ಮೆಲ್ಬೋರ್ನ್: ಶಂಕಿತ ಹೃದಯಾಘಾತದಿಂದ ನಿಧನರಾದ ಖ್ಯಾತ ಕ್ರಿಕೆಟರ್ ಶೇನ್ ವಾರ್ನ್ ಅವರಿಗೆ ಆಸ್ಪ್ರೇಲಿಯಾದ ಮೆಲ್ಬೋರ್ನ್ ಕ್ರಿಕೆಟ್ ಮೈದಾನ (ಎಂಸಿಜಿ)ದಲ್ಲಿ ಸರ್ಕಾರಿ ಗೌರವಗಳನ್ನು ಸಲ್ಲಿಸಲು ತೀರ್ಮಾನಿಸಲಾಗಿದ್ದು, ಸುಮಾರು ಒಂದು ಲಕ್ಷ ಜನರು ಭಾಗಿಯಾಗುವ ನಿರೀಕ್ಷೆ ಇದೆ.
ಶುಕ್ರವಾರ ಥಾಯ್ಲೆಂಡ್ನಲ್ಲಿ ವಾರ್ನ್ ಹಠಾತ್ ನಿಧನರಾಗಿದ್ದರು. ಅಲ್ಲಿಂದ ಆಸ್ಪ್ರೇಲಿಯಾಕ್ಕೆ ಅವರ ಮೃತದೇಹ ಮರಳಿದ ಬಳಿಕ ಕುಟುಂಬಸ್ಥರು ಮತ್ತು ಆಪ್ತ ಸ್ನೇಹಿತರು ಅಂತಿಮ ದರ್ಶನ ಪಡೆಯಲಿದ್ದಾರೆ. ಅಂತ್ಯಸಂಸ್ಕಾರಕ್ಕೂ ಮುನ್ನ ಸಾರ್ವಜನಿಕವಾಗಿ ಸರ್ಕಾರಿ ಗೌರವ ಸಲ್ಲಿಸಲಾಗುತ್ತದೆ.
ಇದನ್ನೂ ಓದಿ: ವಾರ್ನ್ ಸಾವನ್ನಪ್ಪಿದ ಕೊಠಡಿಯ ನೆಲ, ಟವೆಲ್ಗಳಲ್ಲಿ ರಕ್ತದ ಕಲೆ ಪತ್ತೆ ಹಚ್ಚಿದ ಥಾಯ್ ಪೊಲೀಸ್
ಆಸ್ಪ್ರೇಲಿಯಾ ಫುಟ್ಬಾಲ್ ಲೀಗ್ ಆರಂಭವಾಗುವುದರಿಂದ ಅಂತ್ಯಸಂಸ್ಕಾರಕ್ಕೆ ಸ್ವಲ್ಪ ಅಡಚಣೆ ಉಂಟಾಗುವ ಸಾಧ್ಯತೆ ಬಗ್ಗೆಯೂ ವರದಿಯಾಗಿದೆ. ಆದರೂ, ಸ್ಪಿನ್ ಮಾಂತ್ರಿಕನಿಗೆ ಸಲ್ಲಬೇಕಾದ ಗೌರವ ಸಲ್ಲಿಸಲು ವ್ಯವಸ್ಥೆ ಮಾಡಲಾಗುತ್ತದೆ ಎಂದು ಹೇಳಲಾಗಿದೆ.
ಅಲ್ಲದೇ, ವಾರ್ನ್ ಪ್ರತಿಮೆ ಬಳಿ ಈಗಾಗಲೇ ಅಭಿಮಾನಿಗಳು ಹೂಗುಚ್ಛ ಮತ್ತು ಸಂತಾಪ ಪತ್ರಗಳನ್ನಿಟ್ಟು ಗೌರವ ಸಲ್ಲಿಸುತ್ತಿದ್ದಾರೆ ಎಂದು ವರದಿಯಾಗಿದೆ.