ETV Bharat / sports

ವೆಂಕಟೇಶ್ ಅಯ್ಯರ್​ಗೆ ಬೌಲಿಂಗ್ ನೀಡದ ಕಾರಣ ಬಹಿರಂಗ ಪಡಿಸಿದ ಶಿಖರ್​ ಧವನ್​!

ಬುಧವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ತಂಡ ವ್ಯಾನ್ ಡರ್​ ಡಸೆನ್ ಮತ್ತು ಟೆಂಬ ಬವೂಮ ಅವರ ಶತಕದ ನೆರವಿನಿಂದ 50 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು 296 ರನ್​ಗಳಿಸಿತ್ತು. 297 ರನ್​ಗಳ ಗುರಿ ಬೆನ್ನಟ್ಟಿದ ಭಾರತ ನಿಗಧಿತ ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 265 ರನ್​ಗಳಿಸಲಷ್ಟೇ ಶಕ್ತವಾಗಿ 31 ರನ್​ಗಳಿಂದ ಸೋಲನುಭವಿಸಿತು.

Why  Venkatesh Iyer  didn't Bowl In First ODI match
ವೆಂಕಟೇಶ್ ಅಯ್ಯರ್​ ಶಿಖರ್​ ಧವನ್
author img

By

Published : Jan 20, 2022, 6:21 PM IST

ಪಾರ್ಲ್​(ದಕ್ಷಿಣ ಆಫ್ರಿಕಾ): ಆಲ್​ರೌಂಡರ್​ ಹೆಸರಿನಲ್ಲಿ ಸೂರ್ಯಕುಮಾರ್​ ಯಾದವ್​ರನ್ನು ಹೊರಗಿಟ್ಟು ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಅವಕಾಶ ಪಡೆದಿದ್ದ ವೆಂಕಟೇಶ್​ ಅಯ್ಯರ್​ಗೆ ಏಕೆ ಬೌಲಿಂಗ್ ನೀಡಲಿಲ್ಲ ಎನ್ನುವುದು ಕ್ರಿಕೆಟ್​ ತಜ್ಞರ ಸಹಿತ ಸಾಕಷ್ಟು ಭಾರತೀಯ ಅಭಿಮಾನಿಗಳಲ್ಲಿ ಗೊಂದಲವನ್ನುಂಟು ಮಾಡಿತ್ತು. ಇದೀಗ ಆರಂಭಿಕ ಬ್ಯಾಟರ್​ ಶಿಖರ್​ ಧವನ್​ ಕಾರಣ ಬಿಚ್ಚಿಟ್ಟಿದ್ದಾರೆ.

ಬುಧವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ತಂಡ ವ್ಯಾನ್ ಡರ್​ ಡಸೆನ್ ಮತ್ತು ಟೆಂಬ ಬವೂಮ ಅವರ ಶತಕದ ನೆರವಿನಿಂದ 50 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು 296 ರನ್​ಗಳಿಸಿತ್ತು. 297 ರನ್​ಗಳ ಗುರಿ ಬೆನ್ನಟ್ಟಿದ ಭಾರತ ನಿಗಧಿತ ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 265 ರನ್​ಗಳಿಸಲಷ್ಟೇ ಶಕ್ತವಾಗಿ 31 ರನ್​ಗಳಿಂದ ಸೋಲನುಭವಿಸಿತು.

ಆದರೆ ಈ ಪಂದ್ಯದಲ್ಲಿ ವೆಂಕಟೇಶ್ ಅಯ್ಯರ್​ ಅವರನ್ನು ಆಲ್​ರೌಂಡರ್​ ಎಂದು ಆಯ್ಕೆ ಮಾಡಲಾಗಿತ್ತು. ಆದರೆ ಬವೂಮ ಮತ್ತು ಡಸೆನ್​ ಜೋಡಿ ಭಾರತೀಯ ಖಾಯಂ ಬೌಲರ್​ಗಳನ್ನ ಬೆಂಡೆತ್ತುತ್ತಿದ್ದರೂ ಟೀಮ್ ಇಂಡಿಯಾ ಮಾತ್ರ ಬೌಲಿಂಗ್ ಬದಲಾವಣೆಗಾದರೂ ಅಯ್ಯರ್​ಗೆ ಒಂದೆರಡು ಓವರ್​ ನೀಡಲಿದೆ ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ ನಾಯಕ ರಾಹುಲ್ 5 ಬೌಲರ್​ಗಳಿಂದಲೇ ಪೂರ್ಣ ಓವರ್​ ಮಾಡಿಸಿದರು. ಇದು ವೆಂಕಟೇಶ್​ರನ್ನು ಆಯ್ಕೆಮಾಡಿಕೊಂಡಿದ್ದಾದರೂ ಏಕೆ? ಎನ್ನುವ ಪ್ರಶ್ನೆ ಉದ್ಭವಕ್ಕೆ ಕಾರಣವಾಗಿತ್ತು.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

79 ರನ್​ ಸಿಡಿಸಿ ಭಾರತದ ಗರಿಷ್ಠ ಸ್ಕೋರರ್​ ಎನಿಸಿಕೊಂಡಿದ್ದ ಧವನ್​ ಪಂದ್ಯ ಮುಗಿದ ಬಳಿಕ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡುವ ವೇಳೆ ವೆಂಕಟೇಶ್​ಗೆ ಏಕೆ ಬೌಲಿಂಗ್ ಕೊಡಲಿಲ್ಲ ಎನ್ನುವುದಕ್ಕೆ ಸ್ಪಷ್ಟನೆ ನೀಡಿದ್ದಾರೆ.

" ನಮಗೆ ಪಂದ್ಯದಲ್ಲಿ ಅವರ ಬೌಲಿಂಗ್ ಅಗತ್ಯತೆ ಕಂಡುಬರಲಿಲ್ಲ, ಏಕೆಂದರೆ ಸ್ಪಿನ್ನರ್​ಗಳು ಉತ್ತಮವಾಗಿ ಬೌಲಿಂಗ್ ಮಾಡಿದರು. ಆ ವಿಕೆಟ್​ನಲ್ಲಿ ಸ್ವಲ್ಪ ಟರ್ನ್​ ಕೂಡ ಇತ್ತು. ಸ್ಲಾಗ್​ ಓವರ್​ಗಳಲ್ಲಿ ಹೆಚ್ಚಾಗಿ ವೇಗಿಗಳನ್ನ ಬಳಸಿಕೊಳ್ಳಬೇಕಾಗಿತ್ತು. ಇನ್ನು ಮಧ್ಯಮ ಓವರ್​ಗಳಲ್ಲಿ ವಿಕೆಟ್ ಬೀಳದ ಕಾರಣ, ಜೊತೆಯಾಟ ಮುರಿಯುವುದಕ್ಕಾಗಿ ನಾವು ನಮ್ಮ ಪ್ರಮುಖ ಬೌಲರ್​ಗಳನ್ನು ಅನಿವಾರ್ಯವಾಗಿ ಮರಳಿ ಕರೆತಂದೆವು, ಆದರೆ ನಮ್ಮ ಯೋಜನೆ ಫಲಿಸಲಿಲ್ಲ. ಪಂದ್ಯದಲ್ಲಿ ತಂಡದ ಪ್ರಮುಖ ಬೌಲರ್​ಗಳನ್ನು ಮಹತ್ವಕೊಡಬೇಕಾಗುತ್ತದೆ" ಎಂದು ಯುವ ಆಲ್​ರೌಂಡರ್​ಗೆ ಬೌಲಿಂಗ್ ನೀಡದ ಕಾರಣವನ್ನು ಬಹಿರಂಗಪಡಿಸಿದ್ದಾರೆ.

ಇನ್ನು ಬೌಲಿಂಗ್​ನಲ್ಲಿ ಅವಕಾಶ ಸಿಗದಿದ್ದರೂ ಬ್ಯಾಟಿಂಗ್​ನಲ್ಲಿ ಸಿಕ್ಕ ಅವಕಾಶವನ್ನು ಅಯ್ಯರ್ ಕೈಚೆಲ್ಲಿದರು. 7 ಎಸೆತಗಳಲ್ಲಿ 2 ರನ್​ ಗಳಿಸಿ ವಿಕೆಟ್​ ಒಪ್ಪಿಸಿದರು.

ಇದನ್ನೂ ಓದಿ: ಐಸಿಸಿ ವರ್ಷದ ಟೆಸ್ಟ್ ತಂಡದಲ್ಲಿ ರೋಹಿತ್, ಪಂತ್, ಅಶ್ವಿನ್​ಗೆ ಸ್ಥಾನ... ವಿಲಿಯಮ್ಸನ್​ ನಾಯಕ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.