ETV Bharat / sports

ಆಂಗ್ಲೊ-ವಿಂಡೀಸ್ ಟೆಸ್ಟ್​ ಸರಣಿಗೆ ಸಾರ್ವಕಾಲಿಕ ಕ್ರಿಕೆಟಿಗರಿಬ್ಬರ ಹೆಸರು, ಟ್ರೋಫಿ ಬಿಡುಗಡೆ - ಇಯಾನ್ ಬಾಥಮ್

ವೆಸ್ಟ್​ ಇಂಡೀಸ್ ಮತ್ತು ಇಂಗ್ಲೆಂಡ್ ನಡುವೆ ನಡೆಯುವ ಟೆಸ್ಟ್​ ಸರಣಿಗೆ ಎರಡೂ ದೇಶಗಳ ಸಾರ್ವಕಾಲಿಕ ಕ್ರಿಕೆಟಿಗರಾದ ರಿಚರ್ಡ್ಸ್ ಮತ್ತು ಬಾಥಮ್​ ಅವರ ನಾಮಕರಣ ಮಾಡಲಾಗಿದ್ದು, ಅದ್ಭುತ ವಿನ್ಯಾಸದ ಟ್ರೋಫಿಯನ್ನು ಬಿಡುಗಡೆ ಮಾಡಲಾಗಿದೆ.

Richards-Botham Trophy
ರಿಚರ್ಡ್ಸ್​​-ಬಾಥಮ್ ಟ್ರೋಫಿ
author img

By

Published : Mar 7, 2022, 7:56 PM IST

ಸೇಂಟ್​ ಜಾನ್ಸ್(ಆ್ಯಂಟಿಗುವಾ): ವೆಸ್ಟ್​ ಇಂಡೀಸ್ ಮತ್ತು ಇಂಗ್ಲೆಂಡ್ ನಡುವೆ ನಡೆಯಲಿರುವ ಟೆಸ್ಟ್​ ಸರಣಿಗೆ ನೂತನ ವಿನ್ಯಾಸದ ರಿಚರ್ಡ್ಸ್-ಬಾಥಮ್​ ಟ್ರೋಫಿಯನ್ನು ಸ್ವತಃ ಲೆಜೆಂಡರಿ ಕ್ರಿಕೆಟಿಗರಾದ ಸರ್​ ವಿವಿಯನ್ ರಿಚರ್ಡ್ಸ್ ಮತ್ತು ಲಾರ್ಡ್ ಇಯಾನ್ ಭಾಥಮ್​ ಸೋಮವಾರ ಬಿಡುಗಡೆ ಮಾಡಿದ್ದಾರೆ.

ನನ್ನ ಉತ್ತಮ ಗೆಳೆಯ ಇಯಾನ್ ಮತ್ತು ನನ್ನ ಗೌರವಾರ್ಥವಾಗಿ ​ನಾಮಕರಣ ಮಾಡಿರುವ ಟ್ರೋಫಿಯನ್ನು ಹೊಂದಿರುವುದು ನಿಜವಾಗಿಯೂ ನನ್ನಲ್ಲಿ ವಿಶೇಷ ಭಾವನೆ ಉಂಟುಮಾಡಿದೆ. ನಾವು ಒಟ್ಟಿಗೆ ಸಾಕಷ್ಟು ಕ್ರಿಕೆಟ್ ಆಡಿದ್ದೇವೆ ಮತ್ತು ಮೈದಾನದ ಒಳಗೆ ಮತ್ತು ಹೊರಗೆ ಉತ್ತಮ ಸ್ನೇಹತ್ವ ನಿರ್ಮಿಸಿದ್ದೇವೆ ಎಂದು ರಿಚರ್ಡ್ಸ್​ ತಿಳಿಸಿದ್ದಾರೆ.

ಮಾತು ಮುಂದುವರಿಸಿದ ಅವರು, "ನಾನು ಮೊದಲೇ ಹೇಳಿದಂತೆ, ನನ್ನ ಜೀವನದುದ್ದಕ್ಕೂ ನಾನು ಪ್ರೀತಿಸಿದ ಆಟಕ್ಕೆ ನನ್ನ ಕೊಡುಗೆಯನ್ನು ಗುರುತಿಸಿ ಇಂತಹ ಪ್ರತಿಷ್ಠಿತ ಪ್ರಶಸ್ತಿಗೆ ನನ್ನ ಹೆಸರಿಡುತ್ತಿರುವುದಕ್ಕೆ ನನಗೆ ನಿಜವಾಗಿಯೂ ಸಂತೋಷವಾಗಿದೆ. ಇದೊಂದು ಸುಂದರವಾದ ಟ್ರೋಫಿಯಾಗಿದೆ ಮತ್ತು ಈ ಆಲೋಚನೆ ಮಾಡಿದ ಮತ್ತು ಅದರ ರಚನೆಗೆ ಕೊಡುಗೆ ನೀಡಿದ ಎಲ್ಲರಿಗೂ ಧನ್ಯವಾದ ಹೇಳಲು ಬಯಸುತ್ತೇನೆ" ಎಂದು ರಿಚರ್ಡ್ಸ್​ ಹೇಳಿದ್ದಾರೆ.

ಇಯಾನ್ ಬಾಥಮ್ ಪ್ರತಿಕ್ರಿಯಿಸಿ, "ಈ ಟ್ರೋಫಿಗೆ ನನ್ನ ಸ್ನೇಹಿತ ಸರ್​ ವಿವಿ ಜೊತೆಗೆ ನನ್ನ ಹೆಸರನ್ನಿಟ್ಟಿರುವುದು ನನಗೆ ಸಿಕ್ಕಿರುವ ದೊಡ್ಡ ಗೌರವ. ಇದೊಂದು ಒಳ್ಳೆಯ ಮತ್ತು ಸುಂದರವಾದ ಟ್ರೋಫಿ. ಮುಂಬರುವ ಸರಣಿಯ ಅಂತ್ಯದಲ್ಲಿ ಇದನ್ನು ಹಿಡಿಯುವ ನಾಯಕ ಅದೃಷ್ಟವಂತ" ಎಂದರು.

ವೆಸ್ಟ್​ ಇಂಡೀಸ್ ಮತ್ತು ಇಂಗ್ಲೆಂಡ್ ನಡುವೆ ನಡೆಯುವ ಈ ಟ್ರೋಫಿಯನ್ನು ಎರಡೂ ದೇಶಗಳ ಸಾರ್ವಕಾಲಿಕ ಕ್ರಿಕೆಟಿಗರಾದ ರಿಚರ್ಡ್ಸ್ ಮತ್ತು ಬಾಥಮ್​ ಅವರಿಗೆ ಅರ್ಪಿಸಲಾಗಿದೆ. ಮಾರ್ಚ್​ 12 ರಿಂದ ವಿಂಡೀಸ್ ಮತ್ತು ಇಂಗ್ಲೆಂಡ್​ ನಡುವೆ ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದೆ.

ಇದನ್ನೂ ಓದಿ:ರೋಹಿತ್ ಶರ್ಮಾ ನಾಯಕತ್ವಕ್ಕೆ 10ಕ್ಕೆ 9.5 ಅಂಕ ನೀಡುವೆ: ಗವಾಸ್ಕರ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.