ದುಬೈ: 2021ರ ಐಪಿಎಲ್ನಲ್ಲಿ ಮಿಶ್ರ ಫಲಿತಾಂಶ ಪಡೆದಿರುವ ರಾಜಸ್ಥಾನ್ ರಾಯಲ್ಸ್ ಇಂದು ದುಬೈನಲ್ಲಿ ಸನ್ರೈಸರ್ಸ್ ವಿರುದ್ಧ ಕಣಕ್ಕಿಳಿಯಲಿದೆ. ಕಳೆದ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿ ಡೆಲ್ಲಿ ವಿರುದ್ಧ ಹೀನಾಯ ಸೋಲು ಕಂಡಿದ್ದ ಸಂಜು ಸಾಮ್ಸನ್ ಪಡೆ ತಮ್ಮ ತಪ್ಪುಗಳನ್ನು ತಿದ್ದಿಕೊಂಡು ಇಂದಿನ ಪಂದ್ಯ ಗೆದ್ದು ಅಗ್ರ ನಾಲ್ಕು ತಂಡಗಳ ಸಾಲಿಗೆ ಸೇರುವ ಹುಮ್ಮಸ್ಸಿನಲ್ಲಿದೆ.
ಪ್ರಸ್ತುತ ರಾಜಸ್ಥಾನ್ ರಾಯಲ್ಸ್ 9 ಪಂದ್ಯಗಳಲ್ಲಿ 4 ಗೆಲುವು ಮತ್ತು 5 ಸೋಲುಗಳೊಂದಿಗೆ 8 ಅಂಕ ಹೊಂದಿದ್ದು, 7ನೇ ಸ್ಥಾನದಲ್ಲಿದೆ. ಇಂದು ಕೊನೆಯ ಹಾಗೂ ಅಧಿಕೃತವಾಗಿ ಪ್ಲೇ ಆಫ್ ರೇಸ್ನಿಂದ ಹೊರ ಬಿದ್ದಿರುವ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಕಣಕ್ಕಿಳಿಯುತ್ತಿದೆ. ಇಂದಿನ ಪಂದ್ಯ ಗೆದ್ದರೆ ರಾಜಸ್ಥಾನ್ ಕೆಕೆಆರ್ ತಂಡವನ್ನು ಹಿಂದಿಕ್ಕಿ 4ನೇ ಸ್ಥಾನಕ್ಕೆ ಲಗ್ಗೆಯಿಡಲಿದೆ.
2ನೇ ಹಂತದ ಐಪಿಎಲ್ನಲ್ಲಿ ರಾಜಸ್ಥಾನ್ ಮೊದಲ ಪಂದ್ಯದಲ್ಲಿ ಪಂಜಾಬ್ ವಿರುದ್ಧ 2 ರನ್ಗಳ ರೋಚಕ ಜಯ ಸಾಧಿಸಿದರೆ, 2ನೇ ಪಂದ್ಯದಲ್ಲಿ ಡೆಲ್ಲಿ ವಿರುದ್ಧ 155 ರನ್ಗಳ ಗುರಿ ಬೆನ್ನೆತ್ತಲಾಗದೇ 33 ರನ್ಗಳ ಹೀನಾಯ ಸೋಲು ಕಂಡಿತ್ತು.
ಮೊದಲ ಪಂದ್ಯದಲ್ಲಿ ಮಿಂಚಿದ್ದ ಎವಿನ್ ಲೂಯಿಸ್ 2ನೇ ಪಂದ್ಯದಲ್ಲಿ ಡ್ರಾಪ್ ಮಾಡಿದ್ದು ಮತ್ತು ಸ್ಯಾಮ್ಸನ್ಗೆ ಇತರೆ ಬ್ಯಾಟ್ಸ್ಮನ್ಗಳು ಸಾಥ್ ನೀಡದ್ದರಿಂದ ಡೆಲ್ಲಿ ವಿರುದ್ಧ ರಾಯಲ್ಸ್ ಸೋಲುಂಡಿದೆ. ಇದೀಗ ಮತ್ತೆ ಲೂಯಿಸ್ಗೆ ಅವಕಾಶ ನೀಡಿದರೆ ಬ್ಯಾಟಿಂಗ್ ಬಲ ಹೆಚ್ಚಾಗಲಿದೆ. ಬೌಲಿಂಗ್ ದಾಳಿ ಅತ್ಯುತ್ತಮವಾಗಿದ್ದು, ಡೆಲ್ಲಿ ವಿರುದ್ಧ ನಿರೀಕ್ಷಿತ ಪ್ರದರ್ಶನ ತೋರದ ಶಂಸಿ ಬದಲು ಕ್ರಿಸ್ ಮೋರಿಸ್ರನ್ನು ತಂಡಕ್ಕೆ ಸೇರಿಸಿಕೊಂಡರೆ ಬ್ಯಾಟಿಂಗ್ ಜೊತೆಗೆ ಬೌಲಿಂಗ್ನಲ್ಲೂ ಬಲ ಬರಬಹುದು.
ಸನ್ರೈಸರ್ಸ್ ತಂಡ 9 ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯದಲ್ಲಿ ಮಾತ್ರ ಜಯ ಸಾಧಿಸಿದೆ. ಮೊದಲಾರ್ಧದಲ್ಲಿ ಡೇವಿಡ್ ವಾರ್ನರ್ರನ್ನು ನಾಯಕತ್ವದಿಂದ ಕೆಳಗಿಳಿಸಿ ಕೇನ್ ವಿಲಿಯಮ್ಸನ್ರನ್ನು ನಾಯಕನಾಗಿ ನೇಮಿಸಿದರೂ ತಂಡದ ಅದೃಷ್ಟ ಬದಲಾಗಿಲ್ಲ. ಪ್ಲೇ ಆಫ್ ರೇಸ್ನಿಂದ ಹೊರ ಬಿದ್ದಿರುವ ಹೈದರಾಬಾದ್ ಕೇವಲ ಉಳಿದ ಪಂದ್ಯಗಳನ್ನು ಗೆದ್ದು ಮುಂದಿನ ಆವೃತ್ತಿಗೆ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಬೇಕಿದೆ.
ಮುಖಾಮುಖಿ : ಎರಡೂ ತಂಡಗಳು 14 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಎರಡು ತಂಡಗಳು ತಲಾ 7 ಪಂದ್ಯಗಳಲ್ಲಿ ಗೆಲುವು ಸಾಧಿಸಿವೆ. ಕೊನೆಯ 5 ಮುಖಾಮುಖಿಯಲ್ಲಿ ರಾಜಸ್ಥಾನ್ 3 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ದುಬೈನಲ್ಲಿ ನಡೆದಿರುವ 2 ಪಂದ್ಯಗಳಲ್ಲಿ ಎರಡೂ ತಂಡಗಳು ಒಂದೊಂದು ಪಂದ್ಯ ಜಯಿಸಿವೆ.
ರಾಜಸ್ಥಾನ್ ರಾಯಲ್ಸ್ : ಸಂಜು ಸ್ಯಾಮ್ಸನ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಎವಿನ್ ಲೂಯಿಸ್, ಡೇವಿಡ್ ಮಿಲ್ಲರ್, ಕ್ರಿಸ್ ಮೋರಿಸ್, ಓಶಾನೆ ಥಾಮಸ್, ಮುಸ್ತಫಿಜುರ್ ರಹಮಾನ್, ತಬ್ರೈಜ್ ಶಂಸಿ, ಗ್ಲೇನ್ ಫಿಲಿಪ್ಸ್, ಚೇತನ್ ಸಕಾರಿಯಾ, ರಿಯಾನ್ ಪರಾಗ್, ರಾಹುಲ್ ತೇವಾಟಿಯಾ, ಆಕಾಶ್ ಸಿಂಗ್, ಅನುಜ್ ರಾವತ್ ಕೆಸಿ ಕಾರಿಯಪ್ಪ , ಯಶಸ್ವಿ ಜೈಸ್ವಾಲ್, ಶಿವಂ ದುಬೆ, ಶ್ರೇಯಸ್ ಗೋಪಾಲ್, ಕಾರ್ತಿಕ್ ತ್ಯಾಗಿ, ಮಯಾಂಕ್ ಮಾರ್ಕಂಡೆ, ಜಯದೇವ್ ಉನಾದ್ಕಟ್, ಕುಲದೀಪ್ ಯಾದವ್, ಮಹಿಪಾಲ್ ಲೊಮ್ರೋರ್.
ಸನ್ ರೈಸರ್ಸ್ ಹೈದರಾಬಾದ್ : ಕೇನ್ ವಿಲಿಯಮ್ಸನ್ (ನಾಯಕ), ಡೇವಿಡ್ ವಾರ್ನರ್, ಮನೀಶ್ ಪಾಂಡೆ, ಶೆರ್ಫೇನ್ ರುದರ್ಫೋರ್ಡ್, ವೃದ್ಧಿಮಾನ್ ಸಹಾ, ಶ್ರೀವಾತ್ಸವ್ ಗೋಸ್ವಾಮಿ, ರಶೀದ್ ಖಾನ್, ವಿಜಯ್ ಶಂಕರ್, ಮೊಹಮ್ಮದ್ ನಬಿ, ಅಭಿಷೇಕ್ ಶರ್ಮಾ, ಭುವನೇಶ್ವರ್ ಕುಮಾರ್, ಸಿದ್ಧಾರ್ಥ್ ಕೌಲ್, ಖಲೀಲ್ ಅಹ್ಮದ್, ಟಿ.ನಟರಾಜನ್, ಬಾಸಿಲ್ ಥಂಪಿ , ಸಂದೀಪ್ ಶರ್ಮಾ, ಶಹಬಾಜ್ ನದೀಮ್, ಅಬ್ದುಲ್ ಸಮದ್, ಜೆ.ಸುಚಿತ್, ಜೇಸನ್ ಹೋಲ್ಡರ್, ವಿರಾಟ್ ಸಿಂಗ್, ಪ್ರಿಯಂ ಗರ್ಗ್, ಕೇದಾರ್ ಜಾಧವ್, ಮುಜೀಬ್-ಉರ್-ರಹಮಾನ್, ಜೇಸನ್ ರಾಯ್
ಇದನ್ನು ಓದಿ:ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ಮಾದರಿಗೆ ದಿಢೀರ್ ವಿದಾಯ ಘೋಷಿಸಿದ ಮೋಯಿನ್ ಅಲಿ