ಚೆನ್ನೈ: ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ 44 ರನ್ ಸಿಡಿಸುವ ಮೂಲಕ ಐಪಿಎಲ್ನಲ್ಲಿ 4ನೇ ಗರಿಷ್ಠ ಸ್ಕೋರರ್ ಎನಿಸಿಕೊಂಡಿದ್ದಾರೆ.
ಈ ಪಂದ್ಯದಲ್ಲಿ 23 ರನ್ಗಳಿಸಿದ್ದ ವೇಳೆ ಸನ್ರೈಸರ್ಸ್ ಹೈದರಾಬಾದ್ ತಂಡದ ನಾಯಕ ಡೇವಿಡ್ ವಾರ್ನರ್ ಅವರನ್ನು ಹಿಂದಿಕ್ಕಿದರು. ವಾರ್ನರ್ 145 ಇನ್ನಿಂಗ್ಸ್ಗಳಲ್ಲಿ 5,347 ರನ್ಗಳಿಸಿದ್ದಾರೆ. ಇದರಲ್ಲಿ 49 ಅರ್ಧಶತಕ ಮತ್ತು 4 ಶತಕ ಸೇರಿವೆ.
ಇದೀಗ ರೋಹಿತ್ ಶರ್ಮಾ 204 ಪಂದ್ಯಗಳಿಂದ 5,364 ರನ್ ಸಿಡಿಸಿದ್ದಾರೆ. ಮೊದಲ ಮೂರು ಸ್ಥಾನಗಳಲ್ಲಿ ಆರ್ಸಿಬಿ ನಾಯಕ ವಿರಾಟ್ ಕೊಹ್ಲಿ(5,949), ಚೆನ್ನೈ ಸೂಪರ್ ಕಿಂಗ್ಸ್ನ ಸುರೇಶ್ ರೈನಾ(5448) ಹಾಗೂ 3ನೇ ಸ್ಥಾನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಶಿಖರ್ ಧವನ್ (5383) ಇದ್ದಾರೆ.
ಇದೇ ಸಂದರ್ಭದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗರಿಷ್ಠ ಸಿಕ್ಸರ್ ಸಿಡಿಸಿದ ಬ್ಯಾಟ್ಸ್ಮನ್ ಎಂಬ ಶ್ರೇಯಕ್ಕೂ ರೋಹಿತ್ ಪಾತ್ರರಾದರು. ಹಿಟ್ಮ್ಯಾನ್ ಡೆಲ್ಲಿ ವಿರುದ್ಧ 38 ಸಿಕ್ಸರ್ ಸಿಡಿಸಿದ್ದರೆ, ಯುನಿವರ್ಸಲ್ ಬಾಸ್ ಕ್ರಿಸ್ ಗೇಲ್ 37, ಶೇನ್ ವಾಟ್ಸನ್ 32, ಯುವರಾಜ್ ಸಿಂಗ್ 32 ಮತ್ತು ಎಂಎಸ್ ಧೋನಿ 30 ಸಿಕ್ಸರ್ ಸಿಡಿಸಿದ್ದಾರೆ.
ಇಂದಿನ ಪಂದ್ಯದಲ್ಲಿ ರೋಹಿತ್ ಶರ್ಮಾ 30 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 3 ಬೌಂಡರಿಗಳೊಂದಿಗೆ 44 ರನ್ಗಳಿಸಿ ಸ್ಪಿನ್ನರ್ ಅಮಿತ್ ಮಿಶ್ರಾಗೆ ವಿಕೆಟ್ ಒಪ್ಪಿಸಿದರು.
ಇದನ್ನು ಓದಿ:ಮೈಕಲ್ ವಾನ್ ಪ್ರಕಾರ್ ಧೋನಿ ನಂತರ ಸಿಎಸ್ಕೆ ನಾಯಕ ಸ್ಥಾನಕ್ಕೆ ಈತ ಸೂಕ್ತನಂತೆ!