ETV Bharat / sports

ಐಸಿಸಿ ಮಹಿಳಾ ಟಿ-20 ಕ್ರಿಕೆಟ್‌ ಶ್ರೇಯಾಂಕ: ಅಗ್ರ ಸ್ಥಾನಕ್ಕೆ ಮರಳಿದ ಶೆಫಾಲಿ ವರ್ಮಾ

ICC Women's T20I Player Rankings: ಬ್ಯಾಟಿಂಗ್​ ವಿಭಾಗದಲ್ಲಿ ಶೆಫಾಲಿ ವರ್ಮಾ 759 ಅಂಕ, ಆಸ್ಟ್ರೇಲಿಯಾದ ಬೆತ್ ಮೂನಿ 744 ಹಾಗೂ ಟಿ20 ಕ್ರಿಕೆಟ್​ನ ಉಪನಾಯಕಿ ಸ್ಮೃತಿ ಮಂಧಾನ 716 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.

author img

By

Published : Sep 7, 2021, 7:07 PM IST

Shefali Verma
Shefali Verma

ದುಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಮಹಿಳಾ ಟಿ-20 ಕ್ರಿಕೆಟ್​ನ ನೂತನ ಶ್ರೇಯಾಂಕ ಬಿಡುಗಡೆ ಮಾಡಿದೆ. ಭಾರತದ ಮಹಿಳಾ ತಂಡದ ಆರಂಭಿಕ ಆಟಗಾರ್ತಿ ಶೆಫಾಲಿ ವರ್ಮಾ ನಂಬರ್​​ 1 ಸ್ಥಾನಕ್ಕೆ ಮರಳಿದ್ದಾರೆ.

ಆಲ್​ರೌಂಡರ್​ ವಿಭಾಗದಲ್ಲಿ ಭಾರತದ ದೀಪ್ತಿ ಶರ್ಮಾ ಮತ್ತೊಂದು ಸ್ಥಾನಕ್ಕೆ ಬಡ್ತಿ ಹೊಂದಿದ್ದು, ಸದ್ಯ 4ನೇ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ: ಪ್ರಿನ್ಸಿಪಾಲನಾ ಇಲ್ಲ ಪೋಲಿನಾ.. ಸಮವಸ್ತ್ರ ಹಾಕದ ವಿದ್ಯಾರ್ಥಿನಿಯರಿಗೆ ಬಟ್ಟೆಬಿಚ್ಚಿ ಎಂದ ಪ್ರಾಂಶುಪಾಲ..

ಬ್ಯಾಟಿಂಗ್​ ವಿಭಾಗದಲ್ಲಿ ಶೆಫಾಲಿ ವರ್ಮಾ 759 ಅಂಕ, ಆಸ್ಟ್ರೇಲಿಯಾದ ಬೆತ್ ಮೂನಿ 744 ಹಾಗೂ ಟಿ20 ಕ್ರಿಕೆಟ್​ನ ಉಪನಾಯಕಿ ಸ್ಮೃತಿ ಮಂಧಾನ 716 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ನಂತರದ ಸ್ಥಾನದಲ್ಲಿ ಆಸ್ಟ್ರೇಲಿಯಾದ ಮೆಗ್​ ಲ್ಯಾನಿಂಗ್​ 709 ಅಂಕ ಹೊಂದಿದ್ದಾರೆ.

ಬೌಲಿಂಗ್​ ವಿಭಾಗದಲ್ಲಿ ದಕ್ಷಿಣ ಆಫ್ರಿಕಾದ ಲಿಜೆಲ್​ ಲಿ ಮೂರು ಸ್ಥಾನ ಜಿಗಿತ ಕಂಡು ಎಂಟನೇ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾದ ಸ್ಕೌಟ್ ಅವರು​ 2ನೇ ಸ್ಥಾನದಲ್ಲಿದ್ದಾರೆ. ಇಂಗ್ಲೆಂಡ್​​ನ ಶೋಪಿ ಡಿವೈನ್​​ ಆಲ್​ರೌಂಡರ್​ ವಿಭಾಗದಲ್ಲಿ ಮುಂಚೂಣಿಯಲ್ಲಿದ್ದಾರೆ.

ಇಂಗ್ಲೆಂಡ್​​-ನ್ಯೂಜಿಲ್ಯಾಂಡ್​ ತಂಡಗಳ ನಡುವಿನ ಮೂರನೇ ಟಿ-20 ಪಂದ್ಯ ಮುಕ್ತಾಯವಾಗ್ತಿದ್ದಂತೆ ಐಸಿಸಿ, ಮಹಿಳಾ ವಿಭಾಗದ ಶ್ರೇಯಾಂಕ ಪಟ್ಟಿ ರಿಲೀಸ್ ಮಾಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.