ನವಿಮುಂಬೈ: ಬ್ಯಾಟಿಂಗ್, ಬೌಲಿಂಗ್ನಲ್ಲಿ ಹಿಡಿತ ಸಾಧಿಸದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್ನಲ್ಲಿ ಸತತ ಐದನೇ ಸೋಲುಂಡಿದೆ. ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾದ ಡೆಲ್ಲಿ ಕ್ಯಾಪಿಟಲ್ಸ್ ಕೊನೆಯಲ್ಲಿ ಓವರ್ನಲ್ಲಿ ಆರು ವಿಕೆಟ್‌ಗಳ ಜಯ ಸಾಧಿಸಿತು.
ಡೆಲ್ಲಿ ಕ್ಯಾಪಿಟಲ್ಸ್ ಪರವಾಗಿ ಅದ್ಭುತ ಪ್ರದರ್ಶನ ನೀಡುತ್ತಿರುವ ಜೆಸ್ ಜೊನಾಸೆನ್ (ಔಟಾಗದೆ 29) ಮತ್ತು ಮಾರಿಯಾನೆ ಕಾಪ್ (ಅಜೇಯ 32) ಜೋಡಿ ಮತ್ತೊಮ್ಮೆ ಮೈದಾನದಲ್ಲಿ ತಮ್ಮ ಖದರ್ ತೋರಿಸಿದರು. ಆಲ್ರೌಂಡ್ ಆಟದ ಮೂಲಕ ಗಮನ ಸೆಳೆಯುತ್ತಿರುವ ಕಾಪ್ ಬಿಗಿ ಬೌಲಿಂಗ್ ಬಳಿಕ, ಬ್ಯಾಟಿಂಗ್ನಲ್ಲೂ ಮಿಂಚಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
-
A 6⃣ & 4⃣ from @JJonassen21 to seal the chase in style 😎
— Women's Premier League (WPL) (@wplt20) March 13, 2023 " class="align-text-top noRightClick twitterSection" data="
🔙 to 🔙 victories in the #TATAWPL for @DelhiCapitals 🙌🏻
Scorecard ▶️ https://t.co/E13BL44W8T #DCvRCB pic.twitter.com/IxMdX8V6a5
">A 6⃣ & 4⃣ from @JJonassen21 to seal the chase in style 😎
— Women's Premier League (WPL) (@wplt20) March 13, 2023
🔙 to 🔙 victories in the #TATAWPL for @DelhiCapitals 🙌🏻
Scorecard ▶️ https://t.co/E13BL44W8T #DCvRCB pic.twitter.com/IxMdX8V6a5A 6⃣ & 4⃣ from @JJonassen21 to seal the chase in style 😎
— Women's Premier League (WPL) (@wplt20) March 13, 2023
🔙 to 🔙 victories in the #TATAWPL for @DelhiCapitals 🙌🏻
Scorecard ▶️ https://t.co/E13BL44W8T #DCvRCB pic.twitter.com/IxMdX8V6a5
ಮೊದಲು ಬ್ಯಾಟ್ ಮಾಡಿ ಆರ್‌ಸಿಬಿ ನೀಡಿದ 151 ರನ್ಗಳ ಸವಾಲಿನ ಮೊತ್ತವನ್ನು ಡೆಲ್ಲಿ ಕ್ಯಾಪಿಟಲ್ಸ್ ಚೇಸ್ ಮಾಡಿತು. ಆರಂಭದಲ್ಲೇ ಶೆಫಾಲಿ ವರ್ಮಾ (0) ವಿಕೆಟ್ ವಿಕೆಟ್ ಕಿತ್ತ ಮೆಗನ್ ಸ್ಕಟ್ ಡೆಲ್ಲಿಗೆ ಶಾಕ್ ನೀಡಿದರು. ಇದರ ಬಳಿಕ ನಾಯಕಿ ಮೆಗ್ ಲ್ಯಾನಿಂಗ್ ಕೂಡ 15 ರನ್ಗೆ ಔಟಾದರು. ಇದರ ಬಳಿಕ ಆಲೀಸ್ ಕ್ಯಾಪ್ಸಿ 38 ರನ್ ಚಚ್ಚಿದರು. ಇವರ ಇನಿಂಗ್ಸ್ನಲ್ಲಿ 8 ಬೌಂಡರಿಗಳಿದ್ದವು. ಮಧ್ಯಮ ಕ್ರಮಾಂಕದ ಆಟಗಾರ್ತಿ ಜೆಮಿಮಾ ರೋಡ್ರಿಗಸ್ 32 ರನ್ ಮಾಡಿದರು.
ಇಬ್ಬರೂ ಔಟಾದ ಬಳಿಕ ಗೆಲುವಿನ ಹೊಣೆ ಹೊತ್ತ ಆಲ್ರೌಂಡರ್ಗಳಾದ ಮಾರಿಯಾನೆ ಕಾಪ್ ಮತ್ತು ಜೆಸ್ ಜೊನಾಸೆನ್ ಗೆಲುವಿನ ಶಾಸ್ತ್ರ ಮುಗಿಸಿದರು. ಕಾಪ್ 32 ಎಸೆತಗಳಲ್ಲಿ ಅಷ್ಟೇ ರನ್ ಗಳಿಸಿದರು. ಇದರಲ್ಲಿ 3 ಬೌಂಡರಿ, 1 ಸಿಕ್ಸರ್ ಇತ್ತು. ಕೊನೆಯಲ್ಲಿ ಬಿರುಸಿನ ಬ್ಯಾಟ್ ಮಾಡಿದ ಜೆಸ್ ಜೊನಾಸೆನ್ ಆರ್‌ಸಿಬಿ ಬೌಲರ್ಗಳ ಕಾಡಿದರು. 15 ಎಸೆತಗಳಲ್ಲಿ 4 ಬೌಂಡರಿ 1 ಸಿಕ್ಸರ್ ಸಮೇತ 29 ರನ್ ಪೇರಿಸಿದರು. 2 ಎಸೆತ ಬಾಕಿ ಉಳಿಯುವಂತೆಯೇ ತಂಡಕ್ಕೆ ಗೆಲುವು ತಂದುಕೊಟ್ಟರು.
ಆರ್ಸಿಬಿಗೆ ಎಲ್ಲಿಸಿ ಪೆರ್ರಿ ನೆರವು: ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ ಆರಂಭ ಉತ್ತಮವಾಗಿರಲಿಲ್ಲ. ಸತತ ಸೋಲುಗಳಿಂದ ಟೀಕೆಗೆ ಗುರಿಯಾಗಿರುವ ನಾಯಕಿ, ಸ್ಟಾರ್ ಬ್ಯಾಟರ್ ಸ್ಮೃತಿ ಮಂಧಾನ ಮತ್ತೆ ವೈಫಲ್ಯ ಕಂಡರು. 8 ರನ್ ಗಳಿಸಿದ್ದಾಗ ಶಿಖಾ ಪಾಂಡೆ ಬೌಲಿಂಗ್ಗೆ ವಿಕೆಟ್ ನೀಡಿದರು. ಸೋಫಿ ಡಿವೈನ್ 21 ರನ್ ಮಾಡಿ ಔಟಾದರು. ಹೀಥರ್ ನೈಟ್ 11 ರನ್ಗೆ ವಿಕೆಟ್ ನೀಡಿದರು. ಇದರಿಂದ ತಂಡ 12 ಓವರ್‌ಗಳಲ್ಲಿ 63 ರನ್ ಮಾತ್ರ ಗಳಿಸಿತ್ತು. ತಂಡ ನೂರು ರನ್ ಗಡಿ ದಾಟುವುದೂ ಕಷ್ಟ ಎಂಬಂತಾಗಿತ್ತು.
-
.@JJonassen21's punching knock of 29* in 15 balls makes her the Player of the Match as @DelhiCapitals record another win 🙌🏻#TATAWPL | #DCvRCB
— Women's Premier League (WPL) (@wplt20) March 13, 2023 " class="align-text-top noRightClick twitterSection" data="
Scorecard ▶️ https://t.co/E13BL45tYr pic.twitter.com/f2YkgF32Ch
">.@JJonassen21's punching knock of 29* in 15 balls makes her the Player of the Match as @DelhiCapitals record another win 🙌🏻#TATAWPL | #DCvRCB
— Women's Premier League (WPL) (@wplt20) March 13, 2023
Scorecard ▶️ https://t.co/E13BL45tYr pic.twitter.com/f2YkgF32Ch.@JJonassen21's punching knock of 29* in 15 balls makes her the Player of the Match as @DelhiCapitals record another win 🙌🏻#TATAWPL | #DCvRCB
— Women's Premier League (WPL) (@wplt20) March 13, 2023
Scorecard ▶️ https://t.co/E13BL45tYr pic.twitter.com/f2YkgF32Ch
ಈ ಸಂದರ್ಭದಲ್ಲಿ ಕ್ರೀಸ್ಗಿಳಿದ ಎಲ್ಲಿಸ್ ಪೆರ್ರಿ ಮತ್ತು ರಿಚಾ ಘೋಷ್ ತಂಡದ ಮೊತ್ತ ಹೆಚ್ಚಿಸಿದರು. 73 ರನ್ಗಳ ಬಿರುಸಿನ ಜೊತೆಯಾಟವಾಡಿದ ಜೋಡಿ ತಂಡ 150 ರನ್ಗಳ ಸ್ಪರ್ಧಾತ್ಮಕ ಮೊತ್ತ ಗಳಿಸುವಂತೆ ಮಾಡಿದರು. ಅಂತಿಮ 6 ಓವರ್‌ಗಳಲ್ಲಿ ಆರ್‌ಸಿಬಿ 82 ರನ್ ಗಳಿಸಿತು. ಪೆರ್ರಿ 52 ಎಸೆತಗಳಲ್ಲಿ 4 ಬೌಂಡರಿ ಮತ್ತು 5 ಸಿಕ್ಸರ್‌ಗಳೊಂದಿಗೆ ಅಜೇಯ 67 ರನ್ ಮಾಡಿದರೆ, ರಿಚಾ ಘೋಷ್ ಪಂದ್ಯಾವಳಿಯಲ್ಲಿ ಇದೇ ಮೊದಲ ಬಾರಿಗೆ ಬ್ಯಾಟ್ ಬೀಸಿದರು. ವಿಕೆಟ್‌ಕೀಪರ್ ಬ್ಯಾಟರ್ ರಿಚಾ ಕೇವಲ 16 ಎಸೆತಗಳಲ್ಲಿ ತಲಾ 3 ಬೌಂಡರಿ, ಸಿಕ್ಸರ್‌ಗಳ ನೆರವಿನಿಂದ 37 ರನ್ ಗಳಿಸಿದ್ದಾಗ ಶಿಖಾ ಪಾಂಡೆಗೆ ವಿಕೆಟ್ ನೀಡಿದರು. ಡೆಲ್ಲಿ ಪರವಾಗಿ ಶಿಖಾ ಪಾಂಡೆ 3 ವಿಕೆಟ್ ಪಡೆದರೆ, ತಾರಾ ನೊರ್ರಿಸ್ 1 ವಿಕೆಟ್ ಕಿತ್ತರು.
ಆರ್‌ಸಿಬಿ ಹೊರಕ್ಕೆ?: ಡೆಲ್ಲಿ ಕ್ಯಾಪಿಟಲ್ಸ್ ಪಾಯಿಂಟ್ ಪಟ್ಟಿಯಲ್ಲಿ 5 ಪಂದ್ಯಗಳ ಪೈಕಿ 4 ರಲ್ಲಿ ಗೆದ್ದು 8 ಅಂಕಗಳೊಂದಿಗೆ 2 ನೇ ಸ್ಥಾನದಲ್ಲಿದೆ. ಸತತ ಐದು ಪಂದ್ಯಗಳಲ್ಲಿ ಸೋಲುವ ಮೂಲಕ ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್ನಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡ ಕೊನೆಯ ಸ್ಥಾನದಲ್ಲಿದ್ದು, ಟೂರ್ನಿಯಿಂದ ಹೊರಬೀಳುವ ಸಾಧ್ಯತೆ ದಟ್ಟವಾಗಿದೆ.
ಇದನ್ನೂ ಓದಿ: ವಿರಾಟ್ ಫಾರ್ಮ್ ಕಳೆದುಕೊಂಡಿರಲಿಲ್ಲ, ಅದು ಶತಕದ ಲಯ ನಿರ್ಧರಿಸುವ ಮಾನದಂಡವೂ ಅಲ್ಲ: ಸುನಿಲ್ ಗವಾಸ್ಕರ್