ಟೀಂ ಇಂಡಿಯಾದ ಮಾಜಿ ನಾಯಕ, ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಪತ್ನಿ ಸಾಕ್ಷಿ ಸಿಂಗ್ ಧೋನಿ ಓಣಂ ಹಬ್ಬವನ್ನು ಸಾಂಪ್ರದಾಯಿಕವಾಗಿ ಆಚರಣೆ ಮಾಡಿದ್ದು, ಓಣಂ ಸಾದ್ಯವನ್ನು ( 22 ವಿವಿಧ ಸಾಂಪ್ರದಾಯಿಕ ಭಕ್ಷ್ಯಗಳು) ಸವಿದು ಹಬ್ಬವನ್ನು ಸಂಭ್ರಮಿಸಿದ್ದಾರೆ.
ಕೇರಳದ ಚೋರ್ , ಅವಿಯಲ್, ಪರಿಪ್ಪು, ಸಾಂಬಾರ್, ಪಪ್ಪಡಮ್ , ಓಲನ್, ಉಪ್ಪೇರಿ (ಮಲೆಯಾಳಂ ಹೆಸರುಗಳು) ಮುಂತಾದ ಭಕ್ಷ್ಯಗಳಿರುವ ಬಾಳೆ ಎಲೆಯ ಫೋಟೋ ಅನ್ನು ಸಾಕ್ಷಿ ಸಿಂಗ್ ಧೋನಿ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇದರ ಜೊತೆಗೆ ಓಣಂ ಅಸಮಸಕಲ್ ಎಂದು ಓಣಂ ಶುಭಾಶಯ ಕೋರಿದ್ದಾರೆ.
ಸಾಕ್ಷಿ ಮಾತ್ರವಲ್ಲದೇ ಸಾಕ್ಷಿ ಪುತ್ರಿ ಜೀವಾ ಸಿಂಗ್ ಧೋನಿ ಕೂಡಾ ಅದೇ ತೆರನಾದ ಬಾಳೆ ಎಲೆಯಲ್ಲಿ ಊಟ ಮಾಡುವ ಫೋಟೋವನ್ನು ಇನ್ಸ್ಟಾದಲ್ಲಿ ಹಂಚಿಕೊಳ್ಳಲಾಗಿದೆ. ಟೇಬಲ್ ಮೇಲೆ ಬಟ್ಟಲು ಹರಡಿಕೊಂಡಿರುವುದು ಫೋಟೋದಲ್ಲಿ ಗೊತ್ತಾಗುತ್ತದೆ.
ವಿವಿಧ ಭಕ್ಷ್ಯಗಳ ಬಗ್ಗೆ ಸಾಕ್ಷಿ ಇನ್ಸ್ಟಾದಲ್ಲಿ ಪೋಸ್ಟ್ ಮಾಡುತ್ತಿರುವುದು ಇದೇ ಮೊದಲಲ್ಲ. ಕೆಲವು ದಿನಗಳ ಹಿಂದೆ ಬಾಲ್ ಮಿಠಾಯಿಯ ಫೋಟೋ ಅನ್ನು ಹಂಚಿಕೊಂಡಿದ್ದು, ಈ ಮಿಠಾಯಿ ನನಗೆ ತುಂಬಾ ಇಷ್ಟ ಎಂದು ಬರೆದುಕೊಂಡಿದ್ದರು.