರೆ, ಮೂರನೇ ಭಾರತೀಯ ಕ್ರಿಕೆಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಸ್ಮೃತಿ ಮಂಧಾನಾ ಅಂತಾರಾಷ್ಟ್ರೀಯ ಏಕದಿನದಲ್ಲಿ 76 ಇನಿಂಗ್ಸ್ನಲ್ಲಿ 3023 ರನ್ ಗಳಿಸಿದ್ದಾರೆ. ಈ ಮೂಲಕ ಮಹಿಳಾ ಕ್ರಿಕೆಟ್ನ ದಂತಕಥೆ ಮಿಥಾಲಿ ರಾಜ್ ಅವರನ್ನು ಹಿಂದಿಕ್ಕಿದರು. ಮಿಥಾಲಿ ರಾಜ್ 88 ಇನ್ನಿಂಗ್ಸ್‌ಗಳಲ್ಲಿ ಈ ಗಡಿ ದಾಟಿದ್ದರು.
-
3⃣0⃣0⃣0⃣ ODI runs & counting! 👏 👏
— BCCI Women (@BCCIWomen) September 21, 2022 " class="align-text-top noRightClick twitterSection" data="
Another landmark for @mandhana_smriti! 👍 👍
Follow the match ▶️ https://t.co/dmQVpiNH4h #TeamIndia | #ENGvIND pic.twitter.com/c5tQfqwTBu
">3⃣0⃣0⃣0⃣ ODI runs & counting! 👏 👏
— BCCI Women (@BCCIWomen) September 21, 2022
Another landmark for @mandhana_smriti! 👍 👍
Follow the match ▶️ https://t.co/dmQVpiNH4h #TeamIndia | #ENGvIND pic.twitter.com/c5tQfqwTBu3⃣0⃣0⃣0⃣ ODI runs & counting! 👏 👏
— BCCI Women (@BCCIWomen) September 21, 2022
Another landmark for @mandhana_smriti! 👍 👍
Follow the match ▶️ https://t.co/dmQVpiNH4h #TeamIndia | #ENGvIND pic.twitter.com/c5tQfqwTBu
ಕ್ಯಾಂಟರ್ಬರಿಯಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಎರಡನೇ ಏಕದಿನದ ಪಂದ್ಯದಲ್ಲಿ 40 ರನ್ ಗಳಿಸಿದ ಮಂಧಾನಾ ಈ ಸಾಧನೆ ಪೂರೈಸಿದರು. ಏಕದಿನದಲ್ಲಿ 43+ ಸರಾಸರಿ ಮತ್ತು 85 ರ ಸ್ಟ್ರೈಕ್ ರೇಟ್ ಹೊಂದಿದ್ದಾರೆ.
ಶಿಖರ್, ಕೊಹ್ಲಿ ಬಳಿಕದ ಪ್ಲೇಯರ್: ಭಾರತದ ಶಿಖರ್ ಧವನ್ ಮತ್ತು ಬ್ಯಾಟಿಂಗ್ ಕಿಂಗ್ ವಿರಾಟ್ ಕೊಹ್ಲಿ ನಂತರ ಸ್ಮೃತಿ ಮಂಧಾನಾ ಕಡಿಮೆ ಇನಿಂಗ್ಸ್ನಲ್ಲಿ 3 ಸಾವಿರ ರನ್ ಬಾರಿಸಿದ ಮೂರನೇ ಭಾರತದ ಕ್ರಿಕೆಟರ್ ಎಂಬ ದಾಖಲೆ ಬರೆದರು. ಧವನ್ 72 ಇನ್ನಿಂಗ್ಸ್‌ಗಳಲ್ಲಿ 3000 ಏಕದಿನ ರನ್‌ಗಳನ್ನು ಪೂರೈಸಿದರೆ, ಕೊಹ್ಲಿ 75 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದರು. ವಿಶೇಷ ಅಂದರೆ ಮಂಧಾನಾ ಮತ್ತು ಕೊಹ್ಲಿ ಮಧ್ಯೆ ಒಂದೇ ಇನಿಂಗ್ಸ್ ಅಂತರವಿದೆ.
2013 ರಲ್ಲಿ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಎಡಗೈ ಆರಂಭಿಕ ಆಟಗಾರ್ತಿ ಮಂಧಾನಾ 5 ಶತಕಗಳು ಮತ್ತು 24 ಅರ್ಧ ಶತಕಗಳನ್ನು ಬಾರಿಸಿದ್ದಾರೆ. ಮಾಜಿ ಆಟಗಾರ್ತಿ ಮಿಥಾಲಿ ರಾಜ್ ಮತ್ತು ಭಾರತ ಮಹಿಳಾ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಬಳಿಕ 3 ಸಾವಿರ ರನ್ ಗಡಿ ದಾಟಿದ ಮೂರನೇ ಭಾರತೀಯ ಮಹಿಳಾ ಆಟಗಾರ್ತಿಯಾಗಿದ್ದಾರೆ.
ಓದಿ: ಮಹಿಳಾ ಏಷ್ಯಾಕಪ್ನಲ್ಲಿ ಅ. 7ರಂದು ಭಾರತ-ಪಾಕಿಸ್ತಾನ ಫೈಟ್.. ಟೀಂ ಇಂಡಿಯಾ ಪ್ರಕಟ