ETV Bharat / sports

ಟಿ -20 ವಿಶ್ವಕಪ್ ಬಳಿಕ ರೋಹಿತ್ ಶರ್ಮಾ ನಾಯಕತ್ವ ವಹಿಸಿಕೊಳ್ಳಲಿ: ವಿನೋದ್ ಕಾಂಬ್ಳೆ

ಟಿ-20 ವಿಶ್ವಕಪ್ ಟೂರ್ನಿಯ ಬಳಿಕ ಭಾರತ ಕ್ರಿಕೆಟ್ ತಂಡವನ್ನ ಯಾರು ಮುನ್ನಡೆಸಲಿದ್ದಾರೆ ಎಂಬುದು ಸದ್ಯದ ಕುತೂಹಲವಾಗಿದೆ. ಹಲವರು ವಿರಾಟ್ ಕೊಹ್ಲಿ ನಂತರ ರೋಹಿತ್ ಶರ್ಮಾ ನಾಯಕತ್ವ ವಹಿಸಿಕೊಳ್ಳಬೇಕು ಎಂಬ ಅಭಿಪ್ರಾಯವನ್ನ ವಿನೋದ್​ ಕಾಂಬ್ಳೆ ಹೇಳಿದ್ದಾರೆ.

rohit-sharma-will-be-indias-captain-in-t20i-after-world-cup-vinod-kambli
ಟಿ-20 ವಿಶ್ವಕಪ್ ಬಳಿಕ ರೋಹಿತ್ ಶರ್ಮಾ ನಾಯಕತ್ವ ವಹಿಸಿಕೊಳ್ಳಲಿ
author img

By

Published : Sep 17, 2021, 10:33 AM IST

Updated : Sep 17, 2021, 12:14 PM IST

ಮುಂಬೈ: ಟಿ - 20 ವಿಶ್ವಕಪ್ ಟೂರ್ನಿಯ ಬಳಿಕ ವಿರಾಟ್ ಕೊಹ್ಲಿ ನಾಯಕತ್ವ ತ್ಯಜಿಸುವುದಾಗಿ ಘೋಷಿಸಿದ ಬಳಿಕ ಟಿ-20 ತಂಡಕ್ಕೆ ಮುಂದಿನ ಸಾರಥಿ ಕುರಿತು ಚರ್ಚೆ ಆರಂಭವಾಗಿದೆ. ಈ ನಡುವೆ ಭಾರತ ಕ್ರಿಕೆಟ್ ತಂಡ ಮಾಜಿ ಆಟಗಾರ ವಿನೋದ್ ಕಾಂಬ್ಳೆ ಟಿ - 20 ತಂಡಕ್ಕೆ ಆರಂಭಿಕ ಆಟಗಾರ ರೋಹಿತ್ ಶರ್ಮಾ ಹೆಸರು ಸೂಚಿಸಿದ್ದಾರೆ.

ಟಿ-20 ವಿಶ್ವಕಪ್ ಬಳಿಕ ಭಾರತ ತಂಡವನ್ನ ರೋಹಿತ್ ಶರ್ಮಾ ಮುಂದುವರಿಸಲು ಎಂಬುದು ನನ್ನ ಅಭಿಪ್ರಾಯ ಎಂದಿದ್ದಾರೆ. ವಿರಾಟ್ ಈಗ ನಾಯಕತ್ವ ತ್ಯಜಿಸುತ್ತಿದ್ದಾರೆ, ಹೀಗಾಗಿ ರೋಹಿತ್ ಶರ್ಮಾ ಮುಂದಿನ ನಾಯಕನಾಗುವ ಅವಕಾಶವಿದೆ. ಇನ್ಮುಂದೆ ವಿರಾಟ್ ಯಾವ ಒತ್ತಡವಿಲ್ಲದೇ ಆಟಬಹುದು. ವಿರಾಟ್ ಒತ್ತಡವಿಲ್ಲದೇ ಆಡಬೇಕು ಎನ್ನುವುದು ನನ್ನ ಬಯಕೆ ಎಂದಿದ್ದಾರೆ.

ಮುಂಬೈ ಇಂಡಿಯನ್ಸ್ ತಂಡವನ್ನ ಹಲವು ಬಾರಿ ರೋಹಿತ್ ಗೆಲ್ಲಿಸಿದ್ದಾರೆ, ಹೀಗಾಗಿ ಅವರೇ ಭಾರತ ತಂಡವನ್ನೂ ಮುನ್ನಡೆಸಲಿ ಎನ್ನುವುದು ನನ್ನ ಬಯಕೆ. ಅಲ್ಲದೇ ಟಿ-20 ವಿಶ್ವಕಪ್​ನಲ್ಲಿ ವಿರಾಟ್​ ಕೊಹ್ಲಿಯ ಪರಿಪೂರ್ಣ ಆಟ ನೋಡಬಹುದು. ಜೊತೆಗೆ ಈ ಬಾರಿಯ ಟೂರ್ನಿಯಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಆಡುತ್ತಿದೆ. ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರುವುದನ್ನು ನಾನು ಎದುರು ನೋಡುತ್ತಿದ್ದೇನೆ ಎಂದಿದ್ದಾರೆ.

ಕೊಹ್ಲಿ ನಾಯಕತ್ವದಲ್ಲಿ ಭಾರತ ತಂಡ 45 ಟಿ-20 ಪಂದ್ಯಗಳ ಪೈಕಿ 27 ಪಂದ್ಯಗಳನ್ನು ಗೆದ್ದಿದೆ. 14 ಪಂದ್ಯಗಳನ್ನು ಸೋತಿದ್ದು, ಎರಡು ಪಂದ್ಯಗಳು ಟೈ ಆಗಿದ್ದವು ಮತ್ತು ಎರಡು ಪಂದ್ಯಗಳು ರದ್ದಾಗಿವೆ.

ಇದನ್ನೂ ಓದಿ: ಕೆ.ಎಲ್​.ರಾಹುಲ್​ ಅವರನ್ನು Vice Captain ಮಾಡಿ: ಗವಾಸ್ಕರ್ ಸಲಹೆ

Last Updated : Sep 17, 2021, 12:14 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.