ನವದೆಹಲಿ: ಭಾರತ ಕ್ರಿಕೆಟ್ ತಂಡದ ಯುವ ಆಟಗಾರ ಶುಭಮನ್ ಗಿಲ್ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಭರವಸೆಯ ಆಟಗಾರ ಆಗಿದ್ದಾರೆ. ಭಾರತದ ಮೂರು ಮಾದರಿಯ ತಂಡದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಹೀಗಾಗಿ ಗಿಲ್ನ್ನು "ಪ್ರಿನ್ಸ್" ಎಂದೇ ಕರೆಯಲಾಗುತ್ತಿದೆ. ವಿರಾಟ್ ನಂತರ ಭಾರತ ತಂಡದಲ್ಲಿ ಉತ್ತಮ ಬ್ಯಾಟರ್ ಆಗಿ ಬೇಳೆಯಲಿದ್ದಾರೆ ಎಂದು ದಿಗ್ಗಜ ಆಟಗಾರರು ಅಭಿಪ್ರಾಯ ಪಡುತ್ತಿದ್ದಾರೆ.
-
All the Indian players who have appeared in the Yo-Yo Test have passed - most of them scored between 16.5 to 18 [PTI]
— Johns. (@CricCrazyJohns) August 25, 2023 " class="align-text-top noRightClick twitterSection" data="
- Gill has the highest with 18.7 pic.twitter.com/T1n2Vg26dw
">All the Indian players who have appeared in the Yo-Yo Test have passed - most of them scored between 16.5 to 18 [PTI]
— Johns. (@CricCrazyJohns) August 25, 2023
- Gill has the highest with 18.7 pic.twitter.com/T1n2Vg26dwAll the Indian players who have appeared in the Yo-Yo Test have passed - most of them scored between 16.5 to 18 [PTI]
— Johns. (@CricCrazyJohns) August 25, 2023
- Gill has the highest with 18.7 pic.twitter.com/T1n2Vg26dw
ಇದಕ್ಕೆ ಪುಷ್ಟಿ ನೀಡುವಂತೆ ಗಿಲ್ ತಮ್ಮ ಮೊನಚಾದ ಪ್ರದರ್ಶನವನ್ನು ತಂಡದಲ್ಲಿ ನೀಡುತ್ತಿದ್ದಾರೆ. ಇದೇ ತಿಂಗಳಾಂತ್ಯದಿಂದ ಆರಂಭವಾಗಲಿರುವ ಏಷ್ಯಾಕಪ್ನಲ್ಲಿ ರೋಹಿತ್ ಶರ್ಮಾ ಅವರ ಜೊತೆಗೆ ಆರಂಭಿಕರಾಗಿ ಮೈದಾನಕ್ಕಿಳಿಯಲಿದ್ದಾರೆ. ಇದಲ್ಲದೇ ಆಸ್ಟ್ರೇಲಿಯಾ ಎದುರಿನ ಏಕದಿನ ಸರಣಿ ಮತ್ತು ವಿಶ್ವಕಪ್ನಲ್ಲೂ ಆರಂಭಿಕರಾಗಿ ತಂಡದಲ್ಲಿ ಪ್ರದರ್ಶನ ನೀಡಲಿದ್ದಾರೆ. ಈ ಎಲ್ಲ ಏಕದಿನ ಸರಣಿಯಲ್ಲಿ ಗಿಲ್ ಬ್ಯಾಟ್ನಿಂದ ದೊಡ್ಡ ಮೊತ್ತದ ನಿರೀಕ್ಷೆಯೇ ಇದೆ.
ಭಾರತ ತಂಡ ಮುಂದಿನ ಮೂರು ತಿಂಗಳ ಕಾಲ ಏಕದಿನ ಕ್ರಿಕೆಟ್ನಲ್ಲಿ ಸಕ್ರೀಯವಾಗಿರಲಿದ್ದು, ಇದಕ್ಕಾಗಿ ಆಟಗಾರರ ಫಿಟ್ನೆಸ್ ತಿಳಿದುಕೊಳ್ಳಲು ಯೋ-ಯೋ ಪರೀಕ್ಷೆಯನ್ನು ಮಾಡಲಾಗುತ್ತಿದೆ. ಏಷ್ಯಾಕಪ್ಗೆ ತೆರಳುವ ತಂಡದ ಆಟಗಾರರು ಈ ಪರೀಕ್ಷೆಗೆ ಒಳಗಾಗಿದ್ದಾರೆ. ಈ ಪರೀಕ್ಷೆಯಲ್ಲಿ ಎಲ್ಲರೂ ಪಾಸ್ ಆಗಿದ್ದಾರೆ ಎಂಬ ಮಾಹಿತಿಯನ್ನು ಬಿಸಿಸಿಯ ಮೂಲಗಳು ತಿಳಿಸಿವೆ. ಇದರಲ್ಲಿ ವಿರಾಟ್ ಕೊಹ್ಲಿ 17.2 ಅಂಕವನ್ನು ಪಡೆದಿದ್ದಾರೆ. ಶುಭಮನ್ ಗಿಲ್ 18.7 ಅಂಕವನ್ನು ಪಡೆದು ಟಾಪ್ ಸ್ಕೋರರ್ ಎಂದು ತಿಳಿದು ಬಂದಿದೆ. ಬಿಸಿಸಿಐ 16.5 ಅನ್ನು ಅರ್ಹತಾ ಮಟ್ಟ ಎಂದು ಸೂಚಿಸಿತ್ತು.
ಏಷ್ಯಾಕಪ್ ತಂಡದಲ್ಲಿರುವ ಜಸ್ಪ್ರಿತ್ ಬುಮ್ರಾ, ಪ್ರಸಿದ್ಧ್ ಕೃಷ್ಣ, ತಿಲಕ್ ವರ್ಮ, ಸಂಜು ಸ್ಯಾಮ್ಸನ್ ಇಂದು ಐರ್ಲೆಂಡ್ನಿಂದ ಮರಳಲಿದ್ದು, ತಂಡವನ್ನು ಸೇರಿಕೊಳ್ಳಲಿದ್ದಾರೆ. ಉಳಿದಂತೆ ಸಂಪೂರ್ಣವಾಗಿ ಚೇತರಿಸಿಕೊಳ್ಳದ ಕೆ ಎಲ್ ರಾಹುಲ್ ಅವರ ಯೋ-ಯೋ ಟೆಸ್ಟ್ ಸಹ ಬಾಕಿ ಇದೆ. ಮಿಕ್ಕಂತೆ ಉಳಿದ ಎಲ್ಲ ಆಟಗಾರರು ಬಿಸಿಸಿಐ ನಿಗದಿ ಪಡಿಸಿದ ಅರ್ಹತಾ ಅಂಕವನ್ನು ಸಾಧಿಸಿದ್ದಾರೆ ಎನ್ನಲಾಗಿದೆ.
ಎನ್ಸಿಎಯಲ್ಲಿ ಭರ್ಜರಿ ತಯಾರಿ: ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್ಸಿಎ)ಯಲ್ಲಿ ಆಟಗಾರರು ಏಷ್ಯಾಕಪ್ಗೆ ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಮೂಲಗಳಿಂದ ಸಿಕ್ಕ ಮಾಹಿತಿಯ ಪ್ರಕಾರ 13 ರಿಂದ 15 ನೆಟ್ ಬೌಲರ್ಗಳನ್ನು ಆಟಗಾರರ ಎದುರಿಸುತ್ತಿದ್ದಾರೆ. ವಿಶ್ವಕಪ್ ಮತ್ತು ಏಷ್ಯಾಕಪ್ ಹಿನ್ನಲೆಯಲ್ಲಿ ತಯಾರಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಅನಿಕೇತ್ ಚೌಧರಿ, ಉಮ್ರಾನ್ ಮಲಿಕ್, ಕುಲದೀಪ್ ಸೇನ್, ಯಶ್ ದಯಾಳ್, ಸಾಯಿ ಕಿಶೋರ್, ರಾಹುಲ್ ಚಾಹರ್, ತುಷಾರ್ ದೇಶಪಾಂಡೆ ಸೇರಿದಂತೆ ಇತರರು ಬೌಲಿಂಗ್ ಮಾಡುತ್ತಿದ್ದಾರೆ.
ಏಷ್ಯಾಕಪ್ಗಾಗಿ ಬೆಂಗಳೂರಿನಲ್ಲಿ 24 ರಿಂದ ಅಭ್ಯಾಸವನ್ನು ತಂಡ ಆರಂಭಿಸಿದೆ. 29ರ ವರೆಗೆ ತಯಾರಿಗಳು ನಡೆಯಲಿದ್ದು, 30 ರಂದು ಭಾರತ ತಂಡ ಶ್ರೀಲಂಕಾಗೆ ತೆರಳಲಿದೆ. ಭಾರತ ಏಷ್ಯಾಕಪ್ನ ಮೊದಲ ಪಂದ್ಯವನ್ನು ಸಪ್ಟೆಂಬರ್ 2 ರಂದು ಪಾಕಿಸ್ತಾನದ ವಿರುದ್ಧ ಕ್ಯಾಂಡಿಯಲ್ಲಿ ಆಡಲಿದೆ.
ಇದನ್ನೂ ಓದಿ: ಕೌಂಟಿ ಕ್ರಿಕೆಟ್: ಎಸೆಕ್ಸ್ ತಂಡ ಸೇರಿಕೊಂಡ ಉಮೇಶ್ ಯಾದವ್