ನವದೆಹಲಿ: ಬ್ಯಾಕ್ ಟು ಬ್ಯಾಕ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿರುವ ಶುಭಮನ್ ಗಿಲ್ ಆಟಕ್ಕೆ ಎಲ್ಲಾ ಕ್ರಿಕೆಟ್ ಪ್ರೇಮಿಗಳು ತಲೆ ಬಾಗುತ್ತಿದ್ದಾರೆ. ಅಲ್ಲದೇ ಕ್ರಿಕೆಟ್ ದಿಗ್ಗಜರೂ ಸಹ ದ್ವಿಶತಕ ವೀರನ ರನ್ಗಳಿಕೆ ಬಗ್ಗೆ ಹೋಗಳಿಕೆಯ ಮಾತುಗಳನ್ನು ಆಡುತ್ತಿದ್ದಾರೆ. ಈಗ ಪಾಕಿಸ್ತಾನ ಆಟಗಾರ ಹಾಗು ಪಾಕಿಸ್ತಾನ ಆಡಳಿತ ಮಂಡಳಿಯ ಮಾಜಿ ಅಧ್ಯಕ್ಷ ರಮೀಜ್ ರಾಜಾ ಗಿಲ್ ಅವರನ್ನು ಜೂನಿಯರ್ ರೋಹಿತ್ ಶರ್ಮಾ ಎಂದು ಹೇಳುವ ಮೂಲಕ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ.
ಐಸಿಸಿ ರ್ಯಾಂಕಿಂಗ್ನಲ್ಲಿ 26ನೇ ಸ್ಥಾನದಲ್ಲಿರುವ ಗಿಲ್ ಅವರ ಬಗ್ಗೆ ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ರಮೀಜ್ ಮಾತನಾಡಿದ್ದಾರೆ. 'ಶುಭಮನ್ ಗಿಲ್ ಮಿನಿ - ರೋಹಿತ್ ಶರ್ಮಾ ಅವರಂತೆ ಕಾಣುತ್ತಾರೆ. ಅವರಿಗೆ ಸಾಕಷ್ಟು ಸಾಮರ್ಥ್ಯವಿದೆ. ಅವರ ಬಳಿ ಇನ್ನಷ್ಟೂ ಅವಕಾಶ ಹಾಗೂ ಸಮಯ ಇದೆ. ಅವರ ಬ್ಯಾಟಿಂಗ್ ಕೌಶಲ ಉತ್ತಮವಾಗಿದ್ದು, ದ್ವಿಶತಕದ ಆಟದಲ್ಲಿ ಅವರು ಪ್ರತೀ ಬಾಲ್ನ್ನು ಸರಿಯಾಗಿ ಎದುರಿಸಿದ್ದಾರೆ' ಎಂದು ಹೇಳಿದ್ದರೆ.
ಹೈದರಾಬಾದ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ಭಾರತದ ಐದನೇ ಬ್ಯಾಟರ್ ಆಗಿ ದ್ವಿಶತಕ ದಾಖಲಿಸಿದರು. ರಾಯ್‌ಪುರದಲ್ಲಿ ನ್ಯೂಜಿಲೆಂಡ್ ವಿರುದ್ಧ 109 ರನ್‌ಗಳ ಭಾರತದ ಯಶಸ್ವಿ ಚೇಸ್‌ನಲ್ಲಿ ಗಿಲ್ ಅಜೇಯ 40 ರನ್ ಗಳಿಸಿದರು. ರೋಹಿತ್ ಈ ಪಂದ್ಯದಲ್ಲಿ 51 ರನ್‌ಗಳೊಂದಿಗೆ ಅಗ್ರ ಸ್ಕೋರ್ ಮಾಡಿದ್ದರು. ' 109 ರನ್ ಗುರಿಯನ್ನು ಸುಲಭವಾಗಿ ಹಿಮ್ಮೆಟ್ಟಿಸಿತು ಇದಕ್ಕೆ ಮುಖ್ಯ ಕಾರಣ ರೋಹಿತ್ ಶರ್ಮಾರ ಬ್ಯಾಟಿಂಗ್. ಇಂಡಿಯನ್ ಟೀ ರೋಹಿತ್ ಅವರಂತಹ ಅತ್ಯುತ್ತಮ ಬ್ಯಾಟರ್ ಅನ್ನು ಹೊಂದಿದೆ. ಅವರು ಹುಕ್ ಮತ್ತು ಹೊಡೆತಗಳಿಗೆ ಅದ್ಭುತ ಸ್ಟ್ರೈಕರ್ ಆಗಿದ್ದಾರೆ ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ರಾಜಾ ಹೇಳಿದರು.
ನ್ಯೂಜಿಲೆಂಡ್ ತಂಡ ನೀಡಿದ 109 ರನ್ ಗುರಿಯನ್ನು 20.1 ಓವರ್‌ಗಳಲ್ಲೇ ಟೀಮ್ ಇಂಡಿಯಾ ಸಾಧಿಸಿತ್ತು. ಆ ಮೂಲಕ 179 ಎಸೆತಗಳು ಬಾಕಿ ಇರುವಾಗಲೇ ಭಾರತ ತಂಡ ಗೆಲುವು ಪಡೆಯಿತು. 2010ರಲ್ಲಿ ಚೆನ್ನೈನ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ 173 ಎಸೆತಗಳನ್ನು ಉಳಿಸಿಕೊಂಡು ಭಾರತ ತಂಡ ಜಯ ಗಳಿಸಿತ್ತು. ಆ ದಾಖಲೆಯನ್ನು ಇದೀಗ ರೋಹಿತ್ ಪಡೆ ರಾಯ್ಪುರ್ ಪಂದ್ಯದಲ್ಲಿ ಮುರಿದಿದೆ. ಆ ಪಂದ್ಯದಲ್ಲೂ ಭಾರತ ತಂಡ 8 ವಿಕೆಟ್ ಗೆಲುವು ಸಾಧಿಸಿತ್ತು. 1994 ರಲ್ಲಿ ಆಕ್ಲೆಂಡ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ 160 ಎಸೆತಗಳ ಅಂತರದಿಂದ ಭಾರತ ತಂಡ ಜಯಿಸಿತ್ತು.
ಶನಿವಾರ, ಮೊಹಮ್ಮದ್ ಶಮಿ ನೇತೃತ್ವದ ಭಾರತದ ಬೌಲರ್‌ಗಳು ನ್ಯೂಜಿಲೆಂಡ್ ಅನ್ನು 108 ರನ್‌ಗಳಿಗೆ ಕಟ್ಟಿಹಾಕಿದರು. ಸರಣಿ ಸಮಬಲ ಸಾಧಿಸುವ ಗುರಿಯಲ್ಲಿದ್ದ ಕಿವೀಸ್ಗೆ ಅಲ್ಪಮೊತ್ತಕ್ಕೆ ತಲೆಬಾಗಿತು. 15 ರನ್ಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿ ಕಿವೀಸ್ಗೆ ಆಸರೆ ಆದದ್ದು ಕೆಳ ಕ್ರಮಾಂಕದ ಫಿಲಿಪ್, ಬ್ರೇಸ್ವೆಲ್ ಮತ್ತು ಸ್ಯಾಂಟ್ನರ್. ಶಮಿ 3 ವಿಕೆಟ್, ಹಾರ್ದಿಕ್, ಸುಂದರ್ ತಲಾ ಎರಡು ಮತ್ತು ಶಾರ್ದೂಲ್, ಕುಲ್ದೀಪ್ ಮತ್ತು ಸಿರಾಜ್ ತಲಾ ಒಂದು ವಿಕೆಟ್ ಕಬಳಿಸಿದರು.
ಭಾರತೀಯ ವೇಗದ ಬೌಲರ್‌ಗಳು ಉತ್ತಮವಾಗಿ ಪ್ರದರ್ಶನ ನೀಡಿದ್ದಾರೆ. ಉತ್ತಮ ಬೌಲಿಂಗ್ ಪ್ರದರ್ಶನದಿಂದ ನ್ಯೂಜಿಲೆಂಡ್ ವಿರುದ್ಧದ ಎರಡನೇ ಪಂದ್ಯವನ್ನು ಭಾರತ ಜಯಿಸಿತು. ಭಾರತೀಯ ಬೌಲರ್‌ಗಳು ಹೆಚ್ಚಿನ ವೇಗದಲ್ಲಿ ಬೌಲಿಂಗ್ ಮಾಡುವುದಿಲ್ಲ. ಆದರೆ ಲೈನ್ ಮತ್ತು ಲೆಂತನ್ನು ಉತ್ತಮವಾಗಿ ಕಾಯ್ದುಕೊಳ್ಳುತ್ತಾರೆ ಎಂದು ರಾಜಾ ಹೇಳಿದ್ದಾರೆ.
ಇದನ್ನೂ ಓದಿ: ನ್ಯೂಜಿಲೆಂಡ್ ಸರಣಿ ಕ್ಲೀನ್ ಸ್ವೀಪ್ ಮಾಡಿದರೆ ಭಾರತವೇ ಏಕದಿನ ಶ್ರೇಯಾಂಕದಲ್ಲಿ ನಂ. 1