ಅಬುದಾಭಿ: ಇಂಡಿಯನ್ ಪ್ರೀಮಿಯರ್ ಲೀಗ್ನ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆರಂಭಿಕ ಆಟಗಾರ ಋತುರಾಜ್ ಗಾಯಕ್ವಾಡ್ ಶತಕ ಸಿಡಿಸಿ ಮಿಂಚಿದ್ದಾರೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲು ಕಣಕ್ಕಿಳಿದ ಚೆನ್ನೈ ಆರಂಭದಿಂದಲೂ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿತು. ಡುಪ್ಲೆಸಿಸ್ ಜೊತೆ ಸೇರಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ಋತುರಾಜ್ ಗಾಯಕ್ವಾಡ್, ತಾವು ಎದುರಿಸಿದ 60 ಎಸೆತಗಳಲ್ಲಿ 9 ಬೌಂಡರಿ, 5 ಸಿಕ್ಸರ್ ಸೇರಿದಂತೆ ಅಜೇಯ 101ರನ್ಗಳಿಕೆ ಮಾಡಿದರು. 95ರನ್ಗಳಿಕೆ ಮಾಡಿದ್ದ ಗಾಯಕ್ವಾಡ್ 20ನೇ ಓವರ್ನ ಕೊನೆ ಎಸತದಲ್ಲಿ ಭರ್ಜರಿಯಾಗಿ ಸಿಕ್ಸರ್ ಸಿಡಿಸುವ ಮೂಲಕ ಈ ಸಾಧನೆಗೈದರು.
-
🎥 That moment when @Ruutu1331 completed his maiden #VIVOIPL 💯! 💛 💛
— IndianPremierLeague (@IPL) October 2, 2021 " class="align-text-top noRightClick twitterSection" data="
TAKE. A. BOW! 🙌#VIVOIPL | #RRvCSK | @ChennaiIPL
Scorecard 👉 https://t.co/jo6AKQBhuK pic.twitter.com/nRS830RvK8
">🎥 That moment when @Ruutu1331 completed his maiden #VIVOIPL 💯! 💛 💛
— IndianPremierLeague (@IPL) October 2, 2021
TAKE. A. BOW! 🙌#VIVOIPL | #RRvCSK | @ChennaiIPL
Scorecard 👉 https://t.co/jo6AKQBhuK pic.twitter.com/nRS830RvK8🎥 That moment when @Ruutu1331 completed his maiden #VIVOIPL 💯! 💛 💛
— IndianPremierLeague (@IPL) October 2, 2021
TAKE. A. BOW! 🙌#VIVOIPL | #RRvCSK | @ChennaiIPL
Scorecard 👉 https://t.co/jo6AKQBhuK pic.twitter.com/nRS830RvK8
ಕೇವಲ 24 ವರ್ಷದ ಗಾಯಕ್ವಾಡ್ ಸಿಎಸ್ಕೆ ಪರ ಶತಕ ಸಿಡಿಸಿರುವ ಅತಿ ಕಿರಿಯ ಬ್ಯಾಟರ್ ಎಂಬ ಸಾಧನೆಗೆ ಪಾತ್ರರಾಗಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮುರುಳಿ ವಿಜಯ್(2010) ತದನಂತರ ಶೇನ್ ವ್ಯಾಟ್ಸನ್(2018) ರಾಜಸ್ಥಾನ ರಾಯಲ್ಸ್ ವಿರುದ್ಧ ಶತಕ ಸಿಡಿಸಿ ಮಿಂಚಿದ್ದರು. ಇದಾದ ಬಳಿಕ ಗಾಯಕ್ವಾಡ್ ಶತಕ ಸಾಧನೆ ಮಾಡಿದ್ದಾರೆ.
14ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಈಗಾಗಲೇ ರಾಜಸ್ಥಾನ ರಾಯಲ್ಸ್ ತಂಡದ ಸಂಜು ಸ್ಯಾಮನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ದೇವದತ್ ಪಡಿಕ್ಕಲ್ ಶತಕ ಸಿಡಿಸಿ ಮಿಂಚಿದ್ದಾರೆ. ಸಿಎಸ್ಕೆ ತಂಡದ ಪರ ಋತುರಾಜ್ ಗಾಯಕ್ವಾಡ್ ಶತಕ ಸಿಡಿಸಿರುವ 9ನೇ ಪ್ಲೇಯರ್ ಆಗಿದ್ದು, ರಾಜಸ್ಥಾನ ರಾಯಲ್ಸ್ ವಿರುದ್ಧ ಮೂಡಿ ಬಂದಿರುವ 7ನೇ ಸೆಂಚುರಿ ಇದಾಗಿದೆ. ಐಪಿಎಲ್ನಲ್ಲಿ ಮೂಡಿ ಬಂದಿರುವ 66ನೇ ಶತಕ ಇದಾಗಿದ್ದು, ಭಾರತೀಯನಿಂದ ಸಿಡಿದಿರುವ 24ನೇ ಸೆಂಚುರಿಯಾಗಿದೆ.