ಮುಂಬೈ (ಮಹಾರಾಷ್ಟ್ರ): ರೋಹಿತ್ ಶರ್ಮಾ ನೇತೃತ್ವದ ಭಾರತ ಕ್ರಿಕೆಟ್ ತಂಡ ಆಸ್ಟ್ರೇಲಿಯಾದಲ್ಲಿ ಇದೇ 16 ರಿಂದ ಪ್ರಾರಂಭವಾಗುವ ಟಿ20 ವಿಶ್ವಕಪ್‌ಗಾಗಿ ಗುರುವಾರ ಬೆಳಗ್ಗೆ ಕಾಂಗರೂ ನಾಡಿಗೆ ಪ್ರಯಾಣ ಬೆಳೆಸಿತು.
ಏಷ್ಯಾ ಕಪ್ ಕಹಿ ನೆನಪಿನ ಬಳಿಕ ತವರಿನಲ್ಲಿ ನಡೆದ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯನ್ನು ಜಯಿಸಿ ಆತ್ಮವಿಶ್ವಾಸ ವೃದ್ಧಿಸಿಕೊಂಡಿರುವ ಟೀಂ ಇಂಡಿಯಾ ವಿಶ್ವಕಪ್ ಮೇಲೆ ಕಣ್ಣಿಟ್ಟಿದೆ.
ಆಸ್ಟ್ರೇಲಿಯಾ ಪ್ರವಾಸ ಕೈಗೊಂಡ ಭಾರತ ತಂಡದ ಗ್ರೂಪ್ ಫೋಟೋವನ್ನು ಬಿಸಿಸಿಐ ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದು, ಪರ್ಫೆಕ್ಟ್ ಚಿತ್ರ, ಸಾಧಿಸಿ ಬನ್ನಿ ಟೀಂ ಇಂಡಿಯಾ, ಆಸ್ಟ್ರೇಲಿಯಾಕ್ಕೆ ಬರುತ್ತಿದ್ದೇವೆ ಎಂದು ಬರೆದುಕೊಂಡಿದೆ.
-
Picture perfect 📸
— BCCI (@BCCI) October 5, 2022 " class="align-text-top noRightClick twitterSection" data="
Let's do this #TeamIndia@cricketworldcup, here we come ✈️ pic.twitter.com/XX7cSg3Qno
">Picture perfect 📸
— BCCI (@BCCI) October 5, 2022
Let's do this #TeamIndia@cricketworldcup, here we come ✈️ pic.twitter.com/XX7cSg3QnoPicture perfect 📸
— BCCI (@BCCI) October 5, 2022
Let's do this #TeamIndia@cricketworldcup, here we come ✈️ pic.twitter.com/XX7cSg3Qno
ತೀರದ ಗಾಯದ ಸಮಸ್ಯೆ: 2007 ರ ಚಾಂಪಿಯನ್ ತಂಡ ಗಾಯದ ಸಮಸ್ಯೆಯಿಂದ ಹೊರಬಂದಿಲ್ಲ. ತಂಡದ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ ಗಾಯಗೊಂಡು ತಂಡಕ್ಕೆ ಆಯ್ಕೆಯಾಗಿಲ್ಲ. ಗಾಯದಿಂದ ಚೇತರಿಸಿಕೊಂಡು ತಂಡ ಸೇರಿದ್ದ ಮುಂಚೂಣಿ ವೇಗಿ ಜಸ್ಪ್ರೀತ್ ಬೂಮ್ರಾ ಬೆನ್ನುಮೂಳೆ ಮುರಿತಕ್ಕೀಡಾಗಿ ವಿಶ್ವಕಪ್ನಿಂದಲೇ ಹೊರಬಿದ್ದಿದ್ದಾರೆ.
ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಸರಣಿ ಭಾರತ ತನ್ನ ಹುಳುಕುಗಳನ್ನು ಸರಿ ಮಾಡಿಕೊಳ್ಳಲು ವೇದಿಕೆ ನೀಡಿತ್ತು. ಬೌಲರ್ಗಳ ವೈಫಲ್ಯ ಇಲ್ಲಿಯೂ ಮುಂದುವರಿದಿದ್ದು, ವಿಶ್ವಕಪ್ ಗೆಲ್ಲುವ ಗುರಿಗೆ ಇದು ಅಡ್ಡಿಯಾಗಲಿದೆಯಾ ಎಂಬುದು ಪ್ರಶ್ನೆಯಾಗಿದೆ.
ಬೂಮ್ರಾ ತಂಡದಿಂದ ಹೊರಬಿದ್ದಿದ್ದು, 15 ನೇ ಆಟಗಾರರನ್ನು ಹೊಂದದೇ ಟೀಂ ಇಂಡಿಯಾ ಆಸ್ಟ್ರೇಲಿಯಾಕ್ಕೆ ಹಾರಿದೆ. ಮೀಸಲು ಪಡೆಯಲ್ಲಿರುವ ವೇಗಿ ಮೊಹಮ್ಮದ್ ಶಮಿ ಮತ್ತು ದೀಪಕ್ ಚಹರ್ ಇಬ್ಬರಲ್ಲಿ ಒಬ್ಬರು ತಂಡ ಸೇರಲಿದ್ದಾರೆ. ನಿನ್ನೆಯಷ್ಟೇ ಕೋಚ್ ರಾಹುಲ್ ದ್ರಾವಿಡ್ ಶಮಿಯನ್ನು ತಂಡಕ್ಕೆ ಸೇರಿಸಿಕೊಳ್ಳುವ ಬಗ್ಗೆ ಸುಳಿವು ನೀಡಿದ್ದರು.
ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ವಿರುದ್ಧ 2 ಅಭ್ಯಾಸ ಪಂದ್ಯಗಳನ್ನು ಆಡಲಿದೆ. ಅಕ್ಟೋಬರ್ 23 ರಂದು ಮೆಲ್ಬೋರ್ನ್‌ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಮೊದಲ ಪಂದ್ಯವಾಡುವ ಮೂಲಕ ಭಾರತ ವಿಶ್ವಕಪ್ ಅಭಿಯಾನ ಆರಂಭಿಸಲಿದೆ.