ಶಾರ್ಜಾ: ಪ್ಲೇ ಆಫ್ ಕನಸಿನಲ್ಲಿರುವ ಪಂಜಾಬ್ ಕಿಂಗ್ಸ್ ವಿರುದ್ಧ ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ಆರ್ಸಿಬಿ ಈಗಾಗಲೆ 3ನೇ ಸ್ಥಾನದಲ್ಲಿದ್ದು ಪ್ಲೇ ಆಫ್ ಹೊಸ್ತಿಲಲ್ಲಿದೆ. ಇಂದಿನ ಪಂದ್ಯವನ್ನು ಗೆದ್ದರೆ, ಅಧಿಕೃತವಾಗಿ ಪ್ಲೇ ಆಫ್ ಪ್ರವೇಶಿಸಲಿದೆ. ಆರ್ಸಿಬಿ 11 ಪಂದ್ಯಗಳಿಂದ 7 ಜಯ ಮತ್ತು 4 ಸೋಲಿನೊಂದಿಗೆ 14 ಅಂಕ ಪಡೆದುಕೊಂಡಿದೆ. ಈ ಪಂದ್ಯವಲ್ಲದೆ ಇನ್ನೂ 2 ಪಂದ್ಯಗಳಿದ್ದು, ಲೀಗ್ನಲ್ಲಿ ಮೊದಲೆರಡು ಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿದೆ.
ಇತ್ತ ಪಂಜಾಬ್ ಕಿಂಗ್ಸ್ ತಂಡ ಆಡಿರುವ 12 ಪಂದ್ಯಗಳಲ್ಲಿ 5 ಗೆಲುವು ಮತ್ತು 7 ಸೋಲು ಕಂಡು 5ನೇ ಸ್ಥಾನದಲ್ಲಿದೆ. ಇಂದಿನ ಪಂದ್ಯದಲ್ಲಿ ಬೆಂಗಳೂರು ತಂಡವನ್ನು ಮಣಿಸಿದರೆ ಕೆಕೆಆರ್ ತಂಡವನ್ನು ಹಿಂದಿಕ್ಕಿ 4ನೇ ಸ್ಥಾನಕ್ಕೆ ಲಗ್ಗೆಯಿಡಲಿದೆ. ಒಂದು ವೇಳೆ ಸೋಲು ಕಂಡರೆ 2021ರ ಐಪಿಎಲ್ನಲ್ಲಿ ತನ್ನ ಅಭಿಯಾನವನ್ನು ಅಂತ್ಯಗೊಳಿಸಲಿದೆ.
-
🚨 Toss Update 🚨@RCBTweets have elected to bat against @PunjabKingsIPL. #VIVOIPL #RCBvPBKS
— IndianPremierLeague (@IPL) October 3, 2021 " class="align-text-top noRightClick twitterSection" data="
Follow the match 👉 https://t.co/0E5ehhSWRx pic.twitter.com/Q2Gin6gTQk
">🚨 Toss Update 🚨@RCBTweets have elected to bat against @PunjabKingsIPL. #VIVOIPL #RCBvPBKS
— IndianPremierLeague (@IPL) October 3, 2021
Follow the match 👉 https://t.co/0E5ehhSWRx pic.twitter.com/Q2Gin6gTQk🚨 Toss Update 🚨@RCBTweets have elected to bat against @PunjabKingsIPL. #VIVOIPL #RCBvPBKS
— IndianPremierLeague (@IPL) October 3, 2021
Follow the match 👉 https://t.co/0E5ehhSWRx pic.twitter.com/Q2Gin6gTQk
ಇಂದಿನ ಪಂದ್ಯದಲ್ಲಿ ಪಂಜಾಬ್ ತಂಡ ಮೂರು ಬದಲಾವಣೆ ಮಾಡಿಕೊಂಡಿದೆ. ಗಾಯಗೊಂಡಿರುವ ಫ್ಯಾಬಿಯನ್ ಅಲೆನ್ ಬದಲಿಗೆ ಹರ್ಪ್ರೀತ್ ಬ್ರಾರ್, ದೀಪಕ್ ಹೂಡ ಬದಲಿಗೆ ಸರ್ಫರಾಜ್ ಖಾನ್ ಮತ್ತು ನೇಥನ್ ಎಲ್ಲಿಸ್ ಬದಲಿಗೆ ಮೊಯಿಸಸ್ ಹೆನ್ರಿಕ್ಸ್ಗೆ ಅವಕಾಶ ನೀಡಿದೆ.
ಮುಖಾಮುಖಿ:
ಎರಡೂ ತಂಡಗಳು 27 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಪಂಜಾಬ್ 15ರಲ್ಲಿ, ಆರ್ಸಿಬಿ 12ರಲ್ಲಿ ಗೆಲುವು ಸಾಧಿಸಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು: ವಿರಾಟ್ ಕೊಹ್ಲಿ (ನಾಯಕ), ದೇವದತ್ ಪಡಿಕ್ಕಲ್, ಶ್ರೀಕಾರ್ ಭರತ್ (ವಿಕೀ), ಗ್ಲೆನ್ ಮ್ಯಾಕ್ಸ್ವೆಲ್, ಎಬಿ ಡಿ ವಿಲಿಯರ್ಸ್, ಡೇನಿಯಲ್ ಕ್ರಿಶ್ಚಿಯನ್, ಜಾರ್ಜ್ ಗಾರ್ಟನ್, ಶಹ್ಬಾಜ್ ಅಹ್ಮದ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಹಾಲ್
ಪಂಜಾಬ್ ಕಿಂಗ್ಸ್ : ಕೆಎಲ್ ರಾಹುಲ್ (ನಾಯಕ/ವಿಕೀ), ಮಯಾಂಕ್ ಅಗರ್ವಾಲ್, ಐಡೆನ್ ಮಾರ್ಕ್ರಮ್, ನಿಕೋಲಸ್ ಪೂರನ್, ಸರ್ಫರಾಜ್ ಖಾನ್, ಶಾರುಖ್ ಖಾನ್, ಮೊಯಿಸಸ್ ಹೆನ್ರಿಕ್ಸ್, ಹರ್ ಪ್ರೀತ್ ಬ್ರಾರ್, ಮೊಹಮ್ಮದ್ ಶಮಿ, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್