ದುಬೈ: ಭಾನುವಾರ ನಡೆದ ಟಿ20 ವಿಶ್ವಕಪ್ ಫೈನಲ್(T20I world cup final) ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ಮಣಿಸಿದ ಆಸ್ಟ್ರೇಲಿಯಾ ಟ್ರೋಪಿ ಎತ್ತಿ ಹಿಡಿದಿದೆ. ಫೈನಲ್ನಲ್ಲಿ 53 ರನ್ ಸೇರಿದಂತೆ ಟೂರ್ನಿಯಲ್ಲಿ 289 ರನ್ಗಳಿಸಿದ್ದ ಡೇವಿಡ್ ವಾರ್ನರ್ ಟೂರ್ನಿ ಶ್ರೇಷ್ಠ ಪ್ರಶಸ್ತಿ(Man of the Tournament) ಪಡೆದುಕೊಂಡಿದ್ದಾರೆ. ಆದರೆ ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯಬ್ ಈ ನಿರ್ಧಾರಕ್ಕೆ ಕಿಡಿಕಾರಿದ್ದಾರೆ.
ಏಕೆಂದರೆ ಟೂರ್ನಿಯಲ್ಲಿ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ 6 ಪಂದ್ಯಗಳಲ್ಲಿ 4 ಅರ್ಧಶತಕ ಸಹಿತ 303 ರನ್ಗಳಿಸಿದ್ದರು. ಟೂರ್ನಿಯಲ್ಲಿ ಹೆಚ್ಚಿನ ರನ್ಗಳಿಸಿದರೂ ಟೂರ್ನಿ ಶ್ರೇಷ್ಠ ಪ್ರಶಸ್ತಿಯನ್ನು ಅವರಿಗಿಂತ ಕಡಿಮೆ ರನ್ಗಳಿಸಿದ ಡೇವಿಡ್ ವಾರ್ನರ್(289) ನೀಡಲಾಗಿದೆ. ಈ ಕಾರಣಕ್ಕೆ ಅಖ್ತರ್ ಟೂರ್ನಿಶ್ರೇಷ್ಠ ಪ್ರಶಸ್ತಿ ನಿರ್ಧಾರ ಸರಿಯಾದದ್ದಲ್ಲ ಎಂದು ಟ್ವೀಟ್ ಮಾಡಿ ಅಸಮಾಧಾನ ಹೊರಹಾಕಿದ್ದಾರೆ.
-
Was really looking forward to see @babarazam258 becoming Man of the Tournament. Unfair decision for sure.
— Shoaib Akhtar (@shoaib100mph) November 14, 2021 " class="align-text-top noRightClick twitterSection" data="
">Was really looking forward to see @babarazam258 becoming Man of the Tournament. Unfair decision for sure.
— Shoaib Akhtar (@shoaib100mph) November 14, 2021Was really looking forward to see @babarazam258 becoming Man of the Tournament. Unfair decision for sure.
— Shoaib Akhtar (@shoaib100mph) November 14, 2021
" ನಾನು ನಿಜವಾಗಿಯೂ, ಬಾಬರ್ ಅಜಮ್ ಅವರು ಮ್ಯಾನ್ ಆಫ್ ದ ಟೂರ್ನಮೆಂಟ್(Man of the Tournament) ಪ್ರಶಸ್ತಿಗೆ ಭಾಜನರಾಗುವುದನ್ನು ಎದುರು ನೋಡುತ್ತಿದ್ದೆ. ಖಂಡಿತ ಇದು ಅನ್ಯಾಯದ ನಿರ್ಧಾರ" ಎಂದು ಅಖ್ತರ್ ಟ್ವೀಟ್ ಮಾಡಿದ್ದಾರೆ.
ಇನ್ನು ಅಖ್ತರ್ ನಿರ್ಧಾರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕೆಲವು ವಿರಾಟ್ ಕೊಹ್ಲಿ 2012 ಮತ್ತು 2016ರಲ್ಲಿ ಗರಿಷ್ಠ ರನ್ಗಳಿಸಿದ ಆಧಾರದ ಮೇಲೆ ಪ್ರಶಸ್ತಿಯನ್ನು ನೀಡಲಾಗಿತ್ತು. ಆದರೆ ಬಾಬರ್(303) ಈ ಬಾರಿ ಗರಿಷ್ಠ ರನ್ಗಳಿಸಿದರೂ ಅವರಿಗೆ ಟೂರ್ನಿ ಶ್ರೇಷ್ಠ ಪ್ರಶಸ್ತಿ ನೀಡದಿರುವುದು ರಾಜಕೀಯ ಎನ್ನುತ್ತಿದ್ದರೆ, ಮತ್ತೆ ಕೆಲವು ಡೇವಿಡ್ ಟೂರ್ನಿಯಲ್ಲಿ ತಂಡಕ್ಕೆ ರನ್ ಅಗತ್ಯವಾದ ನಿರ್ಣಾಯಕ ಹಂತದಲ್ಲಿ ರನ್ಗಳಿಸಿದ್ದಾರೆ. ಜೊತೆಗೆ ನಿರ್ಣಾಯಕವಾಗಿದ್ದ ಕೊನೆಯ ಲೀಗ್ ಪಂದ್ಯ ಸೆಮಿಫೈನಲ್, ಫೈನಲ್ನಲ್ಲೂ ಉತ್ತಮ ಸ್ಟ್ರೈಕ್ರೇಟ್ ಮತ್ತು ಸರಾಸರಿಯೊಂದಿಗೆ ರನ್ಗಳಿಸಿದ್ದಾರೆ. ಹಾಗಾಗಿ ಅವರೇ ಮ್ಯಾನ್ ಆಫ್ ದ ಟೂರ್ನಮೆಂಟ್ ಪ್ರಶಸ್ತಿಗೆ ಅರ್ಹರು ಎಂದು ಐಸಿಸಿ ನಿರ್ಧಾರದ ಪರ ನಿಂತಿದ್ದಾರೆ.
ಇದನ್ನು ಓದಿ: 11 ಬಾರಿ ಐಸಿಸಿ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿ , 8ನೇ ಟ್ರೋಪಿ ಗೆದ್ದ ಆಸ್ಟ್ರೇಲಿಯಾ