ETV Bharat / sports

'IPL ಆಡಲು ನಾನು ರೆಡಿ'... ಯುಎಇಗೆ ಪ್ರಯಾಣ ಬೆಳೆಸಲಿದ್ದಾರೆ ಅಯ್ಯರ್​​

ಇಂಗ್ಲೆಂಡ್​ ವಿರುದ್ಧದ ಏಕದಿನ ಕ್ರಿಕೆಟ್​ ಸರಣಿ ವೇಳೆ ಗಾಯಗೊಂಡಿದ್ದ ಶ್ರೇಯಸ್​ ಅಯ್ಯರ್​ ಇದೀಗ ಚೇತರಿಸಿಕೊಂಡಿದ್ದು, ಇಂಡಿಯನ್​ ಪ್ರೀಮಿಯರ್ ಲೀಗ್​​ನ ಉಳಿದ ಪಂದ್ಯಗಳಲ್ಲಿ ಭಾಗಿಯಾಗುವ ಸಾಧ್ಯತೆ ಇದೆ.

Shreyas Iyer
Shreyas Iyer
author img

By

Published : Jul 5, 2021, 9:54 PM IST

ಹೈದರಾಬಾದ್​: ಇಂಡಿಯನ್​ ಪ್ರೀಮಿಯರ್ ಲೀಗ್​ ಟೂರ್ನಿ ಆರಂಭಗೊಳ್ಳುವುದಕ್ಕೂ ಮೊದಲು ಗಾಯಗೊಂಡು ಹೊರಗುಳಿದಿದ್ದ ಡೆಲ್ಲಿ ಕ್ಯಾಪಿಟಲ್​ ಪ್ಲೇಯರ್​​ ಶ್ರೇಯಸ್​ ಅಯ್ಯರ್​ ಇದೀಗ ಚೇತರಿಸಿಕೊಂಡಿದ್ದಾರೆ. ಹಾಗಾಗಿ, ಉಳಿದ ಐಪಿಎಲ್​​​ ಪಂದ್ಯದಲ್ಲಿ ಭಾಗಿಯಾಗಲು ಸಜ್ಜುಗೊಳ್ಳುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಇಂಗ್ಲೆಂಡ್​​ ವಿರುದ್ಧದ ಏಕದಿನ ಸರಣಿ ವೇಳೆ ಭುಜದ ಗಾಯಕ್ಕೊಳಗಾಗಿ ಅಯ್ಯರ್​ ಭಾರತದಲ್ಲಿ ಆಯೋಜನೆಗೊಂಡಿದ್ದ ಐಪಿಎಲ್​​ನಿಂದ ಹೊರಗುಳಿದಿದ್ದರು. ಹೀಗಾಗಿ ಡೆಲ್ಲಿ ತಂಡದ ನಾಯಕತ್ವ ಜವಾಬ್ದಾರಿ ರಿಷಭ್​ ಪಂತ್​ ಹೆಗಲಿಗೆ ಬಿದ್ದಿತ್ತು. ಸದ್ಯ ಶ್ರೇಯಸ್​ ಅಯ್ಯರ್​ ಚೇತರಿಸಿಕೊಂಡಿರುವ ಕಾರಣ ಯುಎಇನಲ್ಲಿ ತಂಡ ಸೇರಿಕೊಳ್ಳಲಿದ್ದಾರೆ ಎನ್ನಲಾಗಿದೆ. ತಾವು ಚೇತರಿಸಿಕೊಂಡಿರುವ ಫೋಟೋವೊಂದನ್ನ ಟ್ವಿಟರ್​ನಲ್ಲಿ ಹಾಕಿಕೊಂಡಿದ್ದಾರೆ.

ಶ್ರೇಯಸ್​ ಹೇಳಿದ್ದೇನು?

ನನ್ನ ಭುಜ ಚೇತರಿಸಿಕೊಳ್ಳುತ್ತಿದೆ. ಗಾಯ ಕೊನೆಯ ಹಂತದಲ್ಲಿದ್ದು, ಮ್ಯಾಚ್​ ಆಡಲು ಫಿಟ್​​ ಆಗಲು ಒಂದು ತಿಂಗಳ ಸಮಯಾವಕಾಶ ಬೇಕಾಗಬಹುದು. ಸದ್ಯ ತರಬೇತಿ ಆರಂಭಗೊಂಡಿದ್ದು, ಉಳಿದ ಐಪಿಎಲ್​ ಟೂರ್ನಿಯಲ್ಲಿ ಭಾಗಿಯಾಗಲಿದ್ದೇನೆ ಎಂದಿದ್ದಾರೆ. ಇದೇ ವೇಳೆ ಡೆಲ್ಲಿ ಕ್ಯಾಪಿಟಲ್ಸ್​ ನಾಯಕತ್ವದ ಬಗ್ಗೆ ನನಗೆ ಗೊತ್ತಿಲ್ಲ. ಅದರ ನಿರ್ಧಾರ ತೆಗೆದುಕೊಳ್ಳುವುದು ಫ್ರಾಂಚೈಸಿ. ಸದ್ಯ ಈಗಾಗಲೇ ಉತ್ತಮ ಪ್ರದರ್ಶನ ನೀಡುತ್ತಿದೆ ಎಂದಿದ್ದಾರೆ. ನನ್ನ ಮುಖ್ಯ ಉದ್ದೇಶ ತಂಡಕ್ಕೆ ಪ್ರಶಸ್ತಿ ಗೆದ್ದುಕೊಡುವುದಾಗಿದೆ ಎಂದಿದ್ದಾರೆ.

ಇದನ್ನೂ ಓದಿರಿ: CBSE Exam 2022: 10,12ನೇ ತರಗತಿ​​ ವಿದ್ಯಾರ್ಥಿಗಳ ಪರೀಕ್ಷೆ ಬಗ್ಗೆ ಮಹತ್ವದ ಘೋಷಣೆ

ಡೆಲ್ಲಿ ಕ್ಯಾಪಿಟಲ್​ ತಂಡ ಮುನ್ನಡೆಸಿರುವ ರಿಷಭ್​ ಪಂತ್​, ಆಡಿರುವ 8 ಪಂದ್ಯಗಳ ಪೈಕಿ 6 ರಲ್ಲಿ ಗೆದ್ದು ಅಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.