ETV Bharat / sports

ಮಂದಾನ, ಕೌರ್​ ಜೊತೆಗೆ ಬಿಗ್​ಬ್ಯಾಶ್​ನಲ್ಲಿ​ ಆಡಲಿದ್ದಾರೆ ಶೆಫಾಲಿ ವರ್ಮಾ - ವುಮೆನ್ಸ್ ಬಿಗ್​ಬ್ಯಾಶ್ ಲೀಗ್​

ಶೆಫಾಲಿ ಟಿ-20 ತಂಡದ ನಾಯಕಿ ಹರ್ಮನ್​ ಪ್ರೀತ್ ಕೌರ್( ಸಿಡ್ನಿ ಥಂಡರ್) ಆರಂಭಿಕ ಆಟಗಾರ್ತಿ ಸ್ಮೃತಿ ಮಂದಾನ(ಬ್ರಿಸ್ಬೇನ್ ಹೀಟ್​) ಮತ್ತು ಆಲ್​ರೌಂಡರ್ ವೇದಾ ಕೃಷ್ಣಮೂರ್ತಿ (ಹೋಬರ್ಟ್​ ಹರಿಕೇನ್ಸ್​) ಜೊತೆಗೆ ವುಮೆನ್ಸ್​ ಬಿಬಿಎಲ್​ನಲ್ಲಿ ಭಾಗವಹಿಸಲಿದ್ದಾರೆ.

ಸ್ಮೃತಿ ಮಂದಾನ
ಸ್ಮೃತಿ ಮಂದಾನ
author img

By

Published : May 13, 2021, 5:04 PM IST

ನವದೆಹಲಿ: ಭಾರತ ಮಹಿಳಾ ತಂಡದ ಸೂಪರ್ ಸ್ಟಾರ್​ ಶೆಫಾಲಿ ವರ್ಮಾ ಮುಂಬರುವ ವುಮೆನ್ಸ್​ ಬಿಗ್​ಬ್ಯಾಶ್​ನಲ್ಲಿ 2 ಬಾರಿಯ ಚಾಂಪಿಯನ್​ ಸಿಡ್ನಿ ಸಿಕ್ಸರ್​ ಪರ ಪದಾರ್ಪಣೆ ಮಾಡಲಿದ್ದಾರೆ.

17 ವರ್ಷದ ಸ್ಫೋಟಕ ಬ್ಯಾಟರ್​ ಎಡಗೈ ಸ್ಪಿನ್ನರ್​ ರಾಧ ಯಾದವ್​ ಜೊತೆಗೆ ಸಿಡ್ನಿ ಸಿಕ್ಸರ್​ ಜೊತೆ ಆಡುವ ನಿರೀಕ್ಷೆಯಲ್ಲಿದ್ದಾರೆ. ರಾಧ ಜೊತೆ ಸಿಕ್ಸರ್​ ಫ್ರಾಂಚೈಸಿ ಮಾತುಕತೆ ನಡೆಸುತ್ತಿದೆ.

ಶೆಫಾಲಿ ಒಪ್ಪಂದ ಮುಗಿದಿದೆ. ವುಮೆನ್ಸ್ ಬಿಗ್​ಬ್ಯಾಶ್​ ವೇಳಾಪಟ್ಟಿ ಬಿಡುಗಡೆಯಾಗುತ್ತಿದ್ದಂತೆ ಇದನ್ನು ಫ್ರಾಂಚೈಸಿ ಘೋಷಿಸಲಿದೆ. ಇನ್ನು ರಾಧ ಯಾದವ್​ ಕೂಡ್​ ಸಿಡ್ನಿ ಸಿಕ್ಸರ್​ ಜೊತೆ ಮಾತುಕತೆ ನಡೆಸಿದ್ದಾರೆ ಎಂದು ಬಿಸಿಸಿಐ ಮೂಲಗಳು ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿವೆ.

ಇನ್ನು ಶೆಪಾಲಿ ಇನ್ನೂ ಮೈನರ್ ಆಗಿರುವುದರಿಂದ ಅವರ ತಂದೆಯೂ ಕೂಡ ಈ ಒಪ್ಪಂದಕ್ಕೆ ಸಹಿ ಹಾಕಬೇಕಿದೆ. ಶೆಫಾಲಿ ಟಿ-20 ತಂಡದ ನಾಯಕಿ ಹರ್ಮನ್​ ಪ್ರೀತ್ ಕೌರ್( ಸಿಡ್ನಿ ಥಂಡರ್) ಆರಂಭಿಕ ಆಟಗಾರ್ತಿ ಸ್ಮೃತಿ ಮಂದಾನ(ಬ್ರಿಸ್ಬೇನ್ ಹೀಟ್​) ಮತ್ತು ಆಲ್​ರೌಂಡರ್ ವೇದಾ ಕೃಷ್ಣಮೂರ್ತಿ (ಹೋಬರ್ಟ್​ ಹರಿಕೇನ್ಸ್​) ಜೊತೆಗೆ ವುಮೆನ್ಸ್​ ಬಿಬಿಎಲ್​ನಲ್ಲಿ ಭಾಗವಹಿಸಲಿದ್ದಾರೆ.

ವಿಶ್ವದ ನಂಬರ್ ಒನ್ ಟಿ-20 ಆಟಗಾರ್ತಿಯಾಗಿರುವ ಶೆಫಾಲಿ ಇಂಗ್ಲೆಂಡ್​ನಲ್ಲಿ ನಡೆಯಲಿರುವ ದಿ ಹಂಡ್ರೆಡ್ ಲೀಗ್​ನಲ್ಲಿ ಬರ್ಮಿಂಗ್​ಹ್ಯಾಮ್ ಫೊಯಿನಿಕ್ಸ್ ತಂಡದ ಪರ ಆಡಲಿದ್ದಾರೆ. 100 ಎಸೆತಗಳ ಈ ಲೀಗ್​ ಜುಲೈ 21ರಿಂದ ಆರಂಭವಾಗಲಿದೆ. ಡಬ್ಲ್ಯುಬಿಬಿಎಲ್ ಈ ವರ್ಷದ ಕೊನೆಯಲ್ಲಿ ನಡೆಯಲಿದೆ.

ಇದನ್ನು ಓದಿ:ಸರಣಿ ವೇಳೆ ಗೊಂದಲ ಉಂಟು ಮಾಡಿ ಲಾಭ ಪಡೆಯುವುದರಲ್ಲಿ ಭಾರತೀಯರು ನಿಸ್ಸೀಮರು: ನಾಲಿಗೆ ಹರಿಬಿಟ್ಟ ಪೇನ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.