ETV Bharat / sports

'ಗಬ್ಬರ್​​ಸಿಂಗ್​' ಶಿಖರ್​ ಧವನ್​ ಭಾವನಾತ್ಮಕ ಸಂದೇಶ: ವಿಶ್ವಕಪ್​ ಗೆದ್ದು ಬನ್ನಿ ಎಂದು ತಂಡಕ್ಕೆ ಶುಭ ಹಾರೈಕೆ - ಏಕದಿನ ವಿಶ್ವಕಪ್​

ವಿಶ್ವಕಪ್​ನಲ್ಲಿ ಸ್ಥಾನ ಪಡೆಯಲು ವಿಫಲರಾದ 'ಗಬ್ಬರ್​ಸಿಂಗ್​' ಶಿಖರ್​ ಧವನ್​​, ಟ್ರೋಫಿ ಗೆದ್ದು ಬನ್ನಿ ಎಂದು ಆಯ್ಕೆಯಾದ ಭಾರತ ತಂಡಕ್ಕೆ ಶುಭ ಕೋರಿದ್ದಾರೆ.

ಶಿಖರ್​ ಧವನ್
ಶಿಖರ್​ ಧವನ್
author img

By ETV Bharat Karnataka Team

Published : Sep 7, 2023, 1:05 PM IST

ನವದೆಹಲಿ : ತವರಿನಲ್ಲಿ ನಡೆಯುವ ಐಸಿಸಿ ಏಕದಿನ ವಿಶ್ವಕಪ್​ಗೆ ರೋಹಿತ್​ ಶರ್ಮಾ ನೇತೃತ್ವದಲ್ಲಿ 15 ಸದಸ್ಯರ ಭಾರತ ತಂಡವನ್ನು ಪ್ರಕಟಿಸಲಾಗಿದೆ. ತಂಡದಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿದ್ದ ಗಬ್ಬರ್​ಸಿಂಗ್​ ಉಪನಾಮದ ಎಡಗೈ ಹಿರಿಯ ಬ್ಯಾಟರ್​ ಶಿಖರ್​ ಧವನ್​ ಈ ಬಾರಿಯ ವಿಶ್ವಕಪ್​ ತಪ್ಪಿಸಿಕೊಳ್ಳಲಿದ್ದು, ಅವರಿಗೆ ತಂಡದಲ್ಲಿ ಸ್ಥಾನ ನೀಡಲಾಗಿಲ್ಲ.

ವಿಶ್ವಕಪ್​ನಲ್ಲಿ ಆಡುವ ಮಹದಾಸೆ ಹೊಂದಿದ್ದ ಶಿಖರ್​ ಹಲವು ಸಂದರ್ಶನಗಳಲ್ಲಿ ಈ ಬಗ್ಗೆ ಹೇಳಿಕೊಂಡಿದ್ದರು. ಭಾರತ ತಂಡದಿಂದ ಹೊರಬಿದ್ದರೂ ಮರಳಿ ಸೇರುವ ಯತ್ನ ನಡೆಸುತ್ತಿದ್ದರು. ಆದರೆ, ಭಾರತ ಕ್ರಿಕೆಟ್​ ನಿಯಂತ್ರಣ ಮಂಡಳಿ ಹೊಸಬರಿಗೆ ಮಣೆ ಹಾಕಿದ್ದು, ಹಿರಿಯ ಆಟಗಾರನಿಗೆ ಸ್ಥಾನ ನಿರಾಕರಿಸಲಾಗಿದೆ. ಆದಾಗ್ಯೂ, ಗಬ್ಬರ್​ಸಿಂಗ್ ವಿಶ್ವಕಪ್​ಗೆ ಆಯ್ಕೆಯಾಗಿರುವ ತಂಡವನ್ನು ಅಭಿನಂದಿಸಿದ್ದು, ತಂಡ ಪ್ರಶಸ್ತಿ ಗೆದ್ದು ಬರಲಿ ಎಂದು ಶುಭ ಕೋರಿದ್ದಾರೆ.

  • Congratulations to my fellow team mates & friends chosen to represent India in the WC 2023 tournament! With the prayers and support of 1.5 billion people, you carry our hopes and dreams.
    May you bring the cup back home 🏆 and make us proud! Go all out, Team India! 🇮🇳… https://t.co/WbVmD0Fsl5

    — Shikhar Dhawan (@SDhawan25) September 6, 2023 " class="align-text-top noRightClick twitterSection" data=" ">

ಎಕ್ಸ್​ನಲ್ಲಿ(ಹಿಂದಿನ ಟ್ವಿಟರ್​) ಸಂದೇಶ ಹಂಚಿಕೊಂಡಿರುವ ಹಿರಿಯ ಆಟಗಾರ, 2023ರ ವಿಶ್ವಕಪ್​ನ ಭಾರತ ತಂಡಕ್ಕೆ ಆಯ್ಕೆಯಾದ ನನ್ನ ಸಹ ಆಟಗಾರರು ಮತ್ತು ಸ್ನೇಹಿತರಿಗೆ ಅಭಿನಂದನೆಗಳು. 140 ಕೋಟಿ ಜನರ ಬೆಂಬಲ ನಿಮಗಿದೆ. ಅಷ್ಟು ಜನರ ಭರವಸೆ ಮತ್ತು ಕನಸುಗಳನ್ನು ನೀವು ಹೊತ್ತಿದ್ದೀರಿ. ವಿಶ್ವಕಪ್​ನಲ್ಲಿ ದೇಶಕ್ಕೆ ಕಪ್​ ತನ್ನಿ 'ಟೀಂ ಭಾರತ' ಎಂದು ಹೇಳಿದ್ದಾರೆ.

ಕಳಪೆ ಫಾರ್ಮ್​ನಿಂದ ಶಿಖರ್ ಔಟ್​: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಐಸಿಸಿ ವಿಶ್ವಕಪ್‌ಗೆ ತಾತ್ಕಾಲಿಕ 15 ಮಂದಿಯ ತಂಡವನ್ನು ಇತ್ತೀಚೆಗಷ್ಟೇ ಪ್ರಕಟಿಸಿದೆ. ಏಕದಿನದಲ್ಲಿ ಕಳಪೆ ಫಾರ್ಮ್‌ನಿಂದಾಗಿ ಧವನ್ ಅವರನ್ನು ತಂಡದಿಂದ ಕೈಬಿಡಲಾಗಿತ್ತು. 2022 ರ ಡಿಸೆಂಬರ್​ನಲ್ಲಿ ಬಾಂಗ್ಲಾದೇಶ ವಿರುದ್ಧ ಪಂದ್ಯದಲ್ಲಿ ಧವನ್​ ಆಡಿದ್ದರು. ಅದಾದ ಬಳಿಕ ಅವರು ಮರಳಿ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದರು.

ಯುವ ಆಟಗಾರರ ಎಂಟ್ರಿ: ಭಾರತ ತಂಡಕ್ಕೆ ಯುವ ಆಟಗಾರರ ಖಡಕ್​ ಎಂಟ್ರಿಯೇ ಹಿರಿಯ ಆಟಗಾರರ ತೆರೆಮರೆಗೆ ಕಾರಣವಾಗಿದೆ. ಶುಭ್​ಮನ್​ ಗಿಲ್​, ಇಶಾನ್​ ಕಿಶನ್​, ಶಾರ್ದೂಲ್​ ಠಾಕೂರ್​ರಂತಹ ಆಟಗಾರರ ನೀಡುತ್ತಿರುವ ಉತ್ತಮ ಪ್ರದರ್ಶನದಿಂದಾಗಿ ತಂಡದಲ್ಲಿ ಸ್ಪರ್ಧೆ ಹೆಚ್ಚಿದೆ. ಹೀಗಾಗಿ ಶಿಖರ್​ ಮತ್ತೆ ಭಾರತ ತಂಡದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಲಿಲ್ಲ.

ಭಾರತ ತಂಡದ ನಾಯಕರಾಗಿಯೂ ಗುರುತಿಸಿಕೊಂಡಿದ್ದ ಧವನ್​, ವೈಯಕ್ತಿಕ ಪ್ರದರ್ಶನದಲ್ಲಿ ತುಸು ಹಿನ್ನಡೆ ಅನುಭವಿಸಿದರು. ಕಳೆದ ವರ್ಷ 74.21 ಸ್ಟ್ರೈಕ್ ರೇಟ್‌ನೊಂದಿಗೆ 34.40ರ ಸರಾಸರಿಯಲ್ಲಿ ಬ್ಯಾಟ್​ ಮಾಡಿದ್ದರು. 2023 ರ ಐಪಿಎಲ್​ನಲ್ಲೂ ಎಡಗೈ ದಾಂಡಿಗ 142.91 ಸ್ಟ್ರೈಕ್‌ರೇಟ್‌ನೊಂದಿಗೆ 41.44 ರ ಬ್ಯಾಟಿಂಗ್​ ಸರಾಸರಿ ಹೊಂದಿದ್ದಾರೆ. ಪಂಜಾಬ್ ಕಿಂಗ್ಸ್ ಪರ ಆಡುವ ಧವನ್ 11 ಪಂದ್ಯಗಳಲ್ಲಿ 373 ರನ್ ಗಳಿಸಿದ್ದರು. ಅಕ್ಟೋಬರ್​ 5 ರಿಂದ ವಿಶ್ವಕಪ್​ ಆರಂಭವಾಗಲಿದೆ.

ಇದನ್ನೂ ಓದಿ: Asia Cup 2023: ಉಲ್​ ಹಕ್​, ರಿಜ್ವಾನ್ ಅರ್ಧಶತಕದ ಆಟ.. ಬಾಂಗ್ಲಾ ವಿರುದ್ಧ ಪಾಕ್​ಗೆ 7 ವಿಕೆಟ್​ಗಳ ಭರ್ಜರಿ ಗೆಲುವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.