ದುಬೈ: ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಮತ್ತೆ ರನ್ ಕದಿಯಲು ಎಡವುತ್ತಿರುವ ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಬಗ್ಗೆ ದಿಗ್ಗಜ ಕ್ರಿಕೆಟರ್ ರಿಕಿ ಪಾಂಟಿಂಗ್ ಮಾತನಾಡಿದ್ದು, ವಿರಾಟ್ ಪರ ಬ್ಯಾಟ್ ಬೀಸಿದ್ದಾರೆ. ಅವರು ಆಸ್ಟ್ರೇಲಿಯಾ ಸಿರಿಸ್ ಮೂರು ಪಂದ್ಯಗಳಲ್ಲಿ ಬ್ಯಾಟರ್ಗಳ ಫಾರ್ಮ್ ಬಗ್ಗೆ ನಾವು ಮಾತನಾಡುವಂತಿಲ್ಲ ಎಂದ ಅವರು ಪಿಚ್ ಎಲ್ಲ ಬ್ಯಾಟರ್ಗಳಿಗೂ ಕಾಡುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
-
Ricky Ponting discussed Virat Kohli's current form and a potential change to India's Test batting order on The ICC Review 👀
— ICC (@ICC) March 7, 2023 " class="align-text-top noRightClick twitterSection" data="
Details ⬇️https://t.co/wFB94XZRNm
">Ricky Ponting discussed Virat Kohli's current form and a potential change to India's Test batting order on The ICC Review 👀
— ICC (@ICC) March 7, 2023
Details ⬇️https://t.co/wFB94XZRNmRicky Ponting discussed Virat Kohli's current form and a potential change to India's Test batting order on The ICC Review 👀
— ICC (@ICC) March 7, 2023
Details ⬇️https://t.co/wFB94XZRNm
ಐಸಿಸಿ ರಿವ್ಯೂನಲ್ಲಿ ರಿಕ್ಕಿಗೆ ವಿರಾಟ್ ಕೊಹ್ಲಿ ಮತ್ತೆ ರನ್ ಗಳಿಸಲು ವಿಫಲವಾಗುತ್ತಿರುವ ಬಗ್ಗೆ ಕೇಳಿದಾಗ,"ನಾನು ಈ ಟೆಸ್ಟ್ ಸರಣಿಯಲ್ಲಿ ಯಾರ ಫಾರ್ಮ್ ಅನ್ನು ನೋಡುತ್ತಿಲ್ಲ ಏಕೆಂದರೆ ಬ್ಯಾಟರ್ಗಳಿಗೆ ಪಿಚ್ ಸಹಕರಿಸುತ್ತಿಲ್ಲ. ವಿರಾಟ್ ಒಬ್ಬ ಚಾಂಪಿಯನ್ ಆಟಗಾರ ಅವರು ಒಂದು ಮಾರ್ಗವನ್ನು ಕಂಡಿತಾ ಕಂಡುಕೊಳ್ಳುತ್ತಾರೆ. ಅವರಿಗೆ ಈಗ ರನ್ ಬರ ಇದೆ ಅಷ್ಟೇ, ಆದರೆ ಅವರು ಮರಳಿ ಉತ್ತಮ ಬ್ಯಾಟಿಂಗ್ ಲಯಕ್ಕೆ ಎಂಬ ನಿರೀಕ್ಷೆ ಇದೆ" ಎಂದಿದ್ದಾರೆ.
ವಿರಾಟ್ ಬ್ಯಾಟ್ನಿಂದ ಕೊನೆಯ 14 ಇನ್ನಿಂಗ್ಸ್ನಲ್ಲಿ ಯಾವುದೇ ಅರ್ಧಶತಕ ಬಂದಿಲ್ಲ. ಬಾರ್ಡರ್ - ಗವಾಸ್ಕರ್ ಟ್ರೋಫಿಯ 3 ಟೆಸ್ಟ್ನ 5 ಇನ್ನಿಂಗ್ಸ್ನಿಂದ ವಿರಾಟ್ 111 ರನ್ ಗಳಿಸಿದ್ದಾರೆ. "ಯಾವುದೇ ಒಬ್ಬ ಬ್ಯಾಟರ್ಗೆ ಆತನ ಲಯದ ಬಗ್ಗೆ ಇತರರು ಮಾತನಾಡುವುದರಿಂದ ಗೊತ್ತಾಗ ಬೇಕಿಲ್ಲ. ಆತನಿಗೆ ಫಾರ್ಮ್ ಬಗ್ಗೆ ಅರಿವಾಗಿರುತ್ತದೆ. ವಿರಾಟ್ ಕೊಹ್ಲಿಗೆ ವಾಸ್ತವತೆ ಬಗ್ಗೆ ಇನ್ನೊಬ್ಬರು ಹೇಳುವುದಕ್ಕಿಂತ ಹೆಚ್ಚು ಅರಿವಿದೆ. ನನಗೆ ವಿರಾಟ್ ಮೇಲೆ ಸಂಪೂರ್ಣ ನಂಬಿಕೆ ಇದೆ. ಅವರು ಕಮ್ ಬ್ಯಾಕ್ ಮಾಡುತ್ತಾರೆ ಎಂದು" ಹೇಳಿದ್ದಾರೆ.
ಭಾರತ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ಗೆ ಆಯ್ಕೆ ಆದರೆ ತಂಡದ ಕ್ರಮಾಂಕದಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಪಾಂಟಿಂಗ್ ಅಭಿಪ್ರಾಯ ವ್ಯಕ್ತಪಡಿಸಿದ್ದಲ್ಲದೇ ಕೆ.ಎಲ್. ರಾಹುಲ್ಗೆ ತಂಡದಲ್ಲಿ ಗಿಲ್ ಉಪಸ್ಥಿತಿಯಲ್ಲಿ ಸ್ಥಾನ ನೀಡ ಬೇಕು ಎಂದಿದ್ದಾರೆ. ರಾಹುಲ್ ಟೆಸ್ಟ್ನಲ್ಲಿ ಗಳಿಸಿರುವ ಏಳು ಶತಕಗಳಲ್ಲಿ ಎರಡು ಇಂಗ್ಲೆಂಡ್ನಲ್ಲಿ ದಾಖಲಾಗಿದ್ದು ಅದೂ 2018 ರಲ್ಲಿ. ಓವಲ್‌ನಲ್ಲಿ ನಡೆದ ಪಂದ್ಯದಲ್ಲಿ ಅವರು 149 ರನ್ ಗಳಿಸಿದ್ದರು. ಬಾರ್ಡರ್ ಗವಾಸ್ಕರ್ ಟ್ರೋಫಿಯ ಎರಡು ಪಂದ್ಯಗಳಿಂದ ರಾಹುಲ್ ಕೇವಲ 38 ರನ್ ಗಳಿಸಿದ್ದರಿಂದ ಇಂದೋರ್ನ ಮೂರನೇ ಟೆಸ್ಟ್ಗೆ ಶುಭಮನ್ ಗಿಲ್ ಅವರನ್ನು ಆರಂಭಿಕರಾಗಿ ಆಡಿಸಲಾಗಿತ್ತು.
"ಕೆ. ಎಲ್. ರಾಹುಲ್ ಬದಲಿಯಾಗಿ ಶುಭಮನ್ ಗಿಲ್ ಆಡುತ್ತಿದ್ದಾರೆ. ಇಬ್ಬರು ಟೆಸ್ಟ್ನಲ್ಲಿ ಉತ್ತಮ ಆಟಗಾರರು. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ಗೆ ಇಬ್ಬರಿಗೂ ಅವಕಾಶ ಸಿಗುವ ಸಾಧ್ಯತೆ ಇದೆ. ಶುಭಮನ್ ಗಿಲ್ ಆರಂಭಿಕರಾಗಿ ಕಣಕ್ಕಿಳಿದರೆ, ರಾಹುಲ್ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬಹುದು. ಓವೆಲ್ ಕ್ರೀಡಾಂಗಣದಲ್ಲಿ ಬಿಸಿಲು ಹೆಚ್ಚಿದ್ದಾಗ ಬಾಲ್ ಸ್ವಿಂಗ್ ಆಗುತ್ತದೆ. ವೇಗದ ಬೌಲಿಂಗ್ ಹೆಚ್ಚು ಪ್ರಾಶಸ್ತ್ಯ ದೊರೆಯುತ್ತದೆ" ಎಂದಿದ್ದಾರೆ.
ಈ ಸರಣಿಗೆದ್ದು ಭಾರತ ಫೈನಲ್ ಪ್ರವೇಶಿಸುತ್ತದೆ ಎಂದು ಭಾವಿಸುತ್ತೇನೆ. ಸೂರ್ಯನ ಬಿಸುಲು ಹೋಗುವ ವರೆಗೂ ಓವೆಲ್ ಪಿಚ್ನಲ್ಲಿ ಬ್ಯಾಟಿಂಗ್ ಮಾಡಲು ಉತ್ತಮವಾಗಿರುತ್ತದೆ ಎಂದು ಆಸ್ಟ್ರೇಲಿಯನ್ ಕ್ರಿಕೆಟರ್ ರಿಕ್ಕಿ ಪಾಂಟಿಂಗ್ ಹೇಳಿದ್ದಾರೆ.
ಇದನ್ನೂ ಓದಿ: WTC 2023: ಅಧಿಕ ರನ್ ಗಳಿಸಿದ ಬ್ಯಾಟರ್ ರೂಟ್, ಭಾರತಕ್ಕೆ ಆಸಿಸ್ ಸರಣಿ ಅಂತಿಮ ಟೆಸ್ಟ್ ನಿರ್ಣಾಯಕ