ETV Bharat / sports

ಸ್ಪಿನ್ ಮಾಂತ್ರಿಕ ಶೇನ್ ವಾರ್ನ್ ನಿಧನಕ್ಕೆ ಸಂತಾಪ ಸೂಚಿಸಿದ ಬಾಲಿವುಡ್​ ಸೆಲೆಬ್ರಿಟಿಗಳು - ಶೇನ್ ವಾರ್ನ್ ನಿಧನಕ್ಕೆ ಸಂತಾಪ ಸೂಚಿಸಿದ ಬಾಲಿವುಡ್​ ಸೆಲೆಬ್ರಿಟಿಗಳು

ಸ್ಪಿನ್ ಮಾಂತ್ರಿಕ ಶೇನ್ ವಾರ್ನ್ ಅಕಾಲಿಕ ನಿಧನಕ್ಕೆ ಅಭಿಮಾನಿಗಳು, ರಾಜಕಾರಣಿಗಳು ಮತ್ತು ಚಿತ್ರರಂಗದ ಗಣ್ಯರು ಸಾಮಾಜಿಕ ಜಾಲತಾಣಗಳಲ್ಲಿ ಸಂತಾಪ ಸೂಚಿಸಿದ್ದಾರೆ.

Shane Warne
ಸ್ಪಿನ್ ಮಾಂತ್ರಿಕ ಶೇನ್ ವಾರ್ನ್
author img

By

Published : Mar 5, 2022, 12:36 PM IST

ನವದೆಹಲಿ: ಆಸ್ಟ್ರೇಲಿಯಾದ ದಂತ ಕಥೆ 'ಶೇನ್ ವಾರ್ನ್' ಅವರ ಅಕಾಲಿಕ ನಿಧನಕ್ಕೆ ಈಗ ಇಡೀ ಕ್ರಿಕೆಟ್ ಜಗತ್ತೇ ಆಘಾತಕ್ಕೆ ಒಳಗಾಗಿದೆ. ಅವರ ನಿಧನಕ್ಕೆ ಭಾರತೀಯ ಚಿತ್ರರಂಗದ ಸೆಲೆಬ್ರಿಟಿಗಳು ತೀವ್ರ ಸಂತಾಪ ಸೂಚಿಸಿದ್ದಾರೆ. ಈ ಸುದ್ದಿಯು ನನ್ನಂತಹ ಲಕ್ಷಾಂತರ ಜನರನ್ನು ಆಘಾತ ಮತ್ತು ಅಪನಂಬಿಕೆಗೆ ಒಳಪಡಿಸಿದೆ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹಿರಿಯ ನಟ 'ಅನಿಲ್ ಕಪೂರ್' ಟ್ವೀಟ್ ಮಾಡಿದ್ದಾರೆ.

'ಶೇನ್​ ವಾರ್ನ್​ ಅವರ ಅಕಾಲಿಕ ಮರಣದ ಸುದ್ದಿ ತಿಳಿದು ಮಾತು ಬಾರದಂತೆ ಆಗಿದೆ. ಓಂ ಶಾಂತಿ’ ಎಂದು ಅಕ್ಷಯ್​ ಕುಮಾರ್​ ಟ್ವೀಟ್​ ಮಾಡಿದ್ದಾರೆ. ಇದು ಹೇಗೆ ನಿಜ?. ಈ ವಿಚಾರ ಸಂಪೂರ್ಣವಾಗಿ ಆಘಾತಕಾರಿ ಎಂದು ರಾಷ್ಟ್ರಪ್ರಶಸ್ತಿ ವಿಜೇತ ನಟ ಮನೋಜ್ ಬಾಜಪೇಯಿ ಕೂಡ ಟ್ವೀಟ್ ಮಾಡಿದ್ದಾರೆ.

  • Speechless to know about #ShaneWarne’s untimely passing. You could not have loved the game of cricket without being in complete awe of the man. This is so heartbreaking. Om Shanti 🙏🏻

    — Akshay Kumar (@akshaykumar) March 4, 2022 " class="align-text-top noRightClick twitterSection" data=" ">

ಶ್ರೇಷ್ಠ ಸ್ಪಿನ್ ಬೌಲರ್‌ಗಳಲ್ಲಿ ಒಬ್ಬರ ಅನಿರೀಕ್ಷಿತ ನಿಧನದ ಬಗ್ಗೆ ತಿಳಿದು ತೀವ್ರ ಆಘಾತ ಮತ್ತು ದುಃಖವಾಗಿದೆ ಎಂದು ಹಿರಿಯ ಸ್ಟಾರ್ ಅನುಪಮ್ ಖೇರ್ ಹೇಳಿದ್ದಾರೆ. ಲಂಡನ್ ಹೋಟೆಲ್ ಲಾಬಿಯಲ್ಲಿ ಅವರನ್ನು ಭೇಟಿಯಾಗುವ ಅವಕಾಶ ನನಗೆ ಸಿಕ್ಕಿತು. ನಾವು ನಿಮ್ಮ ತೇಜಸ್ಸನ್ನು ಕಳೆದುಕೊಂಡಿದ್ದೇವೆ ಎಂದು ಅವರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಆಸ್ಟ್ರೇಲಿಯಾದ ಕ್ರಿಕೆಟ್ ದಂತಕಥೆ ಶೇನ್​ ವಾರ್ನ್ ಹೃದಯಾಘಾತದಿಂದ ನಿಧನ

'ಲೆಜೆಂಡ್​ಗಳು ಸದಾ ಜೀವಂತವಾಗಿರುತ್ತಾರೆ' ಎಂದು ಹೇಳಿರುವ ಶಿಲ್ಪಾ ಶೆಟ್ಟಿ ತಮ್ಮ ಇನ್‌ಸ್ಟಾಗ್ರಾಮ್ ನಲ್ಲಿ ಶೇನ್​ ವಾರ್ನ್​ ಜೊತೆಗಿನ ಫೋಟೋವನ್ನು ಶೇರ್​ ಮಾಡಿಕೊಂಡಿದ್ದಾರೆ. ಅಲ್ಲದೇ, ಅಜಯ್ ದೇವಗನ್, ವರುಣ್ ಧವನ್, ರಣವೀರ್ ಸಿಂಗ್, ಅರ್ಜುನ್ ರಾಂಪಾಲ್, ಅರ್ಜುನ್ ಕಪೂರ್ ಮತ್ತು ಶಿಬಾನಿ ದಾಂಡೇಕರ್ ಸೇರಿದಂತೆ ಚಿತ್ರರಂಗದ ಸೆಲೆಬ್ರಿಟಿಗಳು ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ದಿಗ್ಗಜ ಕ್ರಿಕೆಟಿಗನ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಆಸ್ಟ್ರೇಲಿಯಾದ ಕ್ರಿಕೆಟ್‌ ದಂತಕಥೆ ಶೇನ್​ ವಾರ್ನ್ ಶುಕ್ರವಾರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಸಾರ್ವಕಾಲಿಕ ಶ್ರೇಷ್ಠ ಲೆಗ್​ ಸ್ಪಿನ್ನರ್​​ ಆಗಿದ್ದ ಶೇನ್​ ವಾರ್ನ್​​ ಕ್ರಿಕೆಟ್​​ ಜಗತ್ತಿನಲ್ಲೇ ತಮ್ಮದೇ ಆದ ಛಾಪು ಮೂಡಿಸಿದ್ದರು. 16 ವರ್ಷಗಳ ಕ್ರಿಕೆಟ್​ ಬದುಕಿನಲ್ಲಿ ವಾರ್ನ್ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್​ಗಳ ಸಾಲಿನಲ್ಲಿ ಒಬ್ಬರು. ಆಸ್ಟ್ರೇಲಿಯಾ ಪರ 145 ಟೆಸ್ಟ್​​​, 194 ಏಕದಿನ ಪಂದ್ಯಗಳನ್ನಾಡಿರುವ ಇವರು, ಕ್ರಮವಾಗಿ 708, 293 ವಿಕೆಟ್ ಪಡೆದಿದ್ದಾರೆ.

ಇದನ್ನೂ ಓದಿ: 'ಭಾರತೀಯರ ಹೃದಯದಲ್ಲಿ ನಿಮಗಿದೆ ವಿಶೇಷ ಸ್ಥಾನ': ವಾರ್ನ್​ ನಿಧನಕ್ಕೆ ಸಚಿನ್​, ಕೊಹ್ಲಿ, ರೋಹಿತ್ ಸಂತಾಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.