ETV Bharat / sports

ಸೂರ್ಯಕುಮಾರ್ ಯಾದವ್ '360 ಡಿಗ್ರಿ' ಆಟದ ಹಿಂದಿನ ಪಂಚಸೂತ್ರಗಳಿವು..! - indian star batsman suryakumar yadav

ಕ್ರೀಡಾಂಗಣದ ಎಲ್ಲಾ ದಿಕ್ಕುಗಳಿಗೂ ಚೆಂಡಿನ ದರ್ಶನ ಮಾಡಿಸುವ ಆಟಗಾರ ಸೂರ್ಯಕುಮಾರ್ ಯಾದವ್ ಕಳೆದೊಂದು ವರ್ಷದಿಂದ ಫಿಟ್ನೆಸ್‌ ಮತ್ತು ಕಟ್ಟುನಿಟ್ಟಾದ ಆಹಾರ ಪದ್ದತಿಯನ್ನು ಪಾಲಿಸುತ್ತಿದ್ದಾರೆ.

How Suryakumar Yadav Took T20 World Cup By Storm
ಸೂರ್ಯಕುಮಾರ್ ಯಾದವ್
author img

By

Published : Nov 9, 2022, 11:54 AM IST

ಟಿ20 ವಿಶ್ವಕಪ್‌ನಲ್ಲಿ ಬಿರುಗಾಳಿಯಂತಹ ಬ್ಯಾಟಿಂಗ್ ಶೈಲಿಯಿಂದ ಕ್ರಿಕೆಟ್‌ ಲೋಕವೇ ಹುಬ್ಬೇರಿಸುವಂತೆ ಮಾಡಿದ ಭಾರತೀಯ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್, ಅತ್ಯಂತ ಕಡಿಮೆ ಸಮಯದಲ್ಲಿ ಸಾಧನೆಯ ಶಿಖರವನ್ನೇರುತ್ತಿದ್ದಾರೆ. ಇದಕ್ಕಾಗಿ ಅವರು ಅನುಸರಿಸುತ್ತಿರುವ ಅತ್ಯುತ್ತಮ ಆಹಾರ ಪದ್ಧತಿಯೂ ಕೂಡಾ ಬಹುಮುಖ್ಯಪಾತ್ರ ವಹಿಸುತ್ತಿದೆ. ಈ ವಿಚಾರವನ್ನು ಅವರೇ ಮಾಧ್ಯಮಗಳಿಗೆ ಹೇಳಿದ್ದಾರೆ.

ಸೂರ್ಯ ಅವರ ಆಹಾರ ಪದ್ಧತಿಯು ಪಂಚಸೂತ್ರಗಳಿಂದ ಕೂಡಿದೆ. ಮೊದಲನೆಯದು ಕಟ್ಟುನಿಟ್ಟಿನ ತರಬೇತಿಯ ಮೂಲಕ ಪ್ರತಿ ಪಂದ್ಯದಲ್ಲೂ ಕ್ಷಮತೆ ಹೆಚ್ಚಿಸುವುದು, ಎರಡನೆಯದು ದೇಹದ ಬೊಜ್ಜು (ಶೇ12-15) ಕಡಿಮೆಗೊಳಿಸುವುದು, ಮೂರನೆಯಾದಾಗಿ ಮನಸ್ಸು, ದೇಹ ಸದಾ ಲವಲವಿಕೆಯಿಂದಿರುವಂತೆ ನೋಡಿಕೊಳ್ಳುವುದು, ನಾಲ್ಕನೆಯದು ಬಯಕೆಗಳ ನಿಯಂತ್ರಣ ಹಾಗು ಕೊನೆಯಾದಾಗಿ ಸೋಲಿನಿಂದ ಬೇಗ ಚೇತರಿಕೆ ಕಾಣುವುದು. ಈ ಐದು ಅಂಶಗಳು ಕ್ರೀಡಾಪಟುಗಳಿಗೆ ಅತ್ಯಂತ ಮುಖ್ಯ ಎನ್ನುತ್ತಾರೆ ಸೂರ್ಯ ಕುಮಾರ್ ಯಾದವ್. ಮೀನು, ಮೊಟ್ಟೆ, ಮಾಂಸ ಸೇವನೆ ಇವರು ಪೌಷ್ಟಿಕಾಂಶಯುಕ್ತ ಆಹಾರದ ಭಾಗ. ಆದರೆ ಜಂಕ್ ಪುಡ್ ಸೇವನೆಗೆ ಸುತರಾಂ ಇವರು ಒಪ್ಪಲ್ಲ.

ಈ ಬಗ್ಗೆ ಕೋಚ್ ರಾಹುಲ್ ದ್ರಾವಿಡ್ ಪ್ರತಿಕ್ರಿಯಿಸಿ, ‘‘ಕಳೆದ ಎರಡು ವರ್ಷಗಳಿಂದ ಸೂರ್ಯರನ್ನು ನೋಡುತ್ತಿದ್ದೇನೆ. ಅವರು ತಮ್ಮ ದೇಹ, ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದರು. ಫಿಟ್ನೆಸ್​ಗಾಗಿ ಕಠಿಣ ತರಬೇತಿ ಪಡೆಯುತ್ತಿದ್ದರು. ಈಗ ಪರಿಶ್ರಮಕ್ಕೆ ಪ್ರತಿಫಲ ಸಿಗುತ್ತಿದೆ’’ ಎಂದರು.

ಇದನ್ನೂ ಓದಿ: ವಿರಾಟ್​ ಕೊಹ್ಲಿಯೂ ಸಾಧಿಸದ ದಾಖಲೆ ಬರೆದ ಸೂರ್ಯಕುಮಾರ್​​​.. ಏನದು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.