ಕೊಲಂಬೊ : ಭಾರತ ತಂಡದ ಆರಂಭಿಕ ಬ್ಯಾಟ್ಸ್ಮನ್ ಹಾಗೂ ಹಂಗಾಮಿ ನಾಯಕ ಶಿಖರ್ ಧವನ್ ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಕ್ರಿಕೆಟ್ನಲ್ಲಿ 6000 ರನ್ ಪೂರೈಸಿದ್ದು, ಈ ಮೈಲುಗಲ್ಲನ್ನು ವೇಗವಾಗಿ ತಲುಪಿದ ಭಾರತದ 2ನೇ ಮತ್ತು ವಿಶ್ವದ 4ನೇ ಬ್ಯಾಟ್ಸ್ಮನ್ ಎಂಬ ವಿಶೇಷ ದಾಖಲೆಗೆ ಪಾತ್ರರಾಗಿದ್ದಾರೆ.
ಭಾನುವಾರ 263 ರನ್‌ಗಳ ಗುರಿ ಬೆನ್ನುತ್ತುವಾಗ 17 ರನ್ಗಳಿಸಿದ್ದ ವೇಳೆ ಏಕದಿನ ಕ್ರಿಕೆಟ್ನಲ್ಲಿ 6 ಸಾವಿರ ರನ್‌ಗಳ ಮೈಲುಗಲ್ಲು ತಲುಪಿದರು. ಅಲ್ಲದೆ ಭಾರತ ತಂಡದ ನಾಯಕ ಸೌರವ್ ಗಂಗೂಲಿ(147), ರೋಹಿತ್ ಶರ್ಮಾ(162), ಧೋನಿ(166),ತೆಂಡೂಲ್ಕರ್(170) ಗಿಂತ ವೇಗವಾಗಿ ಈ ಸಾಧನೆ ಮಾಡಿದ ಕೀರ್ತಿಗೆ ಭಾಜನರಾದರು.
-
🚨 Milestone Alert 🚨
— BCCI (@BCCI) July 18, 2021 " class="align-text-top noRightClick twitterSection" data="
Congratulations to @SDhawan25 on completing 6⃣0⃣0⃣0⃣ ODI runs 👏 👏 #TeamIndia #SLvIND
Follow the match 👉 https://t.co/rf0sHqdzSK pic.twitter.com/OaEFDeF2jB
">🚨 Milestone Alert 🚨
— BCCI (@BCCI) July 18, 2021
Congratulations to @SDhawan25 on completing 6⃣0⃣0⃣0⃣ ODI runs 👏 👏 #TeamIndia #SLvIND
Follow the match 👉 https://t.co/rf0sHqdzSK pic.twitter.com/OaEFDeF2jB🚨 Milestone Alert 🚨
— BCCI (@BCCI) July 18, 2021
Congratulations to @SDhawan25 on completing 6⃣0⃣0⃣0⃣ ODI runs 👏 👏 #TeamIndia #SLvIND
Follow the match 👉 https://t.co/rf0sHqdzSK pic.twitter.com/OaEFDeF2jB
ಭಾರತದ ವಿರಾಟ್ ಕೊಹ್ಲಿ 136 ಇನ್ನಿಂಗ್ಸ್ಗಳಲ್ಲಿ 6 ಸಾವಿರ ರನ್ಗಳಿಸಿದ್ದಾರೆ. ದಕ್ಷಿಣ ಆಫ್ರಿಕಾದ ಹಾಸಿಮ್ ಆಮ್ಲಾ ವೇಗವಾಗಿ 6 ಸಾವಿರ ರನ್ ಬಾರಿಸಿದ ವಿಶ್ವ ದಾಖಲೆ ಹೊಂದಿದ್ದು, ಅವರು ಕೇವಲ123 ಇನ್ನಿಂಗ್ಸ್ಗಳಲ್ಲಿ ಈ ಸಾಧನೆ ಮಾಡಿದ ಬ್ಯಾಟ್ಸ್ಮನ್ ಎನಿಸಿಕೊಂಡರು.
ಕಿವೀಸ್ ನಾಯಕ ಕೇನ್ ವಿಲಿಯಮ್ಸನ್ 139 ಇನ್ನಿಂಗ್ಸ್ ತೆಗೆದುಕೊಂಡು 3ನೇ ಸ್ಥಾನದಲ್ಲಿದ್ದರೆ, ಧವನ್ 140 ಇನ್ನಿಂಗ್ಸ್ನಲ್ಲಿ ಪೂರ್ಣಗೊಳಿಸಿ 4ನೇ ಸ್ಥಾನದಲ್ಲಿದ್ದಾರೆ. ಆಮ್ಲಾ ಹೊರೆತುಪಡಿಸಿದರೆ ಧವನ್ ಕಡಿಮೆ ಇನಿಂಗ್ಸ್ಗಳಲ್ಲಿ 6 ಸಾವಿರ ರನ್ಗಳಿಸಿದ ಬ್ಯಾಟ್ಸ್ಮನ್ ಆಗಿದ್ದಾರೆ.
ಭಾರತದ ಪರ ಹೆಚ್ಚು ರನ್ ಬಾರಿಸಿದ 5ನೇ ಆರಂಭಿಕ ಬ್ಯಾಟ್ಸ್ಮನ್
35 ವರ್ಷದ ಶಿಖರ್ ಧವನ್ ಭಾರತ ತಂಡವನ್ನು ಮುನ್ನಡೆಸಿದ ಹಿರಿಯ ಕ್ರಿಕೆಟಿಗ ಎನಿಸಿಕೊಂದಿದ್ದಾರೆ. ಅವರು ಭಾರತದ ಪರ ಆರಂಭಿಕ ಬ್ಯಾಟ್ಸ್ಮನ್ ಆಗಿ ಹೆಚ್ಚು ರನ್ ಬಾರಿಸಿದ 5ನೇ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ. ಸಚಿನ್ ತೆಂಡೂಲ್ಕರ್(15,310), ಸೌರವ್ ಗಂಗೂಲಿ(9146), ವೀರೆಂದ್ರ ಸೆಹ್ವಾಗ್(7240), ರೋಹಿತ್ ಶರ್ಮಾ(7238) ರನ್ ಬಾರಿಸಿದ್ದಾರೆ.
ಇದನ್ನು ಓದಿ:ಸಿಕ್ಸರ್ ಮೂಲಕ ಖಾತೆ ತೆರೆದು ಫೋರ್ ಮೂಲಕ ಫಿಫ್ಟಿ ದಾಟಿದ ಬರ್ತ್‌ಡೇ ಬಾಯ್ ಇಶಾನ್..