ETV Bharat / sports

ನಮ್ಮ ಪಾಲಿನ ಆಪತ್ಪಾಂಧವ, ನಾವು ಸದಾ ನಿಮಗೆ ಚಿರಋಣಿ.. ಟ್ವೀಟ್​ ಮೂಲಕ ಆರ್​ಸಿಬಿಯಿಂದ 360 ಕೃತಜ್ಞತೆ..

author img

By

Published : Nov 20, 2021, 7:22 PM IST

ಎಬಿ ಡಿ ವಿಲಿಯರ್ಸ್​ ಆರ್​ಸಿಬಿ ಪರ 156 ಪಂದ್ಯಗಳನ್ನಾಡಿದ್ದು,4,491 ರನ್​ ಗಳಿಸಿದ್ದಾರೆ. ಆರ್​ಸಿಬಿ ಪರ ವಿರಾಟ್ ಕೊಹ್ಲಿ ಪರ ಹೆಚ್ಚುರನ್​ಗಳಿಸಿದ 2ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ..

RCB tribute special video for Ab de Villiers
ಎಬಿ ಡಿ ವಿಲಿಯರ್ಸ್ ಆರ್​ಸಿಬಿ

ಹೈದರಾಬಾದ್ : ದಕ್ಷಿಣ ಆಫ್ರಿಕಾದ ಸ್ಟಾರ್​ ಬ್ಯಾಟರ್​ ಎಬಿ ಡಿ ವಿಲಿಯರ್ಸ್​ ಶುಕ್ರವಾರ ಎಲ್ಲಾ ಮಾದರಿಯ ಕ್ರಿಕೆಟ್​ಗೆ ವಿದಾಯ ಹೇಳಿದ್ದಾರೆ. 10 ವರ್ಷಗಳಿಂದ ಫ್ರಾಂಚೈಸಿ ಪರ ಆಡಿದ್ದ ಎಬಿಡಿ ನಿವೃತ್ತಿಗೆ ಗೌರವ ಸಚಿಸಿರುವ ಆರ್​ಸಿಬಿ ಸರಣಿ ಟ್ವೀಟ್​ಗಳ ಮೂಲಕ ಧನ್ಯವಾದ ಅರ್ಪಿಸಿದೆ.

ಎಬಿ ಡಿ ವಿಲಿಯರ್ಸ್​ ಆರ್​ಸಿಬಿ ಪರ 156 ಪಂದ್ಯಗಳನ್ನಾಡಿದ್ದು,4,491 ರನ್​ಗಳಸಿದ್ದಾರೆ. ಆರ್​ಸಿಬಿ ಪರ ವಿರಾಟ್ ಕೊಹ್ಲಿ ನಂತರ ಹೆಚ್ಚು ರನ್​ಗಳಿಸಿದ 2ನೇ ಬ್ಯಾಟರ್ ಎನಿಸಿದ್ದಾರೆ.

ನಿವೃತ್ತಿ ಘೋಷಿಸಿದ ಬಳಿಕ ಆರ್​ಸಿಬಿ ಬಗ್ಗೆ ಮಾತನಾಡಿದ್ದ ವಿಲಿಯರ್ಸ್, ಸತತ 11 ವರ್ಷಗಳ ಕಾಲ ಆರ್​ಸಿಬಿಯಲ್ಲಿ ಆಡಿದ್ದು, ಇದೀಗ ಬಿಟ್ಟು ಹೋಗುವುದು ನಿಜಕ್ಕೂ ತುಂಬಾ ಕಷ್ಟವಾಗುತ್ತಿದೆ. ಈ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಸುದೀರ್ಘ ಚಿಂತನೆ ಮಾಡಿದ್ದೇನೆ.

ನನ್ನ ಮುಂದಿನ ಸಮಯವನ್ನು ಕುಟುಂಬದ ಜೊತೆ ಕಳೆಯಲು ಬಯಸಿದ್ದೇನೆ. ಇಷ್ಟು ವರ್ಷಗಳ ಕಾಲ ನನ್ನ ಮೇಲೆ ನಂಬಿಕೆಯಿಟ್ಟು ವಿಶ್ವಾಸ ತೋರಿಸಿದ ಆರ್​ಸಿಬಿ ಮ್ಯಾನೇಜ್​ಮೆಂಟ್​ ಮತ್ತು ನನ್ನ ಗೆಳೆಯ ವಿರಾಟ್ ಕೊಹ್ಲಿ ಮತ್ತು ಸಿಬ್ಬಂದಿ ಹಾಗೂ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ವಿಲಿಯರ್ಸ್ ಆರ್​ಸಿಬಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದ ವಿಡಿಯೋದಲ್ಲಿ ಭಾವುಕರಾಗಿ ನುಡಿದಿದ್ದರು.

  • “I’m going to be an RCBian for life. Every single person in the RCB set-up has become family to me. People come & go, but the spirit & the love we have for each other at RCB will always remain. I’ve become half Indian now & I’m proud of that.” - @ABdeVilliers17 #ThankYouAB pic.twitter.com/5b6RUYfjDY

    — Royal Challengers Bangalore (@RCBTweets) November 19, 2021 " class="align-text-top noRightClick twitterSection" data=" ">

ಶನಿವಾರ ರಾಯಲ್​ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಕೂಡ ಎಬಿಡಿ ಅವರ 11 ವರ್ಷಗಳ ಕೆಲವು ಅವಿಸ್ಮರಣೀಯ ಕ್ಷಣಗಳನ್ನು ಸರಣಿ ಟ್ವೀಟ್​ಗಳ ಮೂಲಕ ಹಂಚಕೊಂಡಿದೆ. 2 ನಿಮಿಷ 20 ಸೆಕೆಂಡ್​ಗಳ ವಿಡಿಯೋದಲ್ಲಿ ಎಬಿಡಿ ಅವರ ಬ್ಯಾಟಿಂಗ್, ಕೊಹ್ಲಿ ಜೊತೆಗಿನ ಸಂದರ್ಶನ, ಎಬಿಡಿ ಜನ್ಮದಿನ ಆಚರಣೆ ಸೇರಿದಂತೆ ಪ್ರಮುಖ ಕ್ಷಣಗಳು ಸೇರಿವೆ.

ಮತ್ತೊಂದು ಟ್ವೀಟ್​ನಲ್ಲಿ " ನಮ್ಮ ಪಾಲಿನ ಆಪದ್ಬಾಂಧವ!, ನಾವು ಯಾವಾಗಲೂ ನಿಮಗೆ ಚಿರಋಣಿ. ಧನ್ಯವಾದಗಳು! ಎಂದು ಬರೆದುಕೊಂಡಿದೆ. ಈ ಟ್ವೀಟ್​ಗೆ ಪ್ರತಿಕ್ರಿಯೆ ನೀಡಿರುವ ಎಬಿಡಿ ಅದ್ಭುತವಾದ ಕ್ಷಣಗಳು ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನು ಓದಿ:'ನಾನು ಅರ್ಧ ಭಾರತೀಯ, ಅದು ನನ್ನ ಹೃದಯದಲ್ಲಿದೆ' ಭಾರತದ ಬಗ್ಗೆ ಎಬಿಡಿ ವಿಶೇಷ ಮಾತು ಕೇಳಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.