ಕೊಲಂಬೊ: ಶ್ರೀಲಂಕಾ ವಿರುದ್ಧ ಭಾರತ ತಂಡ ಇಂದು ಮೊದಲ ಏಕದಿನ ಪಂದ್ಯವನ್ನಾಡುತ್ತಿದೆ. ಈ ಪಂದ್ಯದಲ್ಲಿ ಜಾರ್ಖಂಡ್ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಇಶಾನ್ ಕಿಶನ್ ಏಕದಿನ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದಾರೆ.
ವಿಶೇಷವೆಂದರೆ, ಇಂದು ಅವರು 23ನೇ ವಸಂತಕ್ಕೆ ಕಾಲಿಟ್ಟಿದ್ದು, ಭಾರತ ಪರ ಹುಟ್ಟಿದ ದಿನದಂದೇ ಪದಾರ್ಪಣೆ ಮಾಡಿದ 2ನೇ ಕ್ರಿಕೆಟಿಗ ಎಂಬ ಶ್ರೇಯಕ್ಕೂ ಪಾತ್ರರಾದರು.
ಇದೇ ವರ್ಷ ಇಂಗ್ಲೆಂಡ್ ವಿರುದ್ಧ ಟಿ20 ಕ್ರಿಕೆಟ್ ಆರಂಭಿಸಿದ್ದ ಇಶಾನ್ ಕಿಶನ್, ಚೊಚ್ಚಲ ಪಂದ್ಯದಲ್ಲೇ 32 ಎಸೆತಗಳಲ್ಲಿ ಭರ್ಜರಿ ಅರ್ಧಶತಕ ಸಿಡಿಸಿ ಮಿಂಚಿದ್ದರು. ಇದೀಗ 4 ತಿಂಗಳ ಅಂತರದಲ್ಲಿ ಏಕದಿನ ಕ್ರಿಕೆಟ್ಗೆ ಭಾರತದ 25ನೇ ವಿಕೆಟ್ ಕೀಪರ್ ಆಗಿ ಅಂಗಣಕ್ಕೆ ಇಳಿದಿದ್ದಾರೆ. 1990ರಲ್ಲಿ ಪಂಜಾಬ್ನ ಗುರುಶ್ರಾನ್ ಸಿಂಗ್ ತಮ್ಮ ಜನ್ಮದಿನದಂದೇ ಆಸ್ಟ್ರೇಲಿಯಾ ವಿರುದ್ಧ ಏಕದಿನ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು.
-
Moment to cherish! 😊 👍
— BCCI (@BCCI) July 18, 2021 " class="align-text-top noRightClick twitterSection" data="
A loud round of applause for @ishankishan51, who will make his ODI debut on his birthday, along with @surya_14kumar. 👏 👏 #TeamIndia #SLvIND
Follow the match 👉 https://t.co/rf0sHqdzSK pic.twitter.com/FITavg37PH
">Moment to cherish! 😊 👍
— BCCI (@BCCI) July 18, 2021
A loud round of applause for @ishankishan51, who will make his ODI debut on his birthday, along with @surya_14kumar. 👏 👏 #TeamIndia #SLvIND
Follow the match 👉 https://t.co/rf0sHqdzSK pic.twitter.com/FITavg37PHMoment to cherish! 😊 👍
— BCCI (@BCCI) July 18, 2021
A loud round of applause for @ishankishan51, who will make his ODI debut on his birthday, along with @surya_14kumar. 👏 👏 #TeamIndia #SLvIND
Follow the match 👉 https://t.co/rf0sHqdzSK pic.twitter.com/FITavg37PH
ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡುವ ಕಿಶನ್ ದೇಶಿ ಕ್ರಿಕೆಟ್ನಲ್ಲಿ ಜಾರ್ಖಂಡ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಇವರು 44 ಪ್ರಥಮ ದರ್ಜೆ ಪಂದ್ಯಗಳಿಂದ 2,665 ರನ್, 77 ಲಿಸ್ಟ್ ಎ ಪಂದ್ಯಗಳಿಂದ 2,549 ರನ್ ಮತ್ತು 102 ಟಿ20 ಪಂದ್ಯಗಳಿಂದ 2,505 ರನ್ ಕಲೆ ಹಾಕಿದ್ದಾರೆ.
ಕಿಶನ್ ಮುಂಬೈ ಇಂಡಿಯನ್ಸ್ ತಂಡದ ಸಹ ಆಟಗಾರ ಸೂರ್ಯಕುಮಾರ್ ಯಾದವ್ ಕೂಡ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದಾರೆ. 30 ವರ್ಷದ ಮುಂಬೈ ಆಟಗಾರ 77 ಪ್ರಥಮ ದರ್ಜೆ ಪಂದ್ಯಗಳಿಂದ 5,326 ರನ್, 98 ಲಿಸ್ಟ್ ಎ ಪಂದ್ಯಗಳಿಂದ 2,779 ರನ್ ಮತ್ತು 180 ಟಿ20 ಪಂದ್ಯಗಳಿಂದ 3,829 ರನ್ ಬಾರಿಸಿದ್ದರು.
ಇದನ್ನೂ ಓದಿ: ಕ್ರಿಕೆಟ್ ಲೋಕದ ಬ್ಯೂಟಿ ಕ್ವೀನ್ ಸ್ಮೃತಿ ಮಂಧಾನಾಗೆ ಹುಟ್ಟುಹಬ್ಬದ ಸಂಭ್ರಮ..