ಹೈದರಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ನ 15ನೇ ಆವೃತ್ತಿ ಆರಂಭಗೊಳ್ಳಲು ಕೇವಲ ಒಂದು ದಿನ ಬಾಕಿ ಉಳಿದಿದೆ. ಇದರ ಮಧ್ಯೆ ರಾಜಸ್ಥಾನ ರಾಯಲ್ಸ್ ಸೋಷಿಯಲ್ ಮೀಡಿಯಾ ತಂಡದ ವಿರುದ್ಧ ಕ್ಯಾಪ್ಟನ್ ಸಂಜು ಸ್ಯಾಮ್ಸನ್ ಗರಂ ಆಗಿದ್ದು, ತಂಡಗಳು ವೃತ್ತಿಪರವಾಗಿರಬೇಕು ಎಂದಿದ್ದಾರೆ.
ಸದಾ ಒಂದಿಲ್ಲೊಂದು ವಿಚಾರವನ್ನಿಟ್ಟುಕೊಂಡು ರಾಜಸ್ಥಾನ ರಾಯಲ್ಸ್ ಸೋಷಿಯಲ್ ಮೀಡಿಯಾ ಸಕ್ರಿಯವಾಗಿರುತ್ತದೆ. ಕಳೆದ ಕೆಲ ದಿನಗಳ ಹಿಂದೆ ತಂಡದ ಹೊಸ ನಾಯಕ ಇವರೇ ನೋಡಿ ಎಂದು ಯಜುವೇಂದ್ರ ಚಹಲ್ ತಮ್ಮ ಫೋಟೋ ಟ್ವೀಟ್ ಮಾಡಿಕೊಂಡಿದ್ದರು. ಈ ಟ್ವೀಟ್ಗೆ ನಾಯಕ ಸಂಜು ಸಾಮ್ಸನ್ ಕೂಡ ಪ್ರತಿಕ್ರಿಯಿಸಿದ್ದು, ಅಭಿನಂದನೆ ಸಲ್ಲಿಸಿದ್ದರು. ಆದರೆ, ಆರ್ಆರ್ ಮಾಡಿರುವ ಟ್ವೀಟ್ವೊಂದು ಇದೀಗ ಅತಿರೇಕವಾಗಿದ್ದು, ಇದರ ವಿರುದ್ಧ ಕ್ಯಾಪ್ಟನ್ ಸಂಜು ಸ್ಯಾಮ್ಸನ್ ಅಸಮಾಧಾನ ಹೊರಹಾಕಿದ್ದಾರೆ.
ಇದನ್ನೂ ಓದಿ: ಹಾರ್ದಿಕ್, ಜಡೇಜಾ, ಮಯಾಂಕ್, ಪ್ಲೆಸಿಸ್ ಮೊದಲ ಸಲ ನಾಯಕರು: ಯಾರಿಗಿದೆ ಕಪ್ ಎತ್ತಿ ಹಿಡಿಯುವ ಅದೃಷ್ಟ?
ರಾಜಸ್ಥಾನ ರಾಯಲ್ಸ್ ತಂಡದ ಬಸ್ನಲ್ಲಿ ತೆರಳುತ್ತಿರುವ ಸಂಜು ಸ್ಯಾಮ್ಸನ್ ಚಿತ್ರವನ್ನು ಎಡಿಟ್ ಮಾಡಿರುವ ಸೋಷಿಯಲ್ ಮೀಡಿಯಾ ತಂಡ, ಎಷ್ಟೊಂದು ಸುಂದರವಾಗಿ ಕಾಣುತ್ತಿದ್ದೀರಿ? ಎಂದು ಫೋಟೋ ಟ್ವೀಟ್ ಮಾಡಿ ಟ್ರೋಲ್ ಮಾಡಿದೆ. ಇದರ ವಿರುದ್ಧ ಅಸಮಾಧಾನ ಹೊರಹಾಕಿ ಟ್ವೀಟ್ ಮಾಡಿರುವ ಸಂಜು ಸ್ಯಾಮ್ಸನ್, ಇದೆಲ್ಲವೂ ಗೆಳೆಯರ ಮಧ್ಯೆ ಚೆನ್ನಾಗಿರುತ್ತದೆ. ತಂಡಗಳು ವೃತ್ತಿಪರವಾಗಿರಬೇಕು ಎಂದು ಹೇಳಿದ್ದಾರೆ. ಇದರಿಂದ ಎಚ್ಚೆತ್ತುಕೊಂಡಿರುವ ಸೋಷಿಯಲ್ ಮೀಡಿಯಾ ತಂಡ ತಕ್ಷಣವೇ ಆ ಟ್ವೀಟ್ ಅಳಿಸಿ ಹಾಕಿದ್ದು, ಇದಕ್ಕಾಗಿ ಹೊಸ ಸೋಷಿಯಲ್ ಮೀಡಿಯಾ ತಂಡ ನೇಮಕ ಮಾಡುವುದಾಗಿ ಪ್ರಕಟಣೆ ಹೊರಡಿಸಿದೆ.
-
https://t.co/bDwj0V6Vms pic.twitter.com/tXfaLpoOxl
— Rajasthan Royals (@rajasthanroyals) March 25, 2022 " class="align-text-top noRightClick twitterSection" data="
">https://t.co/bDwj0V6Vms pic.twitter.com/tXfaLpoOxl
— Rajasthan Royals (@rajasthanroyals) March 25, 2022https://t.co/bDwj0V6Vms pic.twitter.com/tXfaLpoOxl
— Rajasthan Royals (@rajasthanroyals) March 25, 2022
ಕ್ಯಾಪ್ಟನ್ ಸಂಜು ಸ್ಯಾಮ್ಸನ್ ಅವರ ನಿರ್ಧಾರಕ್ಕೆ ಮತ್ತೋರ್ವ ಆಟಗಾರ ಆರ್. ಅಶ್ವಿನ್ ಕೂಡ ಟ್ವೀಟ್ ಮಾಡಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಪ್ರಸಕ್ತ ಸಾಲಿನ ಐಪಿಎಲ್ನಲ್ಲಿ ರಾಜಸ್ಥಾನ ರಾಯಲ್ಸ್ ಮೊದಲ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಕಣಕ್ಕಿಳಿಯುವ ಮೂಲಕ ಅಭಿಯಾನ ಆರಂಭ ಮಾಡಲಿದೆ.