ETV Bharat / sports

ಗಿಲ್ ಯಾವುದೇ ಕ್ರಮಾಂಕದಲ್ಲಿ ಬ್ಯಾಟ್​ ಮಾಡಬಲ್ಲ ತಂತ್ರಗಾರಿಕೆ ಹೊಂದಿದ್ದಾರೆ: ತೆಂಡೂಲ್ಕರ್ ಪ್ರಶಂಸೆ

ತಂತ್ರಗಾರಿಕೆ ವಿಷಯಕ್ಕೆ ಬಂದರೆ, ವಿಭಿನ್ನವಾದ ಪಿಚ್​ಗಳು ನಿಮ್ಮನ್ನು ವಿಭಿನ್ನವಾಗಿ ಪರೀಕ್ಷಿಸುತ್ತವೆ. ನಾವು ಆಸ್ಟ್ರೇಲಿಯಾದಲ್ಲಿ ಬ್ರಿಸ್ಬೇನ್​ ಟೆಸ್ಟ್​ ಗೆದ್ದಿದ್ದನ್ನು ಇನ್ನಿಂಗ್ಸ್​ನಲ್ಲಿ ಶುಬ್ಮನ್​ ಗಿಲ್(91) ಅವರು ನಿರ್ಣಾಯಕ ಇನ್ನಿಂಗ್ಸ್ ಗಮನಿಸಿದರೆ, ಅವರು ಎಂತಹ ಪರಿಸ್ಥಿತಿಯಲ್ಲೂ ಆಡುವ ಅನುಕೂಲತೆ ಹೊಂದಿದ್ದಾರೆ ಎಂದು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ತೆಂಡೂಲ್ಕರ್ ಹೇಳಿದ್ದಾರೆ

Sachin Tendulkar on Shubman Gill
ಶುಬ್ಮನ್​ ಗಿಲ್​ ಬ್ಯಾಟಿಂಗ್ ತಂತ್ರಗಾರಿಕೆ
author img

By

Published : Dec 4, 2021, 5:16 PM IST

ಮುಂಬೈ: ರೋಹಿತ್ ಮತ್ತು ರಾಹುಲ್ ಅನುಪಸ್ಥಿತಿಯಲ್ಲಿ ಭಾರತ ತಂಡದ ಆರಂಭಿಕ ಸ್ಥಾನ ಪಡೆದಿರುವ ಶುಬ್ಮನ್​ಗಿಲ್​ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರುವ ಕ್ರಿಕೆಟ್​ ದಂತಕತೆ ಸಚಿನ್, ಯುವ ಬ್ಯಾಟರ್​ ಯಾವುದೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಸಾಮರ್ಥ್ಯ ಮತ್ತು ತಂತ್ರಗಾರಿಕೆ ಹೊಂದಿರುವುದಾಗಿ ತಮ್ಮ ಪ್ರದರ್ಶನ ಮೂಲಕವೇ ತೋರಿಸಿದ್ದಾರೆ ಎಂದು ತಿಳಿಸಿದ್ದಾರೆ.

ಶುಬ್ಮನ್​ ಗಿಲ್​ ಕಿವೀಸ್ ವಿರುದ್ಧದ ಮೊದಲ ಟೆಸ್ಟ್​ನಲ್ಲಿ 52 ರನ್​ ಗಳಿಸಿ, ಶತಕದತ್ತ ಮುನ್ನುಗ್ಗುತ್ತಿರುವಾಗ ಕೈಲ್ ಜೇಮಿಸನ್​ಗೆ ವಿಕೆಟ್​ ಒಪ್ಪಿಸಿದ್ದರು. ಇದೀಗ ಮುಂಬೈನಲ್ಲಿ ನಡೆಯುತ್ತಿರುವ 2ನೇ ಟೆಸ್ಟ್​ನಲ್ಲಿ 44 ರನ್​ಗಳಿಸಿದ ಲೆಫ್ಟ್ ಆಫ್ ಸ್ಪಿನ್ನರ್ ಅಜಾಜ್ ಪಟೇಲ್​ಗೆ ವಿಕೆಟ್​ ಒಪ್ಪಿಸಿದ್ದರು.

ಎರಡೂ ಟೆಸ್ಟ್​ ಪಂದ್ಯಗಳ ಪ್ರದರ್ಶನವನ್ನು ನೋಡಿದರೆ ಶುಬ್ಮನ್ ಗಿಲ್​ ಮುಂದಿನ ದಕ್ಷಿಣ ಆಫ್ರಿಕಾದಲ್ಲಿ ಒಂದು ವೇಳೆ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದರೆ ಉತ್ತಮ ಪ್ರದರ್ಶನ ತೋರಲಿದ್ದಾರೆ ಎಂದು ಸಚಿನ್ ತೆಂಡೂಲ್ಕರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

" ತಂತ್ರಗಾರಿಕೆ ವಿಷಯಕ್ಕೆ ಬಂದರೆ, ವಿಭಿನ್ನವಾದ ಪಿಚ್​ಗಳು ನಿಮ್ಮನ್ನು ವಿಭಿನ್ನವಾಗಿ ಪರೀಕ್ಷಿಸುತ್ತವೆ. ನಾವು ಆಸ್ಟ್ರೇಲಿಯಾದಲ್ಲಿ ಬ್ರಿಸ್ಬೇನ್​ ಟೆಸ್ಟ್​ ಗೆದ್ದದ್ದನ್ನು ಇನ್ನಿಂಗ್ಸ್​ನಲ್ಲಿ ಶುಬ್ಮನ್​ ಗಿಲ್(91) ಅವರು ನಿರ್ಣಾಯಕ ಇನ್ನಿಂಗ್ಸ್ ಗಮನಿಸಿದರೆ, ಅವರು ಎಂತಹ ಪರಿಸ್ಥಿತಿಯಲ್ಲೂ ಆಡುವ ಅನುಕೂಲತೆ ಹೊಂದಿದ್ದಾರೆ "ಎಂದು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ತೆಂಡೂಲ್ಕರ್ ಹೇಳಿದ್ದಾರೆ.

" ಗಿಲ್​ ಕಠಿಣ ಮತ್ತು ಬೌನ್ಸಿ ಟ್ಯ್ರಾಕ್​ನಲ್ಲಿ ಆಡಿದ ಅನುಭವ ಹೊಂದಿದ್ದಾರೆ. ಅವರು ಅಂತಹ ಪಿಚ್​ಗಳಲ್ಲಿ ಉತ್ತಮವಾಗಿ ಹೊಂದಿಕೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ. ಹಾಗಾಗಿ ಅವರಲ್ಲಿ ಯಾವುದೇ ತಂತ್ರಗಾರಿಯ ದೋಷಗಳಿವೆ ಎಂದು ನನಗನ್ನಿಸುವುದಿಲ್ಲ" ಎಂದಿದ್ದಾರೆ.

"ಆಸ್ಟ್ರೇಲಿಯಾದಲ್ಲಿ ಹೊಸ ಚೆಂಡಿನಲ್ಲಿ ಆಡುವಾಗ ಅವರು, ಅವರು ಲೈನ್​ ಹಿಂದೆ ನಿಂತು ಆಡುತ್ತಿದ್ದರೆಂದು ಭಾವಿಸುತ್ತೇನೆ, ಚೆಂಡು ಹಳೆಯದಾದಾಗ, ಚೆಂಡು ಎಷ್ಟು ಸ್ವಿಂಗ್ ಆಗುತ್ತಿದೆ, ಫೀಲ್ಡ್​ ಹೇಗೆ ಹೊಂದಿಸಲಾಗಿದೆ ಎನ್ನುವುದನ್ನು ತಿಳಿದುಕೊಳ್ಳುವುದಕ್ಕಾಗಿ ಲೈನ್​ ಪಕ್ಕದಲ್ಲಿ ಸ್ವಲ್ಪಮಟ್ಟಿಗೆ ನಿಲ್ಲುತ್ತಿದ್ದರು, ಇದನು ಅವರ ತಂತ್ರಗಾರಿಕೆ ತೋರಿಸುತ್ತದೆ" ಎಂದು ಮಾಸ್ಟರ್​ ಬ್ಲಾಸ್ಟರ್​ ವಿವರಿಸಿದ್ದಾರೆ.

ಶತಕದ ಬಗ್ಗೆ ಚಿಂತಿಸುವ ಅಗತ್ಯವಿಲ್ಲ:

ಶುಬ್ಮನ್​ ಉತ್ತಮವಾಗಿ ಆರಂಭ ಪಡೆಯುತ್ತಿದ್ದಾರೆ. ಅವರು ಇನ್ನಿಂಗ್ಸ್​ ಕಟ್ಟುವಾಗ ತುಂಬಾ ಉತ್ತಮವಾಗಿ ತೋರುತ್ತಾರೆ. 40 ರನ್​ಗಳನ್ನು ದೊಡ್ಡ ಮೊತ್ತವಾಗಿ ಪರಿವರ್ತಿಸುವ ಅಗತ್ಯವಿದೆ. ಆದರೆ, ಶತಕದ ಬಗ್ಗೆ ಯೋಚನೆ ಮಾಡಿ ಒತ್ತಡಕ್ಕೊಳಗಾಗುವ ಅಗತ್ಯವಿಲ್ಲ.

ಅವರಲ್ಲಿ ಹಸಿವಿದೆ. ಅವರು ತಾವೂ ಪಡೆದ ಆರಂಭವನ್ನು ದೊಡ್ಡ ಮೊತ್ತವಾಗಿ ಪರಿವರ್ತಿಸಬೇಕು. ಏಕಾಗ್ರತೆಯನ್ನು ಕಳೆದುಕೊಳ್ಳಬಾರದು. ಕಾನ್ಪುರ ಮತ್ತು ಮುಂಬೈನಲ್ಲಿ ಅವರು ಉತ್ತಮ ಎಸೆತಗಳನ್ನು ಎದುರಿಸಿದ್ದರು. ಅವರು ಕಲಿಕೆಯ ಹಂತದಲ್ಲಿದ್ದಾರೆ,ಇದನ್ನು ಪಾಠವಾಗಿ ತೆಗೆದುಕೊಳ್ಳಲಿದ್ದಾರೆ ಎಂದು ನೂರು ಶತಕಗಳ ವೀರ ಹೇಳಿದ್ದಾರೆ.

ಇದನ್ನೂ ಓದಿ:ಟೆಸ್ಟ್‌, ಏಕದಿನ ಪಂದ್ಯಗಳ ಸರಣಿಗಾಗಿ ಭಾರತ ತಂಡದಿಂದ ದ.ಆಫ್ರಿಕಾ ಪ್ರವಾಸ ; ಇನ್ನೂ ನಿರ್ಧಾರವಾಗದ ಟಿ-20 ವೇಳಾಪಟ್ಟಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.