ETV Bharat / sports

IND Vs BAN: ಮೊದಲ ಟೆಸ್ಟ್​ನಿಂದ ರೋಹಿತ್​ ಔಟ್​​, 12 ವರ್ಷಗಳ ಬಳಿಕ ವೇಗಿ ಉನದ್ಕತ್ ಕಮ್​ಬ್ಯಾಕ್​ - etv bharat kannada

ಬಾಂಗ್ಲಾದೇಶ ಹಾಗೂ ಭಾರತ​ ತಂಡಗಳ ನಡುವಿನ ಟೆಸ್ಟ್​ ಸರಣಿಯ ಮೊದಲ ಪಂದ್ಯದಲ್ಲಿ ಕೆಎಲ್​ ರಾಹುಲ್​ ತಂಡವನ್ನು ಮುನ್ನಡೆಸಲಿದ್ದಾರೆ.

Rohit Sharma ruled out of 1st Test and fast bowler Jaydev Unadkat added  to squad
IND Vs BNG: ಮೊದಲ ಟೆಸ್ಟ್​ನಿಂದ ರೋಹಿತ್​ ಔಟ್​​, ಜಯದೇವ್ ಉನದ್ಕತ್ ಕಮ್​ಬ್ಯಾಕ್​
author img

By

Published : Dec 11, 2022, 8:05 PM IST

Updated : Dec 11, 2022, 8:52 PM IST

ಬಾಂಗ್ಲಾದೇಶ ಹಾಗೂ ಭಾರತ ಕ್ರಿಕೆಟ್​ ತಂಡಗಳ ನಡುವಿನ ಎರಡು ಪಂದ್ಯಗಳ ಟೆಸ್ಟ್​ ಸರಣಿಯ ಮೊದಲ ಪಂದ್ಯದಿಂದ ಗಾಯಾಳು ನಾಯಕ ರೋಹಿತ್​ ಶರ್ಮಾ ಹೊರಬಿದ್ದಿದ್ದಾರೆ. ಸರಣಿಯಲ್ಲಿ ಇತರ ಕೆಲ ಗಾಯಾಳುಗಳ ಬದಲಿಗೆ ಬೇರೆ ಆಟಗಾರರಿಗೆ ಅವಕಾಶ ನೀಡಲಾಗಿದೆ.

ಈ ಬಗ್ಗೆ ಬಿಸಿಸಿಐ ಟ್ವೀಟ್​ ಮೂಲಕ ಮಾಹಿತಿ ಹಂಚಿಕೊಂಡಿದೆ. ರೋಹಿತ್​ ಶರ್ಮಾ ಹೆಬ್ಬೆರಳಿನ ಗಾಯದಿಂದ ತವರಿಗೆ ಮರಳಿರುವ ಹಿನ್ನೆಲೆಯಲ್ಲಿ ಮೊದಲ ಟೆಸ್ಟ್ ಪಂದ್ಯದಿಂದ ಹೊರಬಿದ್ದಿದ್ದಾರೆ. ನಾಯಕತ್ವವು ಕೆಎಲ್ ರಾಹುಲ್ ಹೆಗಲಿಗೇರಿದ್ದು, ಬದಲಿ ಆಟಗಾರನಾಗಿ ಅಭಿಮನ್ಯು ಈಶ್ವರನ್ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ಅಲ್ಲದೆ, ಗಾಯಗೊಂಡಿರುವ ವೇಗದ ಬೌಲರ್​ ಮೊಹಮ್ಮದ್ ಶಮಿ ಮತ್ತು ಆಲ್​ರೌಂಡರ್​ ರವೀಂದ್ರ ಜಡೇಜಾ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದಾರೆ. ಅವರ ಸ್ಥಾನಕ್ಕೆ ವೇಗಿ ನವದೀಪ್ ಸೈನಿ ಮತ್ತು ಸೌರಭ್ ಕುಮಾರ್ ತಂಡ ಸೇರಿಕೊಳ್ಳಲಿದ್ದಾರೆ.

ವಿಶೇಷವೆಂದರೆ ಆಯ್ಕೆ ಸಮಿತಿಯು ವೇಗದ ಬೌಲರ್ ಜಯದೇವ್ ಉನದ್ಕತ್ ಅವರಿಗೆ ಟೆಸ್ಟ್ ತಂಡದಲ್ಲಿ ಅವಕಾಶ ನೀಡಿದೆ. ದೇಶಿ ಕ್ರಿಕೆಟ್​ನಲ್ಲಿ ಅದ್ಭುತ ಪ್ರದರ್ಶನದ ಹಿನ್ನೆಲೆಯಲ್ಲಿ ಉನದ್ಕತ್ 12 ವರ್ಷಗಳ ಬಳಿಕ ಭಾರತ ತಂಡಕ್ಕೆ ಮರಳಿದ್ದಾರೆ. ಉನದ್ಕತ್ 2010ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೆಂಚೂರಿಯನ್‌ನಲ್ಲಿ ಏಕೈಕ ಟೆಸ್ಟ್ ಪಂದ್ಯ ಆಡಿದ್ದರು. ಬಳಿಕ 7 ಅಂತಾರಾಷ್ಟ್ರೀಯ ಏಕದಿನ ಹಾಗೂ 10 ಟಿ20 ಪಂದ್ಯಗಳಲ್ಲಿಯೂ ಭಾರತ ತಂಡವನ್ನು ಪ್ರತಿನಿಧಿಸಿದ್ದರು.

ಮೊದಲ ಟೆಸ್ಟ್​ ಪಂದ್ಯವು ಡಿ.14ರಿಂದ ಚಿತ್ತಗಾಂಗ್​ನಲ್ಲಿ ಆರಂಭವಾಗಲಿದ್ದು, ಡಿ. 22ರಿಂದ ಢಾಕಾದಲ್ಲಿ ದ್ವಿತೀಯ ಟೆಸ್ಟ್​ ಪಂದ್ಯ ನಡೆಯಲಿದೆ.

ಇದನ್ನೂ ಓದಿ: ಕ್ರಿಕೆಟ್​ಗೆ ಮರಳಲು ಕಾತರ: ಭಾವನಾತ್ಮಕ ಟ್ವೀಟ್​ ಮಾಡಿದ ಕರುಣ್​ ನಾಯರ್​

Last Updated : Dec 11, 2022, 8:52 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.