ದುಬೈ: ಬುಧವಾರ ನಡೆದ ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಓಪನರ್ ಶಿಖರ್ ಧವನ್ ಆಕರ್ಷಕ ಬ್ಯಾಟಿಂಗ್ ಪ್ರದರ್ಶನ ತೋರಿದ್ದಾರೆ. ಈ ಪಂದ್ಯದ ಮೂಲಕ ಅವರು ಸತತ 6 ಐಪಿಎಲ್ನಲ್ಲೂ 400 ರನ್ಗಳ ಗಡಿ ದಾಡಿದ ವಿಶೇಷ ದಾಖಲೆ ಬರೆದರು.
ಸನ್ರೈಸರ್ಸ್ ಹೈದರಾಬಾದ್ ಮೊದಲು ಬ್ಯಾಟಿಂಗ್ ಮಾಡಿ 134 ರನ್ ಗಳಿಸಿತ್ತು. ಈ ಮೊತ್ತ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ 17.5 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಅನುಭವಿ ಶಿಖರ್ ಧವನ್ 37 ಎಸೆತಗಳಲ್ಲಿ 42 ರನ್ ಕಲೆ ಹಾಕಿದರು. ಈ ಮೂಲಕ 2021 ಐಪಿಎಲ್ನಲ್ಲಿ 400 (422) ರ ಗಡಿ ದಾಟಿದ ಮೊದಲ ಬ್ಯಾಟರ್ ಎನಿಸಿಕೊಂಡರು.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸ್ಟಾರ್ ಓಪನರ್ ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಸತತ 6ನೇ ಬಾರಿ 400+ ರನ್ ಬಾರಿಸಿದ 3ನೇ ಬ್ಯಾಟರ್ ಎನಿಸಿಕೊಂಡರು. ಧವನ್ 2016ರಿಂದ ಕ್ರಮವಾಗಿ 501, 479, 497, 521, 618 ಮತ್ತು ಈ ವರ್ಷ ಈಗಾಗಲೇ 422 ರನ್ಗಳಿಸಿ ಮುನ್ನುಗ್ಗುತ್ತಿದ್ದಾರೆ.
ಇವರನ್ನು ಹೊರತುಪಡಿಸಿದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸುರೇಶ್ ರೈನಾ ಮತ್ತು ಸನ್ರೈಸರ್ಸ್ ಹೈದರಾಬಾದ್ ತಂಡದ ಡೇವಿಡ್ ವಾರ್ನರ್ ಸತತ 7 ಬಾರಿ 400ಕ್ಕೂ ಹೆಚ್ಚು ರನ್ಗಳಿಸಿದ ದಾಖಲೆ ಹೊಂದಿದ್ದಾರೆ. ರೈನಾ 2008ರಿಂದ 2014ವರೆಗೆ ಮತ್ತು ವಾರ್ನರ್ 2013ರಿಂದ 2020ರವರೆಗೆ ಈ ಸಾಧನೆ ಮಾಡಿದ್ದರು.
ಇದನ್ನೂ ಓದಿ: ನೋಡಿ: ಟಿ20 ವಿಶ್ವಕಪ್ ಗೀತೆಯಲ್ಲಿ ಕೊಹ್ಲಿ ಪೊಲಾರ್ಡ್ ವಿಭಿನ್ನ ರೀತಿಯಲ್ಲಿ ಮಿಂಚಿಂಗ್