ಬೆಂಗಳೂರು: 2022ರ ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆ ಭಾನುವಾರ ಸಂಜೆ ಮುಕ್ತಾಯಗೊಂಡಿದ್ದು, ಹಲವು ಆಟಗಾರರು ಭಾರಿ ಮೊತ್ತಕ್ಕೆ ಬಿಕರಿಯಾದರೆ, ಮತ್ತೆ ಕೆಲ ಪ್ರಮುಖರು ಅನ್ಸೋಲ್ಡ್ ಆಗುವ ಮೂಲಕ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಒಟ್ಟು 19 ಆಟಗಾರರನ್ನು ತನ್ನೆಡೆ ಸೆಳೆದುಕೊಂಡಿದೆ.
ಚೊಚ್ಚಲ ಐಪಿಎಲ್ ಟ್ರೋಫಿಗಾಗಿ ಕಾದಿರುವ ಆರ್ಸಿಬಿಗೆ ಫಾಫ್ ಡು ಪ್ಲೆಸಿಸ್ (7 ಕೋಟಿ ರೂ.), ಹರ್ಷಲ್ ಪಟೇಲ್ (10.75 ಕೋಟಿ ರೂ.), ವನಿಂದು ಹಸರಂಗ (10.75 ಕೋಟಿ ರೂ.) ಸೇರಿದಂತೆ 19 ಆಟಗಾರರು ಸೇರ್ಪಡೆಯಾಗಿದ್ದಾರೆ. ಈ ಹಿಂದೆ ರಿಟೈನ್ ಅವಕಾಶದಲ್ಲಿ ಆರ್ಸಿಬಿಯು ಮಾಜಿ ನಾಯಕ ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಮೊಹಮ್ಮದ್ ಸಿರಾಜ್ ಅವರನ್ನು ಉಳಿಸಿಕೊಂಡಿತ್ತು.
-
Introducing to you, the #ClassOf2022 ready to #PlayBold!😎🔥
— Royal Challengers Bangalore (@RCBTweets) February 13, 2022 " class="align-text-top noRightClick twitterSection" data="
Bring on #IPL2022! 👊🏻#WeAreChallengers #IPLMegaAuction #IPLAuction pic.twitter.com/qcEcna24y8
">Introducing to you, the #ClassOf2022 ready to #PlayBold!😎🔥
— Royal Challengers Bangalore (@RCBTweets) February 13, 2022
Bring on #IPL2022! 👊🏻#WeAreChallengers #IPLMegaAuction #IPLAuction pic.twitter.com/qcEcna24y8Introducing to you, the #ClassOf2022 ready to #PlayBold!😎🔥
— Royal Challengers Bangalore (@RCBTweets) February 13, 2022
Bring on #IPL2022! 👊🏻#WeAreChallengers #IPLMegaAuction #IPLAuction pic.twitter.com/qcEcna24y8
ಇದನ್ನೂ ಓದಿ: ಲಖನೌ ಸೂಪರ್ ಜೈಂಟ್ಸ್ನಲ್ಲಿ ಕೆಎಲ್ ರಾಹುಲ್ಗೆ ಸಾಥ್ ನೀಡಲಿದ್ದಾರೆ ಮತ್ತಿಬ್ಬರು ಕನ್ನಡಿಗರು
ಐಪಿಎಲ್ 2021ರ ಬಳಿಕ ಕೊಹ್ಲಿ ಆರ್‌ಸಿಬಿ ನಾಯಕತ್ವದಿಂದ ಕೆಳಗಿಳಿದಿದ್ದು, ಫ್ರಾಂಚೈಸಿಯು 2022ರ ಸೀಸನ್‌ಗೆ ಹೊಸ ನಾಯಕನನ್ನು ಆಯ್ಕೆ ಮಾಡಬೇಕಿದೆ. ಮೂವರು ಆಟಗಾರರನ್ನು ಉಳಿಸಿಕೊಂಡ ಬಳಿಕ ಆರ್‌ಸಿಬಿ ಬಳಿ 57 ಕೋಟಿ ರೂ. ಇತ್ತು.
ಆರ್‌ಸಿಬಿ ತಂಡದ 22 ಆಟಗಾರರು:
ಉಳಿಸಿಕೊಂಡವರು:
- ವಿರಾಟ್ ಕೊಹ್ಲಿ - 15 ಕೋಟಿ
- ಗ್ಲೆನ್ ಮ್ಯಾಕ್ಸ್‌ವೆಲ್ - 11 ಕೋಟಿ
- ಮೊಹಮ್ಮದ್ ಸಿರಾಜ್ - 7 ಕೋಟಿ
ಹರಾಜಿನಲ್ಲಿ ಖರೀದಿಸಿದ ಆಟಗಾರರು:
- ಫಾಫ್ ಡು ಪ್ಲೆಸಿಸ್ - 7 ಕೋಟಿ ರೂ.
- ಹರ್ಷಲ್ ಪಟೇಲ್ - 10.75 ಕೋಟಿ
- ವನಿಂದು ಹಸರಂಗ - 10.75 ಕೋಟಿ
- ದಿನೇಶ್ ಕಾರ್ತಿಕ್ - 5.50 ಕೋಟಿ
- ಜೋಶ್ ಹ್ಯಾಜಲ್‌ವುಡ್ - 7.75 ಕೋಟಿ
- ಶಹಬಾಜ್ ಅಹಮದ್ - 2.4 ಕೋಟಿ
- ಅನುಜ್ ರಾವತ್ - 3.4 ಕೋಟಿ
- ಆಕಾಶ್ ದೀಪ್ - 20 ಲಕ್ಷ ರೂ.
- ಮಹಿಪಾಲ್ ಲೊಮ್ರೋರ್ - 95 ಲಕ್ಷ ರೂ.
- ಫಿನ್ ಅಲೆನ್ - 80 ಲಕ್ಷ ರೂ.
- ಶೆರ್ಫೇನ್ ರುದರ್‌ಫೋರ್ಡ್ - 1 ಕೋಟಿ ರೂ.
- ಜೇಸನ್ ಬೆಹ್ರೆಂಡಾರ್ಫ್ - 75 ಲಕ್ಷ ರೂ.
- ಸುಯಶ್ ಪ್ರಭುದೇಸಾಯಿ - 30 ಲಕ್ಷ ರೂ.
- ಚಾಮಾ ಮಿಲಿಂದ್ - 25 ಲಕ್ಷ ರೂ.
- ಅನೀಶ್ವರ್ ಗೌತಮ್ - 20 ಲಕ್ಷ ರೂ.
- ಕರಣ್ ಶರ್ಮಾ - 50 ಲಕ್ಷ ರೂ.
- ಸಿದ್ಧಾರ್ಥ್ ಕೌಲ್ - 75 ಲಕ್ಷ ರೂ.
- ಲುವ್ನಿತ್ ಸಿಸೋಡಿಯಾ - 20 ಲಕ್ಷ ರೂ.
- ಡೇವಿಡ್ ವಿಲ್ಲಿ - 2 ಕೋಟಿ ರೂ.