ETV Bharat / sports

ನಾನು ಆಯ್ಕೆಗಾರನಾಗಿದ್ದರೆ ನನ್ನ ಬದಲಿಗೆ ಗಿಲ್​ ಅವರನ್ನೇ ತಂಡಕ್ಕೆ ಸೇರಿಸುತ್ತಿದ್ದೆ: ಶಿಖರ್​ ಧವನ್​ - Shikhar Dhawan applause for Shubman Gill cricket

ಭಾರತ ಕ್ರಿಕೆಟ್​ ತಂಡದಲ್ಲಿ ಮತ್ತೊಂದು ಅವಕಾಶಕ್ಕಾಗಿ ಕಾದಿರುವ ಶಿಖರ್​ ಧವನ್​, ವಿಶ್ವಕಪ್​ಗೆ ಮರಳುವ ನಿರೀಕ್ಷೆಯಲ್ಲಿದ್ದಾರೆ. ಇದೇ ವೇಳೆ ಶುಭಮನ್​ ಗಿಲ್​ ಆಟದ ಬಗ್ಗೆಯೂ ಮೆಚ್ಚುಗೆ ಸೂಚಿಸಿದ್ದಾರೆ.

ಶಿಖರ್​ ಧವನ್​
ಶಿಖರ್​ ಧವನ್​
author img

By

Published : Mar 26, 2023, 1:20 PM IST

ನವದೆಹಲಿ: ಲಯದ ಸಮಸ್ಯೆ ಮತ್ತು ಪ್ರತಿಭಾನ್ವಿತ ಆಟಗಾರರ ದಂಡೇ ಇರುವ ಕಾರಣ ಭಾರತ ಕ್ರಿಕೆಟ್​ ತಂಡದಿಂದ ಹೊರಗುಳಿದಿರುವ ಆರಂಭಿಕ ಆಟಗಾರ ಶಿಖರ್​ ಧವನ್​ ವಿಶ್ವಕಪ್​ಗೆ ಮರಳುವ ಆಶಾಭಾವನೆಯಲ್ಲಿದ್ದಾರೆ. ಇದೇ ವೇಳೆ ತಮ್ಮ ಸ್ಥಾನವನ್ನು ಆಕ್ರಮಿಸಿಕೊಂಡಿರುವ ಯುವ ಆಟಗಾರ ಶುಭಮನ್​ ಗಿಲ್​ ಆಟದ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ದ್ವಿಶತಕ ವೀರ ಶುಭ್​ಮನ್​ ಗಿಲ್​ ತನ್ನ ಸ್ಫೋಟಕ ಆಟದಿಂದಲೇ ಗುರುತಿಸಿಕೊಂಡಿದ್ದಾರೆ. ಅಂತಾರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯಲು ಸಾಕಷ್ಟು ಕಸರತ್ತು ಮಾಡಬೇಕು. ಅದರಲ್ಲಿ ಗಿಲ್ ಯಶಸ್ವಿಯಾಗಿದ್ದಾರೆ. ಒಂದು ವೇಳೆ ನಾನೇನಾದರೂ ಆಯ್ಕೆ ಸಮಿತಿಯಲ್ಲಿದ್ದರೆ ನನ್ನ ಬದಲಿಗೆ ಯುವ ಆಟಗಾರನ್ನೇ ತಂಡಕ್ಕೆ ಸೇರಿಸಿಕೊಳ್ಳುತ್ತಿದ್ದೆ ಎಂದು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಗಿಲ್ ಈ ಋತುವಿನಲ್ಲಿ ಕ್ರಿಕೆಟ್​ನ ಮೂರು ಸ್ವರೂಪಗಳಲ್ಲಿ ಅದ್ಭುತ ಫಾರ್ಮ್‌ನಲ್ಲಿದ್ದಾರೆ. 23 ವರ್ಷದ ಕ್ರಿಕೆಟಿಗ ವರ್ಷಾಂತ್ಯದಲ್ಲಿ ತವರಿನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ಗೆ ತಂಡದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ಫಾರ್ಮ್​ ಉಳಿಸಿಕೊಳ್ಳದ ಕಾರಣ ತಂಡದಿಂದ ಹೊರಗುಳಿದಿದ್ದೇನೆ ಎಂದು ಹೇಳಿದ್ದಾರೆ.

ಯುವ ಕ್ರಿಕೆಟಿಗ ಶುಭಮನ್​ ಗಿಲ್​, ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ದ್ವಿಶತಕ, ಟಿ20 ಸರಣಿಯಲ್ಲಿ ಶತಕ ಮತ್ತು ಅಹಮದಾಬಾದ್‌ನಲ್ಲಿ ಡ್ರಾಗೊಂಡ ನಾಲ್ಕನೇ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಶತಕ ಸೇರಿದಂತೆ ಈ ವರ್ಷ ಎಲ್ಲಾ ಮೂರು ಮಾದರಿ ಕ್ರಿಕೆಟ್​ನಲ್ಲಿ ಶತಕವನ್ನು ಬಾರಿಸಿದ್ದಾರೆ. ಇದು ಆಟಗಾರನ ನಿಜವಾದ ಸತ್ವವನ್ನು ತೋರಿಸುತ್ತದೆ. ಇಂತಹ ಆಟಗಾರ ಭಾರತ ಕ್ರಿಕೆಟ್​ ತಂಡಕ್ಕೆ ಅಗತ್ಯವಿದೆ ಎಂದು ಧವನ್​ ಅಭಿಪ್ರಾಯಪಟ್ಟಿದ್ದಾರೆ.

ವಿಶ್ವಕಪ್​ಗೆ ವಾಪಸ್​ ನಿರೀಕ್ಷೆ: 167 ಏಕದಿನ ಪಂದ್ಯವಾಡಿರುವ ಅನುಭವಿ ಆಟಗಾರ ಧವನ್, ಸ್ವದೇಶದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ಗೆ ಮರಳು ಆಶಾಭಾವನೆ ವ್ಯಕ್ತಪಡಿಸಿದ್ದಾರೆ. ಭಾರತ ತಂಡದಲ್ಲಿ ಇನ್ನೊಂದು ಅವಕಾಶದ ನಿರೀಕ್ಷೆ ಹೊಂದಿದ್ದಾರೆ. ನಾಯಕ ರೋಹಿತ್ ಶರ್ಮಾ ಮತ್ತು ಮುಖ್ಯ ಕೋಚ್​ ರಾಹುಲ್ ದ್ರಾವಿಡ್ ಅವರು ಈ ಹಿಂದೆ ತನಗೆ ಉತ್ತಮ ಬೆಂಬಲ ನೀಡಿದ್ದಾರೆ. ಲಯ ಕಳೆದುಕೊಂಡಾಗ ಏಕದಿನ ವಿಶ್ವಕಪ್‌ನತ್ತ ಗಮನ ಹರಿಸುವಂತೆ ಸಲಹೆ ನೀಡಿದ್ದರು. ಗಿಲ್ ಔನ್ನತ್ಯಕ್ಕೆ ಬಂದ ಬಳಿಕ ತಮ್ಮ ಸ್ಥಾನ ಅಭದ್ರಗೊಂಡಿತು ಎಂದು ಹೇಳಿದರು.

ಹೆದರಿಸಿದ್ದ ಇಶಾನ್​ ಕಿಶನ್​ ದ್ವಿಶತಕ: ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲಿ ಎಡಗೈ ದಾಂಡಿಗ ಇಶಾನ್ ಕಿಶನ್ ದ್ವಿಶತಕ ಸಿಡಿಸಿದಾಗ, ನಾನು ಇನ್ನು ತಂಡದಲ್ಲಿ ಸ್ಥಾನ ಪಡೆಯುವುದು ಕಷ್ಟವೇ ಎಂದು ಒಂದು ಕ್ಷಣ ಅನ್ನಿಸಿತ್ತು. ಯಾವುದೇ ಆಟಗಾರ ಫಾರ್ಮ್​ ಅನ್ನು ಸತತವಾಗಿ ಉಳಿಸಿಕೊಳ್ಳಲು ಸಾಧ್ಯವಿಲ್ಲ. ಸತತ ಪ್ರಯತ್ನದ ಬಳಿಕ ಮತ್ತೆ ಫಾರ್ಮ್​ಗೆ ಮರಳುತ್ತಾರೆ. ಈಗ ನನ್ನ ಸರದಿಯಾಗಿದೆ ಎಂದು ಹೇಳಿಕೊಂಡಿದ್ದಾರೆ.

ಕಳೆದ ವರ್ಷದ ಡಿಸೆಂಬರ್‌ನಲ್ಲಿ ಕೊನೆಯ ಬಾರಿಗೆ ಏಕದಿನ ಪಂದ್ಯವಾಡಿದ್ದ ಶಿಖರ್​ ಧವನ್, ಬಳಿಕ ಲಯದ ಸಮಸ್ಯೆಯಿಂದಾಗಿ ಭಾರತ ಅಂತಾರಾಷ್ಟ್ರೀಯ ಕ್ರಿಕೆಟ್​ ತಂಡದಿಂದ ಸತತವಾಗಿ ಹೊರಗುಳಿದಿದ್ದಾರೆ.

ಇದನ್ನೂ ಓದಿ: ನ್ಯೂಜಿಲ್ಯಾಂಡ್-​ ಶ್ರೀಲಂಕಾ ಪಂದ್ಯದಲ್ಲಿ ವಿಕೆಟ್​ಗಳ ಕಿರಿಕ್​: ದೀಪ ಉರಿಯದೇ ಆಟಗಾರರು ನಾಟೌಟ್​!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.