ಕ್ವೀನ್ಸ್ಲ್ಯಾಂಡ್: ಭಾರತ ಮಹಿಳಾ ತಂಡದ ವಿಕೆಟ್ ಕೀಪರ್ ಬ್ಯಾಟರ್ ರಿಚಾ ಘೋಷ್ ನ್ಯೂಜಿಲ್ಯಾಂಡ್ ವಿರುದ್ಧ ನಡೆದ 4ನೇ ಏಕದಿನ ಪಂದ್ಯದಲ್ಲಿ ಭಾರತದ ಪರ ವೇಗದ ಅರ್ಧಶತಕ ಸಿಡಿಸಿದ ದಾಖಲೆಗೆ ಪಾತ್ರರಾಗಿದ್ದಾರೆ.
ಮಳೆಯಿಂದ 20 ಓವರ್ಗಳಿಗೆ ನಡೆದ ಪಂದ್ಯದಲ್ಲಿ ಕಿವೀಸ್ ನೀಡಿದ್ದ 192 ರನ್ಗಳ ಬೆನ್ನಟ್ಟುವ ವೇಳೆ ರಿಚಾ ಈ ಸಾಧನೆ ಮಾಡಿದರು. ಭಾರತ 19ಕ್ಕೆ 4 ವಿಕೆಟ್ ಕಳೆದುಕೊಂಡಿದ್ದ ವೇಳೆ ಕ್ರೀಸ್ಗೆ ಆಗಮಿಸಿದ ರಿಚಾ ಕೇವಲ 26 ಎಸೆತಗಳಲ್ಲಿ 50 ರನ್ ಬಾರಿಸಿದರು. ಅವರು ಒಟ್ಟಾರೆ ಪಂದ್ಯದಲ್ಲಿ 29 ಎಸೆತಗಳಲ್ಲಿ ತಲಾ 4 ಸಿಕ್ಸರ್ ಮತ್ತು ಬೌಂಡರಿ ಸಹಿತ 52 ರನ್ಗಳಿಸಿ ವಿಕೆಟ್ ಒಪ್ಪಿಸಿದರು.
ಬ್ಯಾಟಿಂಗ್ ಮತ್ತು ಬೌಲಿಂಗ್ ವೈಫಲ್ಯ ಅನುಭವಿಸಿದ ಭಾರತ ಮಹಿಳಾ ತಂಡ 128 ರನ್ಗಳಿಗೆ ಆಲೌಟ್ ಆಗುವ ಮೂಲಕ 63 ರನ್ಗಳ ಹೀನಾಯ ಸೋಲು ಕಂಡಿತು. ಜೊತೆಗೆ 0-4ರಲ್ಲಿ ಇನ್ನಿಂಗ್ಸ್ ಹಿನ್ನಡೆ ಅನುಭವಿಸಿತು.
ಏಕದಿನ ಪಂದ್ಯಗಳಲ್ಲಿ ವೇಗದ ಅರ್ಧಶತಕ ಸಿಡಿಸಿದ ಭಾರತೀಯರು
- ರಿಚಾ ಘೋಷ್- 26 ಎಸೆತ
- ವೇದಾ ಕೃಷ್ಣಮೂರ್ತಿ-32 ಎಸೆತ
- ಸಬ್ಭಿನೇನಿ ಮೇಘನಾ-33 ಎಸೆತ
- ವೇದಾ ಕೃಷ್ಣಮೂರ್ತಿ-34 ಎಸೆತ
ಇದನ್ನೂ ಓದಿ:watch : ಸೋಫಿ ಡಿವೈನ್ ಔಟ್ ಮಾಡಲು ಸ್ಮೃತಿ ಮಂಧಾನ ಸ್ಟನ್ನಿಂಗ್ ಕ್ಯಾಚ್