ಕೊಲೊಂಬೊ : ಭಾರತ ವಿರುದ್ಧ ಏಕದಿನ ಮತ್ತು ಟಿ20 ಸರಣಿಯಿಂದ ಶ್ರೀಲಂಕಾ ತಂಡದ ನಾಯಕ ಕುಸಾಲ್ ಪೆರೆರಾ ಅವರನ್ನ ಕೈಬಿಡಲಾಗಿದೆ. ಅವರ ಬದಲಿಗೆ ಆಲ್ರೌಂಡರ್ ದಸುನ್ ಶನಕ ಅವರಿಗೆ ನಾಯಕನ ಪಟ್ಟ ನೀಡಲಾಗಿದೆ.
ಎಡಗೈ ಬ್ಯಾಟ್ಸ್ಮನ್ ಪೆರೆರಾ ಭುಜದ ಗಾಯದಿಂದ ಬಳಲುತ್ತಿದ್ದು, ಗುಣಮುಖರಾಗಲು 6 ರಿಂದ 8 ವಾರಗಳ ಅವಶ್ಯಕತೆಯಿದೆ ಎಂದು ತಂಡದ ವೈದ್ಯ ಮೂಲಗಳು ತಿಳಿಸಿವೆ. ಹಾಗಾಗಿ, ದಸುನ್ ಶನಕ ಅವರಿಗೆ ತಂಡದ ಜವಾಬ್ದಾರಿಯನ್ನ ನೀಡಲಾಗಿದೆ ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿ ತಿಳಿಸಿದೆ.
ಶ್ರೀಲಂಕಾ ಕ್ರಿಕೆಟ್ ಮಂಡಳಿ ಏಕದಿನ ಮತ್ತು ಟಿ20 ಸರಣಿಗಳಿಗೆ 25 ಆಟಗಾರರ ತಂಡವನ್ನು ಶುಕ್ರವಾರ ಪ್ರಕಟಿಸಿದೆ. ‘ಗಾಯಗೊಂಡಿರುವ ಕುಶಲ್ ಪೆರೇರಾ ಅವರಿಗೆ ಭಾರತ ಎದುರಿನ ಏಕದಿನ ಮತ್ತು ಟಿ20 ಸರಣಿಯಲ್ಲಿ ಪಾಲ್ಗೊಳ್ಳಲು ಆಗುತ್ತಿಲ್ಲ’ ಎಂದು ತಂಡವನ್ನು ಪ್ರಕಟಿಸುವ ಮೊದಲು ಶ್ರೀಲಂಕಾ ಕ್ರಿಕೆಟ್ ಹೊರಿಡಿಸಿದ್ದ ಪ್ರಕಟಣೆಯಲ್ಲಿ ತಿಳಿಸಿದೆ.
-
Sri Lanka 🇱🇰 squad for the 3-match ODI series & the 3-match T20I series against India 🇮🇳 - https://t.co/qVd9nJxpau#SLvIND pic.twitter.com/9gqEGVlM79
— Sri Lanka Cricket 🇱🇰 (@OfficialSLC) July 16, 2021 " class="align-text-top noRightClick twitterSection" data="
">Sri Lanka 🇱🇰 squad for the 3-match ODI series & the 3-match T20I series against India 🇮🇳 - https://t.co/qVd9nJxpau#SLvIND pic.twitter.com/9gqEGVlM79
— Sri Lanka Cricket 🇱🇰 (@OfficialSLC) July 16, 2021Sri Lanka 🇱🇰 squad for the 3-match ODI series & the 3-match T20I series against India 🇮🇳 - https://t.co/qVd9nJxpau#SLvIND pic.twitter.com/9gqEGVlM79
— Sri Lanka Cricket 🇱🇰 (@OfficialSLC) July 16, 2021
ಇದನ್ನೂ ಓದಿ : ಭಾರತ - ಲಂಕಾ ಪಂದ್ಯ: ಕ್ರಿಕೆಟಿಗ ಕುಸಲ್ ಪೆರೆರಾ ಭಾಗಿಯಾಗುವುದು ಡೌಟ್!
ಇಂಗ್ಲೆಂಡ್‌ನಲ್ಲಿ ಬಯೊಬಬಲ್ ನಿಯಮಗಳನ್ನು ಉಲ್ಲಂಘಿಸಿದ ಕಾರಣ ತಂಡದ ಮತ್ತೊಬ್ಬ ವಿಕೆಟ್ ಕೀಪರ್ ನಿರೋಷನ್ ಡಿಕ್ವೆಲ್ಲಾ ಅವರ ಮೇಲೆ ನಿಷೇಧ ಹೇರಲಾಗಿದೆ. ಹೀಗಾಗಿ, ಯುವ ವಿಕೆಟ್ ಕೀಪರ್‌ಗಳಾದ ಮಿನೋದ್ ಭಾನುಕ ಲಾಹಿರು ಉದರ ಅವರಿಗೆ ಅವಕಾಶ ನೀಡಲಾಗಿದೆ. ಅಭ್ಯಾಸದ ಸಂದರ್ಭದಲ್ಲಿ ಎಡಗಾಲಿನ ಹಿಮ್ಮಡಿ ಗಾಯದ ಕಾರಣದಿಂದ ಎಡಗೈ ವೇಗಿ ಬಿನುರ ಫರ್ನಾಂಡೊ ಏಕದಿನ ಸರಣಿಯಿಂದ ಕೈಬಿಡಲಾಗಿದ್ದು, ಟಿ20 ಸರಣಿಗೆ ಅವರನ್ನು ಪರಿಗಣಿಸಲಾಗಿದೆ.
ಇತ್ತೀಚಿಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮತ್ತು ಶ್ರೀಲಂಕಾ ಕ್ರಿಕೆಟ್ (ಎಸ್‌ಎಲ್‌ಸಿ) ಮುಂಬರುವ ಸೀಮಿತ ಓವರ್‌ಗಳ ಸರಣಿಯ ಪರಿಷ್ಕೃತ ವಿವರವನ್ನು ಪ್ರಕಟಿಸಿತ್ತು. 3 ಏಕದಿನ ಪಂದ್ಯಗಳು, ಟಿ20 ಸರಣಿ ಒಳಗೊಂಡಿರುವ ಪ್ರವಾಸವು ಜುಲೈ 18ರಿಂದ ಪ್ರಾರಂಭವಾಗಲಿದೆ" ಎಂದು ಬಿಸಿಸಿಐ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. ಮೂರು ಏಕದಿನ ಪಂದ್ಯಗಳು ಜುಲೈ 18, 20 ಮತ್ತು 23ರಂದು ನಡೆಯಲಿದ್ದು, ಮೂರು ಟಿ- 20 ಪಂದ್ಯಗಳು ಜುಲೈ 25, 27 ಮತ್ತು 29 ರಂದು ನಡೆಯಲಿವೆ.
ಶ್ರೀಲಂಕಾ ತಂಡ : ದಸುನ್ ಶನಕ (ನಾಯಕ), ಧನಂಜಯ ಡಿಸಿಲ್ವ, ಆವಿಷ್ಕ ಫರ್ನಾಂಡೊ, ಭಾನುಕ ರಾಜಪಕ್ಸ, ಪಾತುಮ್ ನಿಸಾಂಕ, ಚರಿತ ಅಸಲಂಕ, ವನಿಂದು ಹಸರಂಗ, ಆಶೆನ್ ಬಂಡಾರ, ಮಿನೋದ್ ಭಾನುಕ, ಲಾಹಿರು ಉದರ, ರಮೇಶ್ ಮೆಂಡಿಸ್, ಚಮಿಕ ಕರುಣರತ್ನೆ, ಬಿನುರ ಫರ್ನಾಂಡೊ, ದುಷ್ಮಂತ ಚಮೀರ, ಲಕ್ಷಣ್ ಸಂಡಗನ್, ಅಕಿಲ ಧನಂಜಯ, ಶಿರಾನ್ ಫರ್ನಾಂಡೊ, ಧನಂಜಯ ಲಕ್ಷ್ಮಣ್, ಇಶಾನ್ ಜಯರತ್ನೆ, ಪ್ರವೀಣ್ ಜಯವಿಕ್ರಮ, ಅಸಿತ ಫರ್ನಾಂಡೊ, ಕಾಸುನ್ ರಜಿತ, ಲಾಹಿರು ಕುಮಾರ, ಇಸುರು ಉಡಾನ.