ETV Bharat / sports

ಮುಂಬೈ ಇಂಡಿಯನ್ಸ್​ ಸೇರಿ 12 ವರ್ಷ.. ತಂಡಕ್ಕೆ ಧನ್ಯವಾದ ಹೇಳಿದ ರೋಹಿತ್​ ಶರ್ಮಾ - ಹಿಟ್‌ಮ್ಯಾನ್ ದಾಖಲೆಗಳು

ಐಪಿಎಲ್​ ಮುಂಬೈ ಇಂಡಿಯನ್ಸ್ ತಂಡ - 12 ವರ್ಷ ಪೂರೈಸಿದ ನಾಯಕ ರೋಹಿತ್​ ಶರ್ಮಾ - 5 ಬಾರಿ ಚಾಂಪಿಯನ್​ ಮಾಡಿರುವ ರೋಹಿತ್​

rohit-sharma
ರೋಹಿತ್​ ಶರ್ಮಾ
author img

By

Published : Jan 9, 2023, 7:22 PM IST

ನವದೆಹಲಿ: ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ(ಐಪಿಎಲ್​) ಅತ್ಯಂತ ಯಶಸ್ವಿ ತಂಡ ಎಂದರೆ ಅದು ಮುಂಬೈ ಇಂಡಿಯನ್ಸ್​. 5 ಬಾರಿ ಚಾಂಪಿಯನ್​ ಆಗಿರುವ ಮುಂಬೈ ಟೂರ್ನಿಯ ಬಲಿಷ್ಠ ಫ್ರಾಂಚೈಸಿಯಾಗಿದೆ. ಅದರ ನಾಯಕ ರೋಹಿತ್​ ಶರ್ಮಾ ತಂಡಕ್ಕೆ ಸೇರಿಕೊಂಡು 12 ವಸಂತಗಳು ಕಳೆದಿದದ್ದು, ತಂಡದ ಒಡನಾಟದ ಬಗ್ಗೆ ಮಾತನಾಡಿದ್ದಾರೆ.

ಮುಂಬೈ ತಂಡಕ್ಕೆ 2011 ರಲ್ಲಿ ಸೇರ್ಪಡೆಯಾದೆ. ಅದಾದ ಬಳಿಕ 12 ವರ್ಷಗಳಿಂದ ಒಂದೇ ತಂಡದಲ್ಲಿ ಮುಂದುವರಿದಿದ್ದೇನೆ. ಅದರ ನಾಯಕನಾಗಿಯೂ ಬಡ್ತಿ ಪಡೆದಿದ್ದೇನೆ. ತಂಡದ ಜೊತೆಯ ಬಾಂಧವ್ಯ ಹೆಚ್ಚು ಸಂತಸ ತಂದಿದೆ ಮತ್ತು ತುಂಬಾ ವಿಶೇಷವಾಗಿದೆ ಎಂದು ಅವರ ಹೇಳಿದ್ದಾರೆ.

ಮುಂಬೈ ಇಂಡಿಯನ್ಸ್‌ನಲ್ಲಿ 12 ವರ್ಷಗಳು ಕಳೆದಿವೆ ಎಂಬುದನ್ನು ನಾನು ನಂಬಲು ಸಾಧ್ಯವಾಗುತ್ತಿಲ್ಲ. ಈ ಪ್ರಯಾಣವು ನನಗೆ ತುಂಬಾ ರೋಮಾಂಚನಕಾರಿ ಮತ್ತು ಭಾವನಾತ್ಮಕವಾಗಿದೆ. ಅನುಭವಿಗಳು ಮತ್ತು ಯುವಕರೊಂದಿಗೆ ನಾವು ಸಾಕಷ್ಟು ಕಲಿತಿದ್ದೇವೆ. ತಂಡದ ಸಂಯೋಜನೆ ಮತ್ತು ರಣತಂತ್ರಗಳು ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲೂ ನನಗೆ ನೆರವಾಗಿವೆ ಎಂದು ಹೇಳಿಕೊಂಡಿದ್ದಾರೆ.

ತಂಡದಲ್ಲಿ ಕಾಯಂ ಸ್ಥಾನ: ಮೊದಲೆರಡು ಸೀಸನ್​ನಲ್ಲಿ ಹೈದರಾಬಾದ್​ನ ಡೆಕ್ಕನ್ ಚಾರ್ಜರ್ಸ್‌ನಲ್ಲಿ ಆಡಿದ್ದೆ. ಇದಾದ ಬಳಿಕ 2011ರಲ್ಲಿ ನಡೆದ ಬಿಡ್ಡಿಂಗ್​ನಲ್ಲಿ ಬೆಂಗಳೂರು, ಮುಂಬೈ, ಪಂಜಾಬ್ ಕಿಂಗ್ಸ್‌ ತಂಡಗಳು ರೋಹಿತ್‌ರನ್ನು ಮೆಗಾ ಹರಾಜಿನಲ್ಲಿ ಪಡೆಯಲು ಹೆಚ್ಚಿನ ಬಿಡ್ ಮಾಡಿದವು. ಈ ಎಲ್ಲ ತಂಡಗಳನ್ನು ಮೀರಿ ಮುಂಬೈ ಇಂಡಿಯನ್ಸ್ ನನ್ನನ್ನು ಖರೀದಿ ಮಾಡಿತು. ಅಂದಿನಿಂದ ತಂಡದಲ್ಲಿ ಕಾಯಂ ಸ್ಥಾನ ಪಡೆದಿದ್ದೇನೆ ಎಂದು ಹೇಳಿದರು.

ತಂಡದಲ್ಲಿ ನನ್ನನ್ನು ಗುರುತಿಸಿ ನಾಯಕನನ್ನಾಗಿ ಮಾಡಿದ್ದಕ್ಕೆ ಆಭಾರಿಯಾಗಿರುತ್ತೇನೆ. ಮುಂಬೈ ಇಂಡಿಯನ್ಸ್ ತಂಡ ಕುಟುಂಬವಿದ್ದಂತೆ. ಸಹ ಆಟಗಾರರು, ಅಭಿಮಾನಿಗಳು ಮತ್ತು ತಂಡದೆಲ್ಲ ಸದಸ್ಯರಿಗೆ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ ಎಂದು ರೋಹಿತ್ ಶರ್ಮಾ ಹೇಳಿದ್ದಾಗಿ ಫ್ರಾಂಚೈಸಿ ಅಧಿಕೃತ ಹೇಳಿಕೆ ಹೊರಡಿಸಿದೆ.

ರೋಹಿತ್​ ಶರ್ಮಾ ನೇತೃತ್ವದಲ್ಲಿ 2013, 2015, 2017, 2019 ಮತ್ತು 2020 ರಲ್ಲಿ ತಂಡ ಐಪಿಎಲ್​ ಚಾಂಪಿಯನ್​ ಆಗಿ ಹೊರಹೊಮ್ಮಿದೆ. 5 ಐಪಿಎಲ್ ಪ್ರಶಸ್ತಿಗಳನ್ನು ಗೆದ್ದ ಏಕೈಕ ನಾಯಕ ಎಂಬ ದಾಖಲೆಯನ್ನು ಶರ್ಮಾ ಹೊಂದಿದ್ದಾರೆ.

ಹಿಟ್‌ಮ್ಯಾನ್ ದಾಖಲೆಗಳು: ಭಾರತ ತಂಡದ ನಾಯಕ ರೋಹಿತ್ ಶರ್ಮಾ, ಮುಂಬೈ ಇಂಡಿಯನ್ಸ್ ಪರವಾಗಿ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ಆಟಗಾರ. 4,982 ರನ್‌ಗಳೊಂದಿಗೆ ಮುಂಬೈ ತಂಡದ ಅತಿ ಹೆಚ್ಚು ಸ್ಕೋರರ್​ ಕೂಡ ಆಗಿದ್ದಾರೆ. ಇದಲ್ಲದೇ ನಾಯಕನಾಗಿ ಐಪಿಎಲ್‌ನಲ್ಲಿ ಅತಿ ಹೆಚ್ಚು ಗೆಲುವು ಕಂಡ ಎರಡನೇ ನಾಯಕರಾಗಿದ್ದಾರೆ. 143 ಪಂದ್ಯಗಳಲ್ಲಿ 81 ಪಂದ್ಯಗಳನ್ನು ರೋಹಿತ್​ ಶರ್ಮಾ ಗೆದ್ದಿದ್ದಾರೆ. ಮೊದಲ ಸ್ಥಾನದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಇದ್ದಾರೆ.

ಭಾರತ ತಂಡದ ನಾಯಕರಾಗಿರುವ ರೋಹಿತ್​ ಶರ್ಮಾ ಶ್ರೀಲಂಕಾ ವಿರುದ್ಧ ಏಕದಿನ ಸರಣಿಗೆ ಭಾರತ ತಂಡವನ್ನು ಸೇರಿಕೊಂಡಿದ್ದಾರೆ. ಟಿ20 ಸರಣಿ ಗೆದ್ದಿರುವ ಟೀಂ ಇಂಡಿಯಾ ಇದೀಗ ಏಕದಿನ ಸರಣಿಗೆ ಸಜ್ಜಾಗಿದೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ತಂಡ ಶ್ರೀಲಂಕಾ ವಿರುದ್ಧ ನಾಳೆ (ಜನವರಿ 10) ಗುವಾಹಟಿಯಲ್ಲಿ ಮೊದಲ ಪಂದ್ಯವನ್ನು ಆಡಲಿದೆ. ಇದಾದ ಬಳಿಕ ಜನವರಿ 12 ಮತ್ತು 15ರಂದು ಕೋಲ್ಕತ್ತಾ ಮತ್ತು ತಿರುವನಂತಪುರಂನಲ್ಲಿ ಉಳಿದ ಪಂದ್ಯಗಳು ನಡೆಯಲಿವೆ.

ಓದಿ: ಶ್ರೀಲಂಕಾ ಏಕದಿನ ಸರಣಿಯಿಂದ ವೇಗಿ ಜಸ್ಪ್ರೀತ್​ ಬೂಮ್ರಾ ಔಟ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.