ETV Bharat / sports

ವಿಜಯ್​ ಹಜಾರೆ ಟ್ರೋಫಿ​: ಇಂದು ಸೌರಾಷ್ಟ್ರ-ಮಹಾರಾಷ್ಟ್ರ ಫೈನಲ್‌, ಯಾರಿಗೆ ಚೊಚ್ಚಲ ಕಪ್​? - ETV Bharath Kannada

ವಿಜಯ್‌ ಹಜಾರೆ ಟ್ರೋಫಿ: ಟೂರ್ನಿಯಲ್ಲಿ ಒಂದೂ ಸೋಲನುಭವಿಸದೇ ಫೈನಲ್​ ಪ್ರವೇಶಿಸಿರುವ ಮಹಾರಾಷ್ಟ್ರ ಹೆಚ್ಚಿನ ಅಂಕಗಳಿಸಿದ್ದು, ಕಪ್ ಗೆಲ್ಲುವು ನೆಚ್ಚಿನ ತಂಡವೂ ಹೌದು.

Saurashtra vs Maharashtra vijay hazare final
ವಿಜಯ್​ ಹಜಾರೆ ಫೈನಲ್​: ಯಾರ ಮಡಿಲಿಗೆ ಬೀಳಲಿದೆ ಚೊಚ್ಚಲ ಕಪ್​
author img

By

Published : Dec 2, 2022, 8:24 AM IST

Updated : Dec 2, 2022, 10:36 AM IST

ಅಹಮದಾಬಾದ್​: ರಾಷ್ಟ್ರೀಯ ಏಕದಿನ ಟೂರ್ನಿಯಾದ ವಿಜಯ್​ ಹಜಾರೆ ಟ್ರೋಫಿ ಫೈನಲ್​ ಹಣಾಹಣಿಯಲ್ಲಿ ಇಂದು ಸೌರಾಷ್ಟ್ರ ಮತ್ತು ಮಹಾರಾಷ್ಟ್ರ ತಂಡಗಳು ಸೆಣಸಲಿವೆ. ಉನಾದ್ಕತ್​ ನಾಯಕತ್ವದ ಸೌರಾಷ್ಟ್ರದ ಬಲಿಷ್ಠ ಬೌಲಿಂಗ್​ ಪಡೆಯನ್ನು 'ಮಹಾ' ಬ್ಯಾಟರ್​ಗಳು ಎದುರಿಸಬೇಕಿದೆ.

ಮೊದಲ ಬಾರಿಗೆ ಚೊಚ್ಚಲ ಪ್ರಶಸ್ತಿ ಮುಡಿಗೇರಿಸಿಕೊಳ್ಳಲು ಮಹಾರಾಷ್ಟ್ರ ಕಾತುರವಾಗಿದ್ದರೆ, ಮೂರನೇ ಬಾರಿ ಫೈನಲ್​ ಎದುರಿಸುತ್ತಿರುವ ಸೌರಾಷ್ಟ್ರ ಕೂಡಾ ಮೊದಲ ಕಪ್​ ಗೆಲ್ಲಲು ತವಕಿಸುತ್ತಿದೆ. ಒಂದೂ ಪಂದ್ಯದಲ್ಲೂ ಸೋಲು ಕಾಣದೇ ಫೈನಲ್‌ಗೇರಿರುವ ಮಹಾರಾಷ್ಟ್ರ ಕಪ್​ ಗೆಲ್ಲುವ ಫೇವರಿಟ್‌​ ತಂಡ ಎನಿಸಿಕೊಂಡಿದೆ. ಟೂರ್ನಿಯುದ್ದಕ್ಕೂ ಎರಡೇ ಸೋಲು ಕಂಡಿರುವ ಸೌರಾಷ್ಟ್ರ ತನ್ನ ಬೌಲಿಂಗ್​ ಬಲವನ್ನು ನೆಚ್ಚಿಕೊಂಡಿದೆ.

ಮಹಾರಾಷ್ಟ್ರ ತಂಡದ ಬಲಾಢ್ಯ ಬ್ಯಾಟರ್‌, ಏಳು ಸಿಕ್ಸರ್‌ಗಳಿಸಿದ ಋತುರಾಜ್​ ಗಾಯಕ್ವಾಡ್​ 4 ಪಂದ್ಯದಲ್ಲಿ 552 ರನ್​ ಕಲೆ ಹಾಕಿ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಹಾಗೆಯೇ ಅಂಕಿತ್​ ಬಾವ್ನೆ ಕೂಡ ಮಹಾ ತಂಡದ ಬೆನ್ನೆಲುಬು. ಇವರು ಕಳೆದ ಎಂಟು ಪಂದ್ಯಗಳಲ್ಲಿ 571 ರನ್​ ಪೇರಿಸಿದ್ದಾರೆ. ಸೌರಾಷ್ಟ್ರ ನಾಯಕ ಉನಾದ್ಕತ್​ 18 ವಿಕೆಟ್​ ಪಡೆದಿದ್ದಾರೆ. ಅಲ್ಲದೇ ತಂಡದಲ್ಲಿರುವ ಪ್ರೇರಕ್​ ಮಂಕಡ್​, ಧಮೇಂದ್ರ ಜಡೇಜಾ ಮಹಾರಾಷ್ಟ್ರ ಬ್ಯಾಟರ್​ಗಳನ್ನು ಕಾಡಲು ಸಿದ್ಧರಾಗಿದ್ದಾರೆ.

ಪಂದ್ಯ ಎಲ್ಲಿ, ನೋಡುವುದು ಹೇಗೆ?: ಪಂದ್ಯ ಬೆಳಗ್ಗೆ 9 ಕ್ಕೆ ಅಹಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಸ್ಟಾರ್​ ಸ್ಪೋರ್ಟ್ಸ್1 ರಲ್ಲಿ ನೇರಪ್ರಸಾರ ವೀಕ್ಷಿಸಬಹುದು.

ಇದನ್ನೂ ಓದಿ: ಒಂದೇ ದಿನದಲ್ಲಿ 500 ರನ್​.. ಟೆಸ್ಟ್​ನಲ್ಲಿ 112 ವರ್ಷಗಳ ದಾಖಲೆ ಮುರಿದ ಇಂಗ್ಲೆಂಡ್​

Last Updated : Dec 2, 2022, 10:36 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.