ETV Bharat / sports

5 ಪಂದ್ಯಗಳಲ್ಲಿ 4 ಶತಕ, ಬರೋಬ್ಬರಿ 603ರನ್​ ಸಿಡಿಸಿದ ಋತುರಾಜ್​ ಗಾಯಕ್ವಾಡ್ - ಋತುರಾಜ್ ಗಾಯಕ್ವಾಡ್ ದಾಖಲೆ

ಈ ಹಿಂದೆ 2009 -10ರಲ್ಲಿ ವಿರಾಟ್​ ಕೊಹ್ಲಿ, 2020-21ರಲ್ಲಿ ದೇವದತ್​ ಪಡಿಕ್ಕಲ್​, 2020-21ರಲ್ಲಿ ಪೃಥ್ವಿ ಶಾ ಕೂಡ ತಲಾ 4 ಶತಕ ಸಿಡಿಸಿದ್ದರು. ಕರ್ನಾಟಕದ ಮಯಾಂಕ್ ಅಗರ್ವಾಲ್ ಮತ್ತು ರವಿಕುಮಾರ್ ಸಮರ್ಥ್​ ತಲಾ 3 ಶತಕ ಸಿಡಿಸಿ ನಂತರದ ಸ್ಥಾನದಲ್ಲಿದ್ದಾರೆ.

Ruturaj Gaikwad hits 4th hundred
ಋತುರಾಜ್​ ಗಾಯಕ್ವಾಡ್
author img

By

Published : Dec 14, 2021, 9:03 PM IST

ರಾಜ್​ಕೋಟ್​​: ಭಾರತದ ತಂಡದ ಬಾಗಿಲು ತಟ್ಟುತ್ತಿರುವ ಮಹಾರಾಷ್ಟ್ರದ ತಂಡದ ನಾಯಕ ಋತುರಾಜ್ ಗಾಯಕ್ವಾಡ್​ 2021 ವಿಜಯ ಹಜಾರೆ ಟ್ರೋಫಿಯಲ್ಲಿ 5 ಪಂದ್ಯಗಳಿಂದ ತಮ್ಮ 4ನೇ ಶತಕ ಸಿಡಿಸಿ ವಿಜೃಂಭಿಸಿದ್ದಾರೆ.

2021ರ ಐಪಿಎಲ್​ನಲ್ಲಿ 16 ಪಂದ್ಯಗಳಿಂದ 635 ರನ್​ಗಳಿಸಿ ಅತ್ಯಂತ ಕಿರಿಯ ಬ್ಯಾಟರ್​ ಆಗಿ ಆರೆಂಜ್​ ಕ್ಯಾಪ್​ ಪಡೆದುಕೊಂಡಿದ್ದರು. ನಂತರ ಸೈಯದ್ ಮುಷ್ತಾಕ್ ಅಲಿ ಟಿ-20ಯಲ್ಲಿ 5 ಇನ್ನಿಂಗ್ಸ್​ಗಳಲ್ಲಿ 259 ರನ್​ಗಳಿಸಿ ತಮ್ಮ ಅಮೋಘ ಫಾರ್ಮ್​ ಮುಂದುವರಿಸಿದ್ದರು. ಇದೀಗ ವಿಜಯ ಹಜಾರೆ ಟ್ರೋಫಿಯಲ್ಲೂ 5 ಪಂದ್ಯಗಳಿಂದ 4 ಶತಕಗಳ ಸಹಿತ 603 ರನ್​ಗಳಿಸಿ ಟೂರ್ನಿಯಲ್ಲಿ ಗರಿಷ್ಠ ರನ್​ಗಳಿಸಿದ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. ಇವರು 2ನೇ ಸ್ಥಾನದಲ್ಲಿರುವ ಮನನ್​ ವೊಹ್ರಾಗಿಂತ(379) ಬರೋಬ್ಬರಿ 224 ರನ್​ ಅಂತರ ಕಾಯ್ದುಕೊಂಡಿದ್ದಾರೆ.

ಕೊಹ್ಲಿ ಪೃಥ್ವಿ, ಪಡಿಕ್ಕಲ್​ ಸಾಲಿಗೆ ಸೇರಿದ ಗಾಯಕ್ವಾಡ್

ಋತುರಾಜ್​ 2021ರ ವಿಜಯ ಹಜಾರೆ ಟ್ರೋಪಿಯಲ್ಲಿ ಹ್ಯಾಟ್ರಿಕ್ ಶತಕ ಸೇರಿದಂತೆ ಒಟ್ಟು ನಾಲ್ಕು ಶತಕ ಸಿಡಿಸಿದ್ದಾರೆ. ಅವರು ಚಂಡೀಗಢ ವಿರುದ್ದ 168(132 ಎಸೆತ), ಛತ್ತಿಸ್​ಗಢ ವಿರುದ್ಧ 154(143), ಮಧ್ಯ ಪ್ರದೇಶ ವಿರುದ್ಧ 136(112) ಮತ್ತು ಕೇರಳ ವಿರುದ್ಧ 124(129) ರನ್​ಗಳಿಸಿದ್ದರು. ಈ ಮೂಲಕ ಒಂದೇ ಆವೃತ್ತಿಯ ಹಜಾರೆ ಟ್ರೋಫಿಯಲ್ಲಿ ಹೆಚ್ಚು ಶತಕಗಳಿಸಿ 4ನೇ ಬ್ಯಾಟರ್ ಎನಿಸಿಕೊಂಡರು.

ಈ ಹಿಂದೆ 2009-10ರಲ್ಲಿ ವಿರಾಟ್​ ಕೊಹ್ಲಿ, 2020-21ರಲ್ಲಿ ದೇವದತ್​ ಪಡಿಕ್ಕಲ್​, 2020-21ರಲ್ಲಿ ಪೃಥ್ವಿ ಶಾ ಕೂಡ ತಲಾ 4 ಶತಕ ಸಿಡಿಸಿದ್ದರು. ಕರ್ನಾಟಕದ ಮಯಾಂಕ್ ಅಗರ್ವಾಲ್ ಮತ್ತು ರವಿಕುಮಾರ್ ಸಮರ್ಥ್​ ತಲಾ 3 ಶತಕ ಸಿಡಿಸಿ ನಂತರದ ಸ್ಥಾನದಲ್ಲಿದ್ದಾರೆ.

ಏಕದಿನ ತಂಡದಲ್ಲಿ ಅವಕಾಶ

ಅತ್ಯದ್ಭುತ ಫಾರ್ಮ್​ನಲ್ಲಿರುವ ಋತುರಾಜ್ ಗಾಯಕ್ವಾಡ್​ ಅವರ ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಆಯ್ಕೆಯಾಗುವ ಸಾಧ್ಯತೆಯಿದೆ. ಐಪಿಎಲ್, ವಿಜಯ ಹಜಾರೆ ಸೇರಿದಂತೆ ದೇಶೀಯ ಟೂರ್ನಿಯಲ್ಲಿ ಸಾಕಷ್ಟು ರನ್​ಗಳಿಸಿರುವ ಗಾಯಕ್ವಾಡ್​ ಸೇರಿದಂತೆ ಮಧ್ಯಮ ಕ್ರಮಾಂಕದ ಬ್ಯಾಟರ್​ ವೆಂಕಟೇಶ್​ (349) ಕೂಡ ಮುಂಚೂಣಿಯಲ್ಲಿದ್ದಾರೆ.

ಇದನ್ನೂ ಓದಿ:ಕೊನೆ ಪಂದ್ಯ ಸೋತರೂ ಪ್ರೀ ಕ್ವಾರ್ಟರ್​ ಫೈನಲ್ ಪ್ರವೇಶಿಸಲು ಯಶಸ್ವಿಯಾದ ಕರ್ನಾಟಕ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.