ETV Bharat / sports

ಮಹಾರಾಷ್ಟ್ರದ ಮಿಸಾಲ್‌ ಪಾವ್‌ ಸವಿದ ಸಚಿನ್‌ ; ನೆಟ್ಟಿಗರು ಹೇಳಿದ್ದು ಹೀಗೆ.. - ಮಹಾರಾಷ್ಟ್ರದ ಮಿಸಾಲ್‌ ಪಾವ್‌ ಸವಿದ ವಿಡಿಯೋ ವೈರಲ್‌

ವೈರಲ್‌ ಆಗಿರುವ ವಿಡಿಯೋದಲ್ಲಿ ಸಚಿನ್ ತೆಂಡೂಲ್ಕರ್ ಮಿಸಾಲ್‌ ಪ್ಲೇಟ್‌ನ ಮೇಲೆ ನಿಂಬೆ ರಸವನ್ನು ಹಿಂಡಿ ನಂತರ ಬ್ರೆಡ್ ತುಂಡಿನೊಂದಿಗೆ (ಪಾವ್ ಎಂದು ಕರೆಯುತ್ತಾರೆ) ಸವಿಯುತ್ತಿದ್ದಾರೆ. ಎಷ್ಟು ರುಚಿಕರವಾಗಿದೆ. ಈ ಖಾದ್ಯವು ತನಗೆ ಬರ್ಮೀಸ್ ಖಾವೊ ಸೂಯಿಯನ್ನು ನೆನಪಿಸುತ್ತದೆ ಎಂದಿದ್ದಾರೆ..

sachin tendulkar says misal pav ki kuch baat hi alag hai as he relishes maharashtrian dish in viral video
ಮಹಾರಾಷ್ಟ್ರದ ಮಿಸಾಲ್‌ ಪಾವ್‌ ಸವಿದ ಸಚಿನ್‌; ನೆಟ್ಟಿಗರು ಹೇಳಿದ್ದು ಹೀಗೆ..
author img

By

Published : Dec 14, 2021, 11:28 AM IST

ಮುಂಬೈ : ಸದಾ ಒಂದಿಲ್ಲೊಂದು ಸುದ್ದಿಯಲ್ಲಿರುವ ಕ್ರಿಕೆಟ್‌ ದಿಗ್ಗಜ, ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ ಈ ಬಾರಿ ತಿನಿಸೊಂದರ ಮೂಲಕ ಭಾರಿ ಸದ್ದು ಮಾಡುತ್ತಿದ್ದಾರೆ. ಸಚಿನ್‌ ಮಹಾರಾಷ್ಟ್ರದ ರುಚಿಕರವಾದ ಮಿಸಾಲ್‌ ಪಾವ್‌ ಸವಿಯುತ್ತಿರುವ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಭಾನುವಾರ, ಸೋಮವಾರ ಯಾವುದೇ ದಿನವಾಗಿರಲಿ ನಾನು ಮಿಸಾಲ್‌ ಪಾವ್‌ ಸೇವಿಸುತ್ತೇನೆ. ಪರ್ಫೆಕ್ಟ್‌ ಬ್ರೇಕ್‌ಪಾಸ್ಟ್‌ಗೆ ನಿಮ್ಮ ಐಡಿಯಾ ಏನು ಎಂದು ಬರೆದು ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಕೇವಲ 25 ಸೆಕೆಂಡುಗಳ ವಿಡಿಯೋ ಟ್ವಿಟರ್‌ನಲ್ಲಿ ಸುಮಾರು 3 ಲಕ್ಷ 80 ಸಾವಿರ ವೀಕ್ಷಣೆ ಪಡೆದಿದ್ದರೆ, ಮತ್ತೊಂದು ಜಾಲತಾಣ ಇನ್‌ಸ್ಟಾದಲ್ಲಿ 55 ಲಕ್ಷ ವೀಕ್ಷಣೆಗಳನ್ನು ಗಳಿಸಿದೆ.

ವೈರಲ್‌ ಆಗಿರುವ ವಿಡಿಯೋದಲ್ಲಿ ಸಚಿನ್ ತೆಂಡೂಲ್ಕರ್ ಮಿಸಾಲ್‌ ಪ್ಲೇಟ್‌ನ ಮೇಲೆ ನಿಂಬೆ ರಸವನ್ನು ಹಿಂಡಿ ನಂತರ ಬ್ರೆಡ್ ತುಂಡಿನೊಂದಿಗೆ (ಪಾವ್ ಎಂದು ಕರೆಯುತ್ತಾರೆ) ಸವಿಯುತ್ತಿದ್ದಾರೆ. ಎಷ್ಟು ರುಚಿಕರವಾಗಿದೆ. ಈ ಖಾದ್ಯವು ತನಗೆ ಬರ್ಮೀಸ್ ಖಾವೊ ಸೂಯಿಯನ್ನು ನೆನಪಿಸುತ್ತದೆ ಎಂದಿದ್ದಾರೆ.

ಮಹಾರಾಷ್ಟ್ರದ ಮಿಸಾಲ್‌ ಪಾವ್‌ ತಿನ್ನುತ್ತಿರುವ ಸಚಿನ್ ತೆಂಡೂಲ್ಕರ್ ಅವರ ವಿಡಿಯೋಗೆ ನೆಟಿಜನ್‌ಗಳು ಸಹಮತ ವ್ಯಕ್ತಪಡಿಸಿದ್ದಾರೆ. ನಟ ಸಿಕಂದರ್ ಖೇರ್ ಕೂಡ ಸಚಿನ್ ಪೋಸ್ಟ್ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಕೆಲವರು ಇದನ್ನು ಸವಿಯಬೇಕೆಂದಿದ್ದಾರೆ.

ಇದನ್ನೂ ಓದಿ: ಆಫ್ರಿಕಾ ವಿರುದ್ಧದ ಟೆಸ್ಟ್​​​ ಸರಣಿ: ಅಜ್ಜಿ ಆಶೀರ್ವಾದ ಪಡೆದ ಮಯಾಂಕ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.