ದುಬೈ: ಟಿ-20 ವಿಶ್ವಕಪ್ ಕ್ವಾಲಿಫೈಯರ್ನಲ್ಲಿ ಪಾಲ್ಗೊಳ್ಳುವುದಕ್ಕೆ ಕರೆ ಬಂದ ಹಿನ್ನೆಲೆ ಶ್ರೀಲಂಕಾದ ಆಲ್ರೌಂಡರ್ ವನಿಡು ಹಸರಂಗ ಮತ್ತು ವೇಗಿ ಚಮೀರಾ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಬಯೋಬಬಲ್ನಿಂದ ಬಿಡುಗಡೆ ಮಾಡಿದೆ.
ಸೋಮವಾರ ಆರ್ಸಿಬಿ ತನ್ನ ಎಲಿಮಿನೇಟರ್ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಎದುರಿಸುತ್ತಿದೆ. ಆದರೆ, ರಾಷ್ಟ್ರೀಯ ತಂಡಕ್ಕೆ ಪ್ರಾಮುಖ್ಯತೆ ನೀಡಬೇಕಾಗಿರುವುದರಿಂದ ಹಸರಂಗ ಮತ್ತು ಚಮೀರಾರನ್ನು ಬಿಡುಗಡೆ ಮಾಡಿದೆ. ತಂಡದಲ್ಲಿ ವಿದೇಶಿಗರು ಸಾಕಷ್ಟು ಮಂದಿ ಇರುವುದರಿಂದ ಇವರಿಬ್ಬರು ಹೊರ ಹೋಗುವುದು ಆರ್ಸಿಬಿಗೆ ದೊಡ್ಡ ಹೊಡೆತವಾಗುವುದಿಲ್ಲ.
" ವನಿಡು ಹಸರಂಗ ಮತ್ತು ದುಷ್ಮಂತ ಚಮೀರಾ ಅವರನ್ನು ಆರ್ಸಿಬಿ ಬಯೋಬಬಲ್ನಿಂದ ಬಿಡುಗಡೆ ಮಾಡಲಿದೆ. ಅವರಿಬ್ಬರು ವಿಶ್ವಕಪ್ ಕ್ವಾಲಿಫೈಯರ್ನಲ್ಲಿ ಶ್ರೀಲಂಕಾ ತಂಡವನ್ನು ಸೇರಿಕೊಳ್ಳಲಿದ್ದಾರೆ. ಅವರಿಬ್ಬರು 2021ರ ವೇಳೆ ಇಲ್ಲಿಗೆ ಆಗಮಿಸಿ ವೃತ್ತಿಪರತೆ ಮೆರೆದಿದ್ದಕ್ಕೆ ಮತ್ತು ಕಠಿಣ ಶ್ರಮವಹಿಸಿದ್ದಕ್ಕೆ ಫ್ರಾಂಚೈಸಿ ಧನ್ಯವಾದ ಹೇಳುತ್ತದೆ. ಜೊತೆಗೆ ಅವರಿಬ್ಬರಿಗೂ ಮುಂಬರುವ ವಿಶ್ವಕಪ್ಗೆ ಶುಭ ಕೋರುತ್ತೇವೆ" ಆರ್ಸಿಬಿ ತಮ್ಮ ಟ್ವಿಟರ್ನಲ್ಲಿ ಹಂಚಿಕೊಂಡಿದೆ.
ಹಸರಂಗ ಮತ್ತು ಚಮೀರಾ ಯುಎಇಯ ಎರಡನೇ ಹಂತದ ಐಪಿಎಲ್ಗೆ ಬದಲಿ ಆಟಗಾರರಾಗಿ ಆರ್ಸಿಬಿಗೆ ಸೇರಿಕೊಂಡಿದ್ದರು.