ETV Bharat / sports

Shubman Gill: 24ನೇ ವಸಂತಕ್ಕೆ ಕಾಲಿಟ್ಟ ಭಾರತದ ಭರವಸೆಯ ಬ್ಯಾಟರ್​ ಗಿಲ್.. ಪ್ರಿನ್ಸ್​​ ಆಟದ ದಾಖಲೆಗಳ ಒಂದು ನೋಟ.. ​ - ETV Bharath Kannada news

ಭಾರತೀಯ ಬ್ಯಾಟಿಂಗ್ ಶ್ರೇಷ್ಠ ವಿರಾಟ್ ಕೊಹ್ಲಿಯ ಉತ್ತರಾಧಿಕಾರಿ ಎಂದೇ ಶುಭಮನ್​ ಗಿಲ್​ ಅವರನ್ನು ವಿಶ್ವ ಕ್ರಿಕೆಟ್​ ನೋಡುತ್ತಿದೆ. ಈ ಯುವ ಬ್ಯಾಟರ್​ಗೆ ಇಂದು ಜನ್ಮದಿನದ ಸಂಭ್ರಮ..

Shubman Gill
Shubman Gill
author img

By ETV Bharat Karnataka Team

Published : Sep 8, 2023, 3:44 PM IST

ಭಾರತ ತಂಡ ಭರವಸೆಯ ಯುವ ಬ್ಯಾಟರ್​ ಶುಭಮನ್​ ಗಿಲ್​ ಇಂದು 24ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ವಿರಾಟ್​ ರನ್​ ಟೀಮ್​ ಇಂಡಿಯಾದಲ್ಲಿ ಕಿಂಗ್​ ಕೊಹ್ಲಿ ಎಂದು ಕರೆದರೆ, ಶುಭಮನ್​ ಗಿಲ್​ ಅವರನ್ನು ಪ್ರಿನ್ಸ್​ ಎಂದೇ ಸಂಭೋದಿಸಲಾಗುತ್ತಿದೆ. ವಿರಾಟ್​ ರೀತಿಯಲ್ಲೇ ತಂಡದಲ್ಲಿ ಈ ಬ್ಯಾಟರ್​​ ಭರವಸೆ ಮೂಡಿಸಿದ್ದಾರೆ. ತಮ್ಮ ಪ್ರಭಾವಿ ಫಾರ್ಮ್​ನಿಂದ ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಮೂರನೇ ಸ್ಥಾನಕ್ಕೇರಿದ್ದಾರೆ.

  • 5️⃣8️⃣ intl. matches
    2️⃣7️⃣8️⃣4️⃣ intl. runs
    Youngest ODI double-centurion (in Men's cricket) 🔝
    Youngest all-format centurion in Men's intl. cricket 👌

    Here's wishing Shubman Gill a very happy birthday 👏 🎂#TeamIndia pic.twitter.com/BAaXEBClRN

    — BCCI (@BCCI) September 8, 2023 " class="align-text-top noRightClick twitterSection" data=" ">

ಈಗ ವಿಶ್ವದ ಅತ್ಯುತ್ತಮ ಆಟಗಾರರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿರುವ ಬ್ಯಾಟರ್, 2019 ರಲ್ಲಿ ತಮ್ಮ ಅಂತಾರಾಷ್ಟ್ರೀಯ ಪಂದ್ಯಕ್ಕೆ ಚೊಚ್ಚಲ ಪ್ರವೇಶ ಮಾಡಿದರು. ಅಂದಿನಿಂದ, ಈ ಡ್ಯಾಶಿಂಗ್ ಸ್ಟ್ರೋಕ್-ಪ್ಲೇಯರ್ ವರ್ಷದಿಂದ ವರ್ಷಕ್ಕೆ ಉತ್ತಮ ಪ್ರದರ್ಶನ ನೀಡುತ್ತಾ ಬರುತ್ತಿರುವ ಗಿಲ್ ಅವರನ್ನು ಪ್ರಸ್ತುತ ಭಾರತೀಯ ಬ್ಯಾಟಿಂಗ್ ಶ್ರೇಷ್ಠ ವಿರಾಟ್ ಕೊಹ್ಲಿಯ ಉತ್ತರಾಧಿಕಾರಿ ಎಂದು ಪರಿಗಣಿಸಲಾಗಿದೆ.

  • Happy birthday Gill sahab 🎂 congratulations on the World Cup call-up!

    Hope you score loads of runs with your mighty bat and your even mightier determination 💪🏻⚡️god bless, lots of love ❤️ @ShubmanGill pic.twitter.com/6LU2ptUD6W

    — Yuvraj Singh (@YUVSTRONG12) September 8, 2023 " class="align-text-top noRightClick twitterSection" data=" ">

2018ರಲ್ಲಿ ಭಾರತದ ಹತ್ತೊಂಬತ್ತು ವರ್ಷದೊಳಗಿನವರ ವಿಶ್ವಕಪ್ ವಿಜೇತ ತಂಡದಲ್ಲಿ ಪ್ರಮುಖ ಆಟಗಾರನಾಗಿ ಗಿಲ್​ ಕಾಣಿಸಿಕೊಂಡಿದ್ದರು. ಈ ವಿಶ್ವಕಪ್​ನಲ್ಲಿ ಉಪನಾಯಕನಾಗಿ ಆರು ಪಂದ್ಯಗಳಲ್ಲಿ, 124.00 ಸರಾಸರಿಯಲ್ಲಿ 372 ರನ್ ಗಳಿಸಿದರು. ಐದು ಇನ್ನಿಂಗ್ಸ್‌ಗಳಲ್ಲಿ ಒಂದು ಶತಕ ಮತ್ತು ಮೂರು ಅರ್ಧಶತಕಗಳನ್ನು ಗಳಿಸಿ ಗಮನ ಸೆಳೆದಿದ್ದರು. ಸೆಮಿಫೈನಲ್‌ನಲ್ಲಿ ಪಾಕಿಸ್ತಾನದ ವಿರುದ್ಧ 102 ರನ್‌ಗಳ ಅತ್ಯುತ್ತಮ ಸ್ಕೋರ್‌ ಆಗಿದೆ. 19 ವರ್ಷ ಒಳಗಿನವರ 2018ರ ವಿಶ್ವಕಪ್​ನಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿ ಮೊದಲಿಗ, ಒಟ್ಟಾರೆ ಎರಡನೇ ಬ್ಯಾಟರ್​ ಮತ್ತು 'ಪ್ಲೇಯರ್ ಆಫ್ ದಿ ಸೀರೀಸ್' ಪ್ರಶಸ್ತಿ ವಿಜೇತ.

  • Happy Birthday to cricket star, Shubman Gill🌟

    5️⃣8️⃣ intl. matches 2️⃣7️⃣8️⃣4️⃣ intl. runs, he's already made his mark:

    Youngest ODI double-centurion 🔥
    Youngest all-format centurion🔥
    💯in Test, T20I, IPL
    U-19 World Cup Player of the Tournament🏆#ShubmanGill #India #AsiaCup2023 pic.twitter.com/PPU31p4UZy

    — ICC Asia Cricket (@ICCAsiaCricket) September 8, 2023 " class="align-text-top noRightClick twitterSection" data=" ">

ಅವಿಸ್ಮರಣೀಯ ಟೆಸ್ಟ್​ ಡೆಬ್ಯು: 2021ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್​ - ಗವಾಸ್ಕರ್​ ಟ್ರೋಫಿಯಲ್ಲಿ ಗಿಲ್​ ತಮ್ಮ ಅದ್ಭುತ ಟೆಸ್ಟ್​ ಪಾದಾರ್ಪಣೆಯನ್ನು ಮಾಡಿದರು. ಅಂದಿನಿಂದ ಭಾರತದ ಮೂರು ಮಾದರಿಯ ಕ್ರಿಕೆಟ್​ನ ಆರಂಭಿಕ ಆಟಗಾರರಾಗಿ ಸ್ಥಾನ ಪಡೆದರು. ಈ ಟೆಸ್ಟ್ ಸರಣಿಯಲ್ಲಿ ಗಿಲ್​ ಮೂರು ಪಂದ್ಯಗಳಿಂದ 51.80 ಸರಾಸರಿಯಲ್ಲಿ 259 ರನ್ ಗಳಿಸಿದರು. ಅವರು ಆರು ಇನ್ನಿಂಗ್ಸ್‌ಗಳಲ್ಲಿ ಎರಡು ಅರ್ಧ-ಶತಕಗಳನ್ನು ಗಳಿಸಿದರು, ಅಂತಿಮ ಟೆಸ್ಟ್‌ನಲ್ಲಿ ಐತಿಹಾಸಿಕ ಗೆಲುವಿನ ಸಮಯದಲ್ಲಿ ಗಬ್ಬಾದಲ್ಲಿ ಅವರ 91 ರನ್‌ಗಳನ್ನು ಆಸ್ಟ್ರೇಲಿಯಾದಲ್ಲಿ ಭಾರತೀಯ ಆಟಗಾರನ ಅತ್ಯುತ್ತಮ ಇನ್ನಿಂಗ್ಸ್‌ಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಆಸಿಸ್​ನ ಪ್ರಭಾವಿ ಬೌಲರ್​ಗಳಾದ ಪ್ಯಾಟ್ ಕಮ್ಮಿನ್ಸ್, ಜೋಶ್ ಹೇಜಲ್‌ವುಡ್, ಮಿಚೆಲ್ ಸ್ಟಾರ್ಕ್ ಮತ್ತು ನಾಥನ್ ಲಿಯಾನ್‌ರ ದಾಳಿ ದಿಟ್ಟವಾಗಿ ಗಿಲ್​ ಎದುರಿಸಿದ್ದು ದಿಗ್ಗಜ ಕ್ರಿಕೆಟಿಗರ ಮೆಚ್ಚುಗೆಗೆ ಪಾತ್ರವಾಯಿತು.

ಕ್ರಿಕೆಟ್​ ವೃತ್ತಿ ಜೀವನ: ಗಿಲ್ 18 ಟೆಸ್ಟ್‌ಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದು, 32.20 ರ ಸರಾಸರಿಯಲ್ಲಿ 966 ರನ್ ಗಳಿಸಿದ್ದಾರೆ. ಅವರು 33 ಇನ್ನಿಂಗ್ಸ್‌ಗಳಲ್ಲಿ ಎರಡು ಶತಕ ಮತ್ತು ನಾಲ್ಕು ಅರ್ಧಶತಕಗಳನ್ನು ಗಳಿಸಿ ಅತ್ಯುತ್ತಮ ಸ್ಕೋರ್ 128 ಆಗಿದೆ. ಏಕದಿನದಲ್ಲಿ ಗಿಲ್ ಅವರು ತಮ್ಮ ಅದ್ಭುತ ಫಾರ್ಮ್​ನ್ನು ತೋರಿದ್ದಾರೆ. 29 ಏಕದಿನದಿಂದ 63.08 ಸರಾಸರಿಯಲ್ಲಿ 1,514 ರನ್ ಗಳಿಸಿದ್ದಾರೆ. ಅವರು 29 ಇನ್ನಿಂಗ್ಸ್‌ಗಳಲ್ಲಿ ನಾಲ್ಕು ಶತಕಗಳು ಮತ್ತು ಏಳು ಅರ್ಧಶತಕಗಳನ್ನು ಗಳಿಸಿದ್ದು, 208 ಅತ್ಯುತ್ತಮ ಸ್ಕೋರ್ ಆಗಿದೆ. ಗಿಲ್ ಜನವರಿಯಲ್ಲಿ ನ್ಯೂಜಿಲ್ಯಾಂಡ್​ ವಿರುದ್ಧ ದ್ವಿಶತಕ ಸಿಡಿಸಿದ್ದರು. ಇದು ಭಾರತದ ಏಕದಿನ ಇತಿಹಾಸದಲ್ಲಿ ದ್ವಿಶತಕ ಗಳಿಸಿದ ಅತ್ಯಂತ ಕಿರಿಯ ಬ್ಯಾಟರ್​ ಎಂಬ ಖ್ಯಾತಿಗೆ ಒಳಗಾದರು. ಗಿಲ್​ 11 ಟಿ20 ಪಂದ್ಯಗಳಲ್ಲಿ 30.40 ರ ಸರಾಸರಿಯಲ್ಲಿ ಮತ್ತು 146 ಸ್ಟ್ರೈಕ್ ರೇಟ್‌ನಲ್ಲಿ 304 ರನ್ ಗಳಿಸಿದ್ದು, ಒಂದು ಶತಕ, ಅರ್ಧಶತಕ ಗಳಿಸಿದ್ದಾರೆ. ಭಾರತದ ಪರ ಟಿ-20ಯಲ್ಲಿ ಶತಕ ಸಿಡಿಸಿದ ಅತ್ಯಂತ ಕಿರಿಯ ಆಟಗಾರ ಹೆಸರನ್ನು ದಾಖಲಿಸಿದ್ದಾರೆ. ಅಲ್ಲದೇ 23 ನೇ ವಯಸ್ಸಿನಲ್ಲಿ ಮೂರು ಮಾದರಿಯಲ್ಲಿ ಶತಕಗಳಿಸಿದ ಆಟಗಾರ ಎಂಬ ದಾಖಲೆ ಬರೆದಿದ್ದಾರೆ.

ಒಟ್ಟಾರೆ 58 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ, ಅವರು 73 ಇನ್ನಿಂಗ್ಸ್‌ಗಳಲ್ಲಿ ಏಳು ಶತಕಗಳು ಮತ್ತು 12 ಅರ್ಧ ಶತಕಗಳೊಂದಿಗೆ 43.50 ರ ಸರಾಸರಿಯಲ್ಲಿ 2,784 ರನ್ ಗಳಿಸಿದ್ದಾರೆ ಮತ್ತು 208 ರ ಅತ್ಯುತ್ತಮ ಸ್ಕೋರ್ ಗಳಿಸಿದ್ದಾರೆ. ವಿಶ್ವ ಕ್ರಿಕೆಟ್‌ನಲ್ಲಿ ಸಾರ್ವಕಾಲಿಕ ಶ್ರೇಷ್ಠ ಬ್ಯಾಟರ್​ ಆಗುವ ಭವಿಷ್ಯದ ಹಾದಿಯತ್ತ ಗಿಲ್​ ಸಾಗುತ್ತಿದ್ದಾರೆ.

ಶುಭಮನ್ ಗಿಲ್ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಮತ್ತು ಗುಜರಾತ್ ಟೈಟಾನ್ಸ್ (ಜಿಟಿ) ತಂಡವನ್ನು ಪ್ರತಿನಿಧಿಸಿದ್ದಾರೆ. 91 ಪಂದ್ಯಗಳಲ್ಲಿ, ಅವರು ಮೂರು ಶತಕಗಳು ಮತ್ತು 18 ಅರ್ಧಶತಕಗಳೊಂದಿಗೆ 37.70 ರ ಸರಾಸರಿ ಮತ್ತು 134.07 ರ ಸ್ಟ್ರೈಕ್ ರೇಟ್‌ನಲ್ಲಿ 2,790 ರನ್ ಗಳಿಸಿದ್ದಾರೆ. ಅವರ ಉತ್ತಮ ಸ್ಕೋರ್ 129 ಆಗಿದೆ.

ಇದನ್ನೂ ಓದಿ: ಯುಎಸ್​ ಓಪನ್‌ ಡಬಲ್ಸ್‌: ಫೈನಲ್​ ಪ್ರವೇಶಿಸಿದ ಬೋಪಣ್ಣ​ ಜೋಡಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.