ETV Bharat / sports

ನಾಲ್ಕು ವರ್ಷಗಳ ನಂತರ ಐರ್ಲೆಂಡ್​ ಪ್ರವಾಸಕ್ಕೆ ಭಾರತ.. ಕೊಹ್ಲಿ-ರೋಹಿತ್ ಅಲಭ್ಯ

ದ್ವಿತೀಯ ದರ್ಜೆಯ ಭಾರತ ತಂಡ ಈ ಪ್ರವಾಸ ಕೈಗೊಳ್ಳಲಿದ್ದು, ಮಲಾಹೈಡ್​ನಲ್ಲಿ ಜೂನ್ 26 ಮತ್ತು 28ರಂದು 2 ಟಿ20 ಪಂದ್ಯದಲ್ಲಿ ಮುಖಾಮುಖಿಯಾಗಲಿವೆ ಎಂದು ಐರ್ಲೆಂಡ್​ ಕ್ರಿಕೆಟ್​ ಮಂಡಳಿ ಬುಧವಾರ ಖಚಿತಪಡಿಸಿದೆ.

Second-string India to play Ireland in two T20 Internationals
ಭಾರತ vs ಐರ್ಲೆಂಡ್ ಟಿ20
author img

By

Published : Mar 2, 2022, 3:45 PM IST

ಮುಂಬೈ: ಭಾರತ ನಾಲ್ಕು ವರ್ಷಗಳ ನಂತರ ಐರ್ಲೆಂಡ್​ ಪ್ರವಾಸ ಕೈಗೊಳ್ಳುತ್ತಿದ್ದು, ಟೀಮ್​ ಇಂಡಿಯಾ ಅತಿಥೇಯ ತಂಡದ ವಿರುದ್ಧ 2 ಪಂದ್ಯಗಳ ಟಿ20 ಸರಣಿಯನ್ನಾಡಲಿದೆ. ದ್ವಿತೀಯ ದರ್ಜೆಯ ಭಾರತ ತಂಡ ಈ ಪ್ರವಾಸ ಕೈಗೊಳ್ಳಲಿದ್ದು, ಮಲಾಹೈಡ್​ನಲ್ಲಿ ಜೂನ್ 26 ಮತ್ತು 28ರಂದು 2 ಟಿ20 ಪಂದ್ಯದಲ್ಲಿ ಮುಖಾಮುಖಿಯಾಗಲಿವೆ ಎಂದು ಐರ್ಲೆಂಡ್​ ಕ್ರಿಕೆಟ್​ ಮಂಡಳಿ ಬುಧವಾರ ಖಚಿತಪಡಿಸಿದೆ.

ಆದರೆ ಈ ಸರಣಿಯಲ್ಲಿ ಸ್ಟಾರ್​ ಆಟಗಾರರಾದ ವಿರಾಟ್​ ಕೊಹ್ಲಿ, ನಾಯಕ ರೋಹಿತ್ ಶರ್ಮಾ ಮತ್ತು ಪ್ರಥಮ ಆಯ್ಕೆಯ ವಿಕೆಟ್ ಕೀಪರ್ ರಿಷಭ್ ಪಂತ್​ ಹಾಗೂ ಮುಂಚೂಣಿ ವೇಗಿ ಜಸ್ಪ್ರೀತ್ ಬುಮ್ರಾ ಆಡುವ ಸಾಧ್ಯತೆಯಿಲ್ಲ. ಇವರೆಲ್ಲರೂ ಜುಲೈ 1-5ರವರೆಗೆ ಕಳೆದ ವರ್ಷ ಇಂಗ್ಲೆಂಡ್​ ಪ್ರವಾಸದಲ್ಲಿ ಉಳಿದಿರುವ ಕೊನೆಯ ಟೆಸ್ಟ್​ ಪಂದ್ಯವನ್ನಾಡಲಿದೆ.

ಈ ಬೇಸಿಗೆಯಲ್ಲಿ ಭಾರತ, ನ್ಯೂಜಿಲ್ಯಾಂಡ್ ಮತ್ತು ಅಫ್ಘಾನಿಸ್ತಾನ ತಂಡಗಳು ಐರ್ಲೆಂಡ್​ಗೆ ಪ್ರವಾಸ ಕೈಗೊಳ್ಳುತ್ತಿವೆ. ನಂತರ ಬ್ರಿಸ್ಟೋಲ್​ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆಡಲಿದ್ದೇವೆ. ನಾವು ಈ ಬಾರಿ ಐರ್ಲೆಂಡ್​ ಕ್ರಿಕೆಟ್​ ಇತಿಹಾಸದಲ್ಲೇ ದೊಡ್ಡ ಅಂತಾರಾಷ್ಟ್ರೀಯ ಆವೃತ್ತಿಯನ್ನು ಹೊಂದಲಿದ್ದೇವೆ ಎಂದು ಕ್ರಿಕೆಟ್ ಐರ್ಲೆಂಡ್ ಟ್ವೀಟ್ ಮಾಡಿದೆ.

ಭಾರತ ಐರ್ಲೆಂಡ್ ವಿರುದ್ಧ ಸರಣಿಯ ನಂತರ ಇಂಗ್ಲೆಂಡ್​ ವಿರುದ್ಧ ಜುಲೈ 7ರಿಂದ ತಲಾ 3 ಏಕದಿನ ಮತ್ತು ಟಿ20 ಪಂದ್ಯಗಳನ್ನಾಡಲಿದೆ.

ಇದನ್ನೂ ಓದಿ:ಅಭಿಮಾನಿಗಳ ಆಕ್ರೋಶಕ್ಕೆ ಮಣಿದ ಬಿಸಿಸಿಐ: ಕೊಹ್ಲಿಯ 100ನೇ ಟೆಸ್ಟ್​ಗೆ ಪ್ರೇಕ್ಷಕರಿಗೆ ಅವಕಾಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.