ನವದೆಹಲಿ: ಆಸ್ಟ್ರೇಲಿಯಾದ ಮಾಜಿ ವೇಗದ ಬೌಲರ್ ಶಾನ್ ಟೈಟ್ ಅಫ್ಘಾನಿಸ್ತಾನದ ನೂತನ ಕೋಚ್ ಆಗಿ ನೇಮಕಗೊಂಡಿದ್ದಾರೆ. ಈ ವಿಚಾರವನ್ನು ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ಖಚಿತಪಡಿಸಿದೆ.
ಶಾನ್ ಟೈಟ್ ಆಸ್ಟ್ರೇಲಿಯಾ ಪರ 2005ರಿಂದ 2016ರವರೆಗೆ 35 ಏಕದಿನ ಪಂದ್ಯ, 21 ಟಿ20 ಮತ್ತು 3 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. ಒಟ್ಟು 95 ಅಂತಾರಾಷ್ಟ್ರೀಯ ವಿಕೆಟ್ ಪಡೆದಿದ್ದಾರೆ.
-
Former Australian Fast bowler Shaun Tait has been appointed Afghanistan National team’s bowling coach with immediate effect.
— Afghanistan Cricket Board (@ACBofficials) August 9, 2021 " class="align-text-top noRightClick twitterSection" data="
More: https://t.co/vhE5fEVa3H pic.twitter.com/Sf4aXaQQqM
">Former Australian Fast bowler Shaun Tait has been appointed Afghanistan National team’s bowling coach with immediate effect.
— Afghanistan Cricket Board (@ACBofficials) August 9, 2021
More: https://t.co/vhE5fEVa3H pic.twitter.com/Sf4aXaQQqMFormer Australian Fast bowler Shaun Tait has been appointed Afghanistan National team’s bowling coach with immediate effect.
— Afghanistan Cricket Board (@ACBofficials) August 9, 2021
More: https://t.co/vhE5fEVa3H pic.twitter.com/Sf4aXaQQqM
ತಮ್ಮ ವಿಚಿತ್ರ ಶೈಲಿಯ ಆ್ಯಕ್ಷನ್ ಮೂಲಕ ದ ವೈಲ್ಡ್ ಥಿಂಗ್ ಎಂದು ಅಡ್ಡ ಹೆಸರಿನಿಂದ ಖ್ಯಾತರಾಗಿದ್ದ ಟೈಟ್ 2017ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದರು. ಈ ಹಿಂದೆ ಅವರು ಬಿಬಿಎಲ್ನಲ್ಲಿ ಮೆಲ್ಬೋರ್ನ್ ರೆನಿಗೇಡ್ಸ್ ತಂಡದಲ್ಲಿ ಬೌಲಿಂಗ್ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಜೊತೆ ಟಿ10 ಮತ್ತು ಕೌಂಟಿ ತಂಡವಾದ ದುರ್ಹಾಮ್ ತಂಡದ ಕೋಚಿಂಗ್ ಸಿಬ್ಬಂದಿಯ ಭಾಗವಾಗಿದ್ದರು.
ನವೆಂಬರ್ನಲ್ಲಿ ಅಫ್ಘಾನಿಸ್ತಾನ ಏಕದಿನ ಸೂಪರ್ ಲೀಗ್ ಭಾಗವಾಗಿ ಪಾಕಿಸ್ತಾನದ ವಿರುದ್ಧ ಶ್ರೀಲಂಕಾದಲ್ಲಿ 3 ಪಂದ್ಯಗಳನ್ನಾಡಲಿದೆ. ಅಲ್ಲದೆ ಟಿ20 ವಿಶ್ವಕಪ್ಗೂ ಮುನ್ನ ಹೋಬರ್ಟ್ನಲ್ಲಿ ಆಸ್ಟ್ರೇಲಿಯಾ ವಿರುದ್ಧವೂ ಏಕೈಕ ಟೆಸ್ಟ್ ಪಂದ್ಯವನ್ನಾಡಲಿದೆ. ಈ ಸರಣಿಗಳಲ್ಲಿ ಟೈಟ್ ಅಫ್ಘಾನ್ ತಂಡದ ಭಾಗವಾಗಲಿದ್ದಾರೆ.
ಇದನ್ನು ಓದಿ:ಜೂನಿಯರ್ ರಾಷ್ಟ್ರೀಯ ಆಯ್ಕೆ ಸಮಿತಿ ಅಧ್ಯಕ್ಷರಾಗಿ ಮಾಜಿ ಕ್ರಿಕೆಟಿಗ ಶ್ರೀದರನ್ ಶರತ್ ನೇಮಕ