ಕ್ಯಾಂಡಿ (ಶ್ರೀಲಂಕಾ): ಪಾಕಿಸ್ತಾನದ ವೇಗಿ ಶಾಹೀನ್ ಶಾ ಆಫ್ರಿದಿ ಶನಿವಾರ 250 ಅಂತಾರಾಷ್ಟ್ರೀಯ ವಿಕೆಟ್ ಕಬಳಿಸಿದ ದಾಖಲೆಯನ್ನು ಮಾಡಿದ್ದಾರೆ. 23 ವರ್ಷದ ಬೌಲರ್ ಈ ಮೈಲುಗಲ್ಲನ್ನು ಏಷ್ಯಾಕಪ್ ಭಾರತದ ವಿರುದ್ಧ ಪಂದ್ಯದಲ್ಲಿ ನಾಲ್ಕು ಪಡೆದ ಅಫ್ರಿದಿ ಈ ಸಾಧನೆ ಮಾಡಿದ್ದಾರೆ. ಪಂದ್ಯದಲ್ಲಿ ಶಾಹೀನ್ 10 ಓವರ್‌ಗಳ ಕೋಟಾದಲ್ಲಿ ಕೇವಲ 35 ರನ್ ನೀಡಿ ನಾಲ್ಕು ವಿಕೆಟ್ ಪಡೆದರು.
ಅಫ್ರಿದಿ ಆರಂಭದಲ್ಲಿ ಸ್ಟಾರ್ ಬ್ಯಾಟರ್‌ಗಳಾದ ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ವಿಕೆಟ್ ಪಡೆದರು. ಇದಾದ ನಂತರ 87 ರನ್ ಗಳಿಸಿ ಶತಕದ ಸನಿಹದಲ್ಲಿದ್ದ ಅಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರ ವಿಕೆಟ್ ಪಡೆದರು. ಅಲ್ಲದೇ ಹಾರ್ದಿಕ್ ಬೆನ್ನಲ್ಲೇ ಎಡಗೈ ಬ್ಯಾಟರ್ ಜಡೇಜ ಅವರನ್ನು ಸಹ ಪೆವಿಲಿಯನ್ಗೆ ಕಳಿಸಿದರು.
-
All 10 wickets between them 🔥
— ICC (@ICC) September 2, 2023 " class="align-text-top noRightClick twitterSection" data="
Pakistan's pace trio was on song in Kandy 👌#INDvPAK | #AsiaCup2023 pic.twitter.com/99t2RlB4J4
">All 10 wickets between them 🔥
— ICC (@ICC) September 2, 2023
Pakistan's pace trio was on song in Kandy 👌#INDvPAK | #AsiaCup2023 pic.twitter.com/99t2RlB4J4All 10 wickets between them 🔥
— ICC (@ICC) September 2, 2023
Pakistan's pace trio was on song in Kandy 👌#INDvPAK | #AsiaCup2023 pic.twitter.com/99t2RlB4J4
ಶಾಹೀನ್ 120 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 23.81 ಸರಾಸರಿಯಲ್ಲಿ 251 ವಿಕೆಟ್‌ಗಳನ್ನು ಪಡೆದಿದ್ದಾರೆ. ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆರು ಬಾರಿ ಐದು ವಿಕೆಟ್ ಮತ್ತು ಒಂದು ಬಾರಿ ಹತ್ತು ವಿಕೆಟ್‌ಗಳನ್ನು ಪಡೆದಿದ್ದಾರೆ. 27 ಟೆಸ್ಟ್‌ಗಳಲ್ಲಿ ಅವರು 25.58 ಸರಾಸರಿಯಲ್ಲಿ 105 ವಿಕೆಟ್‌ಗಳನ್ನು ಪಡೆದಿದ್ದು, 51 ರನ್ ಕೊಟ್ಟು 6 ವಿಕೆಟ್ ಕಬಳಿಸಿರುವುದು ಉತ್ತಮ ಪ್ರದರ್ಶನವಾಗಿದೆ. ಅವರು ಟೆಸ್ಟ್‌ನಲ್ಲಿ ನಾಲ್ಕು ಐದು ವಿಕೆಟ್‌ಗಳು ಮತ್ತು ಒಮ್ಮೆ ಹತ್ತು ವಿಕೆಟ್‌ಗಳ ಸಾಧನೆ ಮಾಡಿದ್ದಾರೆ.
41 ಏಕದಿನ ಪಂದ್ಯಗಳನ್ನು ಆಡಿರುವ ಶಾಹೀನ್ 25.0 ಸರಾಸರಿಯಲ್ಲಿ 82 ವಿಕೆಟ್‌ಗಳನ್ನು ಪಡೆದರೆ, ಅದರಲ್ಲಿ 35 ರನ್ ಕೊಟ್ಟು 6 ವಿಕೆಟ್ ಪಡೆದಿರುವುದು ಅತ್ಯುತ್ತಮ ಬೌಲಿಂಗ್ ಅಂಕಿಅಂಶ ಆಗಿದೆ. ಏಕದಿನದಲ್ಲಿ ಎರಡು ಸಲ ಐದು ವಿಕೆಟ್‌ಗಳನ್ನು ಕಬಳಿಸಿದ್ದಾರೆ. 52 ಟಿ20ಯಲ್ಲಿ ಶಾಹೀನ್ 22.73 ರ ಸರಾಸರಿಯಲ್ಲಿ 64 ವಿಕೆಟ್‌ಗಳನ್ನು ಪಡೆದಿದ್ದಾರೆ.
-
A classic spell from Shaheen Afridi.
— Johns. (@CricCrazyJohns) September 2, 2023 " class="align-text-top noRightClick twitterSection" data="
4 for 35 from 10 overs with the wickets of Rohit, Kohli, Hardik, Jadeja.
One of the finest spell in Asia Cup history. pic.twitter.com/xMusRuF9b9
">A classic spell from Shaheen Afridi.
— Johns. (@CricCrazyJohns) September 2, 2023
4 for 35 from 10 overs with the wickets of Rohit, Kohli, Hardik, Jadeja.
One of the finest spell in Asia Cup history. pic.twitter.com/xMusRuF9b9A classic spell from Shaheen Afridi.
— Johns. (@CricCrazyJohns) September 2, 2023
4 for 35 from 10 overs with the wickets of Rohit, Kohli, Hardik, Jadeja.
One of the finest spell in Asia Cup history. pic.twitter.com/xMusRuF9b9
ಶಾಹೀನ್ ಒಟ್ಟಾರೆಯಾಗಿ 23 ನೇ ವಯಸ್ಸಿನಲ್ಲಿ ಪಾಕಿಸ್ತಾನದ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ 16 ನೇ ಬೌಲರ್ ಆಗಿದ್ದಾರೆ. ಅವರು ವಾಸಿಂ ಅಕ್ರಮ್ (916 ವಿಕೆಟ್), ವಕಾರ್ ಯೂನಿಸ್ (789 ವಿಕೆಟ್), ಇಮ್ರಾನ್ ಖಾನ್ (544 ವಿಕೆಟ್), ಶಾಹಿದ್ ಅಫ್ರಿದಿ (538 ವಿಕೆಟ್) ಮತ್ತು ಸಕ್ಲೇನ್ ಮುಷ್ತಾಕ್ (496 ವಿಕೆಟ್), ನಂತಹ ದಿಗ್ಗಜ ಬೌಲರ್ಗಳನ್ನು ಹಿಂದಿಕ್ಕುವತ್ತ ದಾಪುಗಾಲು ಹಾಕುತ್ತಿದ್ದಾರೆ.
ಪಂದ್ಯದಲ್ಲಿ: ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿದ ಭಾರತ ತಂಡ ಆರಂಭಿಕ ಆಘಾತ ಅನುಭವಿಸಿತು. ಅನುಭವಿ ಬ್ಯಾಟರ್‌ಗಳಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಬೇಗ ವಿಕೆಟ್ ಕೊಟ್ಟರು. ಅಲ್ಲದೇ ಪ್ರಿನ್ಸ್ ಎಂದೇ ಕರೆಸಿಕೊಳ್ಳುತ್ತಿರುವ ಶುಭಮನ್ ಗಿಲ್ ಮತ್ತು ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಪುನರಾಗಮನ ಮಾಡಿದ ಅಯ್ಯರ್ ಸಹ ಫ್ಲಾಫ್ ಶೋ ಕೊಟ್ಟರು.
ಇವರ ನಂತರ ಮಧ್ಯಮ ಕ್ರಮಾಂಕದಲ್ಲಿ ಕಿಶನ್ ಮತ್ತು ಹಾರ್ದಿಕ್ 138 ರನ್ ಜೊತೆಯಾಟದ ಫಲವಾಗಿ ಭಾರತ ಉತ್ತಮ ಕಮ್ಬ್ಯಾಕ್ ಮಾಡಿತು. 48.5 ಓವರ್ಗೆ ಭಾರತ ಸರ್ವಪತನ ಕಂಡರೂ 266 ರನ್ ಕಲೆಗ ಹಾಕಿ ಸ್ಪರ್ಧಾತ್ಮಕ ಗುರಿಯನ್ನೇ ನೀಡಿತು. ಆದರೆ ಎರಡನೇ ಇನ್ನಿಂಗ್ಸ್ಗೆ ಮಳೆ ಅವಕಾಶ ಕೊಡದ ಕಾರಣ ಪಂದ್ಯವನ್ನು ರದ್ದು ಮಾಡಲಾಯಿತು.
ಇದನ್ನೂ ಓದಿ: ಏಷ್ಯಾಕಪ್ 2023: ಎರಡನೇ ಇನ್ನಿಂಗ್ಸ್ಗೆ ಮಳೆ ಅಡ್ಡಿ.. ಸೂಪರ್ ಫೋರ್ ಎಂಟ್ರಿ ಕೊಟ್ಟ ಪಾಕ್