ಮುಂಬೈ: ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿಯನ್ನು ಕ್ಲೀನ್ ಸ್ವೀಪ್ ಸಾಧಿಸಿದ ನಂತರ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರನ್ನು ಮಾಜಿ ಕ್ರಿಕೆಟಿಗ ವಾಸಿಮ್ ಜಾಫರ್ ಮತ್ತು ಸಬಾ ಕರೀಮ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ವಿರಾಟ್ ಕೊಹ್ಲಿಗಿಂತಲೂ ರೋಹಿತ್ ದೊಡ್ಡ ಟೆಸ್ಟ್ ನಾಯಕನಾಗಲಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ವಿರಾಟ್ ಕೊಹ್ಲಿಗಿಂತ ರೋಹಿತ್ ಶರ್ಮಾ ಉತ್ತಮ ಟೆಸ್ಟ್ ನಾಯಕನಾಗುತ್ತಾರೆ. ಅವರು ಎಷ್ಟು ಟೆಸ್ಟ್ ಪಂದ್ಯಗಳಿಗೆ ನಾಯಕನಾಗುತ್ತಾರೋ ಗೊತ್ತಿಲ್ಲ, ಆದರೆ ಅವರು ಅತ್ಯುತ್ತಮ ನಾಯಕರಾಗಿ ಉಳಿದುಕೊಳ್ಳಲಿದ್ದಾರೆ ಎನ್ನುವುದು ಖಚಿತ. ವರಸೆಯಾಗಿ ಸರಣಿಗಳನ್ನು ವೈಟ್ವಾಶ್ ಮಾಡುತ್ತಿರುವುದನ್ನು ನೋಡಿದರೆ, ಪ್ರಸ್ತುತ ಭಾರತ ತಂಡದ ನಾಯಕತ್ವ ಸರಿಯಾದ ವ್ಯಕ್ತಿಯ ಕೈಯಲ್ಲಿದೆ ಎಂದು ಹೇಳಬಹುದು ಎಂದು ಜಾಫರ್ ಇಎಸ್ಪಿಎನ್ಗೆ ತಿಳಿಸಿದ್ದಾರೆ.
ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿ ವಿಜಯದ ಬಗ್ಗೆ ಪ್ರತಿಕ್ರಿಯಿಸದ ಮತ್ತೊಬ್ಬ ಮಾಜಿ ಕ್ರಿಕೆಟಿಗ ಸಬಾ ಕರೀಮ್ ಕೂಡ ರೋಹಿತ್ ನಾಯಕತ್ವದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ರೋಹಿತ್ ಶರ್ಮಾ ನೀಡಿರುವ ಹೇಳಿಕೆಗಳನ್ನು ಗಮನಿಸಿದರೆ ನಾಯಕತ್ವದಲ್ಲಿ ಸಂಪೂರ್ಣ ಸ್ವಾತಂತ್ರ್ಯ ಇರುವಂತಿದೆ. ಇದು ಒಳ್ಳೆಯ ವಿಚಾರ. ನೀವು ಚೆನ್ನಾಗಿ ಆಡಿದಾಗ ಪ್ರಶಂಸಿಸಿ, ಉತ್ತಮ ಪ್ರದರ್ಶನ ನೀಡದಿದ್ದಾಗ ಟೀಕಿಸದೆ ಬೇರೆ ರೀತಿಯಲ್ಲಿ ಹೇಳುವುದನ್ನು ನಾಯಕನಿಂದ ಪ್ರತಿಯೊಬ್ಬ ಆಟಗಾರ ನಿರೀಕ್ಷಿಸುತ್ತಾನೆ. ಆ ರೀತಿಯ ಲಕ್ಷಣಗಳು ರೋಹಿತ್ ನಾಯಕತ್ವದಲ್ಲಿ ಕಾಣಿಸುತ್ತಿದೆ. ರೋಹಿತ್ ಮತ್ತು ದ್ರಾವಿಡ್ ಜೋಡಿ ಭಾರತ ತಂಡದ ಯಶಸ್ಸಿಗೆ ಶ್ರಮಿಸಿದೆ. ಆದರೆ ವಿದೇಶದ ಸರಣಿಗಳ ವಿಷಯ ಬಂದಾಗ ಈ ಜೋಡಿ ಮತ್ತಷ್ಟು ಕೆಲಸ ಮಾಡಬೇಕಿದೆ ಎಂದಿದ್ದಾರೆ.
ರೋಹಿತ್ ಶರ್ಮಾ ಭಾರತ ತಂಡದ ಪೂರ್ಣ ಪ್ರಮಾಣದ ನಾಯಕನಾದ ಮೇಲೆ ಸತತವಾಗಿ ನ್ಯೂಜಿಲ್ಯಾಂಡ್ ವಿರುದ್ಧ ಟಿ20, ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಮತ್ತು ಟಿ20, ಶ್ರೀಲಂಕಾ ವಿರುದ್ಧ ಟಿ20 ಮತ್ತು ಟೆಸ್ಟ್ ಸರಣಿಗಳನ್ನು ವೈಟ್ವಾಶ್ ಸಾಧಿಸಿದೆ.
ಇದನ್ನೂ ಓದಿ:ಐಪಿಎಲ್ಗೆ ಹೊಸ ರೂಪದಲ್ಲಿ ರೀ ಎಂಟ್ರಿ ಕೊಡಲಿದ್ದಾರೆ ಸುರೇಶ್ ರೈನಾ