ಹರಾರೆ: ಆತಿಥೇಯ ಜಿಂಬಾಬ್ವೆ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭಿಕ ಬ್ಯಾಟರ್ ಶಿಖರ್ ಧವನ್ ಮತ್ತೊಂದು ದಾಖಲೆ ಬರೆದಿದ್ದಾರೆ. ಈ ಮೂಲಕ ಮಹತ್ವದ ಮೈಲಿಗಲ್ಲು ನಿರ್ಮಿಸಿರುವ ಭಾರತದ 10ನೇ ಆಟಗಾರ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾದರು.
ಜಿಂಬಾಬ್ವೆ ನೀಡಿರುವ 190 ರನ್ ಗುರಿ ಬೆನ್ನತ್ತಿರುವ ಶಿಖರ್ ಧವನ್ ಹಾಗೂ ಶುಬ್ಮನ್ ಗಿಲ್ ಜೋಡಿ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. 28 ರನ್ಗಳಿಸುತ್ತಿದ್ದಂತೆ ಗಬ್ಬರ್ ಸಿಂಗ್ ಖ್ಯಾತಿಯ ಧವನ್ ಏಕದಿನ ಕ್ರಿಕೆಟ್ನಲ್ಲಿ ಮೈಲಿಗಲ್ಲು ತಲುಪಿದರು. ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ನಲ್ಲಿ ಶಿಖರ್ ಧವನ್ 6,500 ರನ್ಗಳಿಕೆ ಮಾಡಿದ್ದು, ಈ ಸಾಧನೆ ಮಾಡಿರುವ ಭಾರತದ 10ನೇ ಪ್ಲೇಯರ್ ಆಗಿ ಹೊರಹೊಮ್ಮಿದ್ದಾರೆ.
-
6500 ODI runs and counting for @SDhawan25 👏👏#ZIMvIND pic.twitter.com/WVEWQ4ETuX
— BCCI (@BCCI) August 18, 2022 " class="align-text-top noRightClick twitterSection" data="
">6500 ODI runs and counting for @SDhawan25 👏👏#ZIMvIND pic.twitter.com/WVEWQ4ETuX
— BCCI (@BCCI) August 18, 20226500 ODI runs and counting for @SDhawan25 👏👏#ZIMvIND pic.twitter.com/WVEWQ4ETuX
— BCCI (@BCCI) August 18, 2022
ಇದನ್ನೂ ಓದಿ: ಭಾರತದ ಸಂಘಟಿತ ಬೌಲಿಂಗ್ ದಾಳಿಗೆ ಜಿಂಬಾಬ್ವೆ ತತ್ತರ: 189 ರನ್ಗಳಿಗೆ ಆಲೌಟ್
ಈಗಾಗಲೇ ಟೀಂ ಇಂಡಿಯಾ ಪರ ಸಚಿನ್ ತೆಂಡೂಲ್ಕರ್(18,426ರನ್), ವಿರಾಟ್ ಕೊಹ್ಲಿ(12,344ರನ್), ಸೌರವ್ ಗಂಗೂಲಿ(11,221ರನ್), ರಾಹುಲ್ ದ್ರಾವಿಡ್(10,768ರನ್), ಎಂಎಸ್ ಧೋನಿ(10,599ರನ್), ಅಜರುದ್ದೀನ್ (9,378ರನ್), ರೋಹಿತ್ ಶರ್ಮಾ(9,376), ಯುವರಾಜ್ ಸಿಂಗ್(8,609), ಹಾಗೂ ವಿರೇಂದ್ರ ಸೆಹ್ವಾಗ್(7,995ರನ್)ಗಳಿಸಿದ್ದಾರೆ. ಇದೀಗ ಶಿಖರ್ ಧವನ್ 6500ರನ್ಗಳಿಸುವ ಮೂಲಕ ದಿಗ್ಗಜರ ಸಾಲಿಗೆ ಸೇರಿದ್ದಾರೆ.
ದೀಪಕ್ ಚಹರ್ ಸಾಧನೆ: ಜಿಂಬಾಬ್ವೆ ವಿರುದ್ಧದ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ವೇಗಿ ದೀಪಕ್ ಚಹರ್ ಕೂಡ ದಾಖಲೆ ಬರೆದರು. ತಮ್ಮ 10 ಓವರ್ಗಳ ಕೋಟಾದಲ್ಲಿ 31ರನ್ ನೀಡುವ ಮೂಲಕ 3 ವಿಕೆಟ್ ಕಬಳಿಸಿರುವ ಈ ಪ್ಲೇಯರ್ ವೃತ್ತಿ ಜೀವನದ ಮಹತ್ವದ ಸಾಧನೆ ಮಾಡಿದ್ದಾರೆ. ಇಲ್ಲಿಯವರೆಗೆ ಅವರು ಯಾವುದೇ ಅಂತಾರಾಷ್ಟ್ರೀಯ ಪಂದ್ಯದಲ್ಲಿ 3 ವಿಕೆಟ್ ಪಡೆದುಕೊಂಡಿಲ್ಲ.