ETV Bharat / sports

ಅಂಜುಂ ಖಾನ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಕ್ರಿಕೆಟಿಗ ಶಿವಂ ದುಬೆ - ಕ್ರಿಕೆಟರ್ ಶಿವಂ ದುಬೆ

ಭಾರತೀಯ ಕ್ರಿಕೆಟ್ ತಂಡದ ಆಲ್​ರೌಂಡರ್ ಶಿವಂ ದುಬೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಗರ್ಲ್​ಫ್ರೆಂಡ್ ಜೊತೆ ಸಪ್ತಪದಿ ತುಳಿದಿದ್ದಾರೆ.​

Shivam Dube Weds Girlfriend Anjum Khan
Shivam Dube Weds Girlfriend Anjum Khan
author img

By

Published : Jul 17, 2021, 2:12 AM IST

ಮುಂಬೈ: ಟೀಂ ಇಂಡಿಯಾ ಆಲ್​ರೌಂಡರ್ ಶಿವಂ ದುಬೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ದೀರ್ಘಕಾಲದ ಗೆಳತಿ ಅಂಜುಂ ಖಾನ್​ ಜೊತೆ ಮದುವೆ ಮಾಡಿಕೊಂಡಿದ್ದಾರೆ. ವಿವಾಹ ಸಮಾರಂಭದ ಕೆಲವೊಂದು ಫೋಟೋ ಟ್ವಿಟರ್​ ಅಕೌಂಟ್​​ನಲ್ಲಿ ಹಾಕಿಕೊಂಡಿದ್ದಾರೆ.

Shivam Dube
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಶಿವಂ ದುಬೆ

ಪ್ರೀತಿಗಿಂತಲೂ ಹೆಚ್ಚಾಗಿರುವುದನ್ನ ನಾವು ಪ್ರೀತಿಯಿಂದ ಪ್ರೀತಿಸಿದೆವು. ಎಂದೆಂದಿಗೂ ಮುಗಿಯದ ಸಂಬಂಧಕ್ಕೆ ಇದೀಗ ಅಧಿಕೃತ ಆರಂಭ ಸಿಕ್ಕಿದೆ.. ಜಸ್ಟ್​ ಮ್ಯಾರೀಡ್​ ಎಂದು ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿರಿ: ಜೋಕಾಲಿ ಆಡುವಾಗ ಕುತ್ತಿಗೆಗೆ ಸಿಕ್ಕಿಕೊಂಡ ಸೀರೆ... ಬಾಲಕ ದುರ್ಮರಣ

ಟೀಂ ಇಂಡಿಯಾ ಪರ 2019ರಲ್ಲಿ ಏಕೈಕ ಏಕದಿನ ಪಂದ್ಯವನ್ನಾಡಿರುವ ಶಿವಂ ದುಬೆ ಇಲ್ಲಿಯವರೆಗೆ ಟಿ20ಯಲ್ಲಿ ಭಾರತದ ಪರ 13 ಪಂದ್ಯಗಳನ್ನಾಡಿದ್ದಾರೆ. ಇಂಡಿಯನ್​ ಪ್ರೀಮಿಯರ್ ಲೀಗ್​ನಲ್ಲಿ ಈ ಹಿಂದೆ ಬೆಂಗಳೂರು ತಂಡದ ಪರ ಆಡಿದ್ದ 28 ವರ್ಷದ ಪ್ಲೇಯರ್​ ಇದೀಗ ರಾಜಸ್ಥಾನ ರಾಯಲ್ಸ್​​ ಪಡೆದ ಪರ ಕಣಕ್ಕಿಳಿಯುತ್ತಿದ್ದಾರೆ. ಇವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ವಿಚಾರ ಗೊತ್ತಾಗುತ್ತಿದ್ದಂತೆ ಶ್ರೇಯಸ್​ ಅಯ್ಯರ್​, ಸಿದ್ದೇಶ್​ ಲಾಡ್ ಹಾಗೂ ಪ್ರಿಯಾಂಕ ಪಾಚಾಲ್ ಟ್ವಿಟ್ ಮಾಡಿ ಅಭಿನಂದನೆ ತಿಳಿಸಿದ್ದಾರೆ. ಐಪಿಎಲ್ ಪ್ರಾಂಚೈಸಿ ರಾಜಸ್ಥಾನ ರಾಯಲ್ಸ್​ ಕೂಡ ವಿಶ್ ಮಾಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.